ಬಸ್ ಸಂಚಾರಕ್ಕೆ ಕೌಂಟ್ ಡೌನ್, ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಕಾದು ಕುಳಿತ ಪ್ರಯಾಣಿಕರು
ಬೆಂಗಳೂರು: 55 ದಿನಗಳ ನಂತರ ಇಂದು ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ಗಳು ತಮ್ಮ ಸಂಚಾರ ಶುರು ಮಾಡಲಿವೆ. ಲಾಕ್ಡೌನ್ನಿಂದಾಗಿ ಮನೆಯಲ್ಲೇ ಕೂತಿದ್ದ ಬಹುತೇಕ ಮಂದಿಯೆಲ್ಲಾ ಇಂದು ಬಸ್ ನಿಲ್ದಾಣಗಳಿಗೆ ಧಾವಿಸಿದ್ದಾರೆ. ಬೆಳಗ್ಗೆ 7ರಿಂದ ಸಂಜೆ 7ಗಂಟೆವರೆಗೂ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಹೀಗಾಗಿ ಪ್ರಯಾಣಿಕರು ಬೆಳಗ್ಗೆ 5 ಗಂಟೆಯಿಂದಲೇ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಬಸ್ಗಾಗಿ ಕಾದು ಕೊಳಿತಿದ್ದಾರೆ. ರಾಜ್ಯಾದ್ಯಂತ ಬಸ್ ಸೇವೆ ಆರಂಭಿಸಲು ಸಿದ್ಧತೆಗಳು ಶುರು ಆಗಿವೆ. ಪ್ರತಿ ಬಸ್ನಲ್ಲಿ 30 ಜನ್ರಿಗೆ ಮಾತ್ರ […]
ಬೆಂಗಳೂರು: 55 ದಿನಗಳ ನಂತರ ಇಂದು ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ಗಳು ತಮ್ಮ ಸಂಚಾರ ಶುರು ಮಾಡಲಿವೆ. ಲಾಕ್ಡೌನ್ನಿಂದಾಗಿ ಮನೆಯಲ್ಲೇ ಕೂತಿದ್ದ ಬಹುತೇಕ ಮಂದಿಯೆಲ್ಲಾ ಇಂದು ಬಸ್ ನಿಲ್ದಾಣಗಳಿಗೆ ಧಾವಿಸಿದ್ದಾರೆ. ಬೆಳಗ್ಗೆ 7ರಿಂದ ಸಂಜೆ 7ಗಂಟೆವರೆಗೂ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಹೀಗಾಗಿ ಪ್ರಯಾಣಿಕರು ಬೆಳಗ್ಗೆ 5 ಗಂಟೆಯಿಂದಲೇ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಬಸ್ಗಾಗಿ ಕಾದು ಕೊಳಿತಿದ್ದಾರೆ. ರಾಜ್ಯಾದ್ಯಂತ ಬಸ್ ಸೇವೆ ಆರಂಭಿಸಲು ಸಿದ್ಧತೆಗಳು ಶುರು ಆಗಿವೆ.
ಪ್ರತಿ ಬಸ್ನಲ್ಲಿ 30 ಜನ್ರಿಗೆ ಮಾತ್ರ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಹಾಗೇ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಡಬಲ್ ಸೀಟ್ನಲ್ಲಿ ಒಬ್ಬರು, 3 ಆಸನದ ಸೀಟ್ನಲ್ಲಿ ಇಬ್ಬರು ಮಾತ್ರ ಕೂರಬೇಕು. ಹಾಗೇ, ಬಸ್ ಹತ್ತುವ ಮುನ್ನ ಥರ್ಮಲ್ ಸ್ಕ್ಯಾನ್, ಕೈಗೆ ಸ್ಯಾನಿಟೈಸರ್ ಹಾಕಿಕೊಳ್ಳಬೇಕು.
ಬಸ್ನಲ್ಲಿ ನಿಂತು ಪ್ರಯಾಣಿಸಲು ಜನರಿಗೆ ಅವಕಾಶ ಇಲ್ಲ. ಹಾಗೇ, ಕಂಟೇನ್ಮೆಂಟ್ ಜೋನ್ಗಳಲ್ಲಿ ಬಸ್ ನಿಲ್ಲಿಸುವಂತಿಲ್ಲ. ಇನ್ನು, ಪ್ರಯಾಣಿಕರು ತಮ್ಮ ವಿಳಾಸ, ಹೆಸರು ಮೊಬೈಲ್ ಸಂಖ್ಯೆಯನ್ನ ನಮೂದಿಸಬೇಕು. ಹಾಗೂ ಗುರುತಿನ ಚೀಟಿಯನ್ನ ಕಂಡೆಕ್ಟರ್ಗೆ ಕಡ್ಡಾಯವಾಗಿ ನೀಡಿ ಪ್ರಯಾಣಿಸಬೇಕು ಎಂದು ನಿಯಮ ಹೊರಡಿಸಲಾಗಿದೆ.
Published On - 6:57 am, Tue, 19 May 20