ವೈದ್ಯರು-ಸಿಬ್ಬಂದಿಯ ಸೇವೆ ಮನ್ನಿಸಿ, ವೈದ್ಯಲೋಕಕ್ಕೆ Super Gift ಕೊಟ್ಟ BSY!

ಸಾಧು ಶ್ರೀನಾಥ್​

|

Updated on:May 18, 2020 | 8:37 PM

ಬೆಂಗಳೂರು: ಹಗಲು ರಾತ್ರಿ ಎನ್ನದೆ ರಾಜ್ಯದಲ್ಲಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ರಾಜ್ಯದ ವೈದ್ಯರು, ವೈದ್ಯಕೀಯ ಸಿಬ್ಬಂದಿಗೆ ಸಚಿವ‌ ಡಾ. ಕೆ.ಸುಧಾಕರ್ ಸಿಹಿ ಸುದ್ದಿ ನೀಡಿದ್ದಾರೆ. ಇವರ ಸೇವೆ ಮನ್ನಿಸಿ, ವೇತನ ಪರಿಷ್ಕರಣೆಗೆ ರಾಜ್ಯ ಸರಕಾರ ಮುಂದಾಗಿದೆ. ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್ ಸೇರಿದಂತೆ ವೈದ್ಯಕೀಯ ಇಲಾಖೆ ಬೋಧಕ ಸಿಬ್ಬಂದಿಗೆ 7ನೇ ವೇತನ ಆಯೋಗದ ಅನ್ವಯ ವೇತನ ಪರಿಷ್ಕರಣೆಗೆ ಸರ್ಕಾರ ಮುಂದಾಗಿದೆ. ಇದರಿಂದ 2,500 ಸಿಬ್ಬಂದಿಗೆ ಅನುಕೂಲವಾಗಲಿದೆ. 137 ಕೋಟಿ ಹೆಚ್ಚುವರಿ ಹೊರೆಯಾಗಲಿದೆ. ವೈದ್ಯಕೀಯ ವಿದ್ಯಾರ್ಥಿಗಳಿಗೂ ಗಿಫ್ಟ್: ಇದರ […]

ವೈದ್ಯರು-ಸಿಬ್ಬಂದಿಯ ಸೇವೆ ಮನ್ನಿಸಿ, ವೈದ್ಯಲೋಕಕ್ಕೆ Super Gift ಕೊಟ್ಟ BSY!

ಬೆಂಗಳೂರು: ಹಗಲು ರಾತ್ರಿ ಎನ್ನದೆ ರಾಜ್ಯದಲ್ಲಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ರಾಜ್ಯದ ವೈದ್ಯರು, ವೈದ್ಯಕೀಯ ಸಿಬ್ಬಂದಿಗೆ ಸಚಿವ‌ ಡಾ. ಕೆ.ಸುಧಾಕರ್ ಸಿಹಿ ಸುದ್ದಿ ನೀಡಿದ್ದಾರೆ. ಇವರ ಸೇವೆ ಮನ್ನಿಸಿ, ವೇತನ ಪರಿಷ್ಕರಣೆಗೆ ರಾಜ್ಯ ಸರಕಾರ ಮುಂದಾಗಿದೆ.

ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್ ಸೇರಿದಂತೆ ವೈದ್ಯಕೀಯ ಇಲಾಖೆ ಬೋಧಕ ಸಿಬ್ಬಂದಿಗೆ 7ನೇ ವೇತನ ಆಯೋಗದ ಅನ್ವಯ ವೇತನ ಪರಿಷ್ಕರಣೆಗೆ ಸರ್ಕಾರ ಮುಂದಾಗಿದೆ. ಇದರಿಂದ 2,500 ಸಿಬ್ಬಂದಿಗೆ ಅನುಕೂಲವಾಗಲಿದೆ. 137 ಕೋಟಿ ಹೆಚ್ಚುವರಿ ಹೊರೆಯಾಗಲಿದೆ.

ವೈದ್ಯಕೀಯ ವಿದ್ಯಾರ್ಥಿಗಳಿಗೂ ಗಿಫ್ಟ್: ಇದರ ಜೊತೆಗೆ ಹೌಸ್​ ಸರ್ಜನ್, ಪಿಜಿ ವಿದ್ಯಾರ್ಥಿಗಳು, ಸೂಪರ್ ಸ್ಪೆಷಾಲಿಟಿ ವೈದ್ಯಕೀಯ ವಿದ್ಯಾರ್ಥಿಗಳು, ಸೀನಿಯರ್ ರೆಸಿಡೆಂಟ್ಸ್, ಫೆಲೋಶಿಪ್ ವಿದ್ಯಾರ್ಥಿಗಳ ವೇತನ ಶೇಕಡಾ 40ರಷ್ಟು ಹೆಚ್ಚಳ ಮಾಡಲು ಸರ್ಕಾರ ನಿರ್ಧರಿಸಿದೆ. ಇದರಿಂದ ಹೆಚ್ಚುವರಿ 78 ಕೋಟಿ‌ ರೂ. ಹೊರೆಯಾಗುತ್ತೆ.

ಆರೋಗ್ಯ ಕಾರ್ಯಕರ್ತರಿಗೆ ಒಟ್ಟು 256 ಕೋಟಿ ಗಿಫ್ಟ್ ನೀಡಿದ್ದು,  ರೆಸಿಡೆನ್ಶಿಯಲ್ ವೈದ್ಯರಿಗೆ ಸ್ಟೈಫಂಡ್​​ 20-30 ಸಾವಿರ ರೂ. ಗೆ ಹೆಚ್ವಳವಾಗಲಿದೆ. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 30-40 ಸಾವಿರಕ್ಕೆ ಏರಿಕೆಯಾಗುತ್ತೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ. ಕೆ.ಸುಧಾಕರ್ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ವೇಳೆ ತಿಳಿಸಿದ್ರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada