ಕುಂಬಳಕಾಯಿ ಒಡೆದು ಬಸ್ ಸೇವೆ ಪುನರಾರಂಭ
ಬೆಂಗಳೂರು: ಲಾಕ್ಡೌನ್ ನಡುವೆ ಬಂಧಿಯಾಗಿದ್ದ ಕೆಎಸ್ಆರ್ಟಿಸಿ ಬಸ್ಗಳು ಇವತ್ತು ರಸ್ತೆಗಿಳೀತಿವೆ. 55 ದಿನಗಳ ಬಳಿಕ ಮತ್ತೆ ಬಸ್ ಸಂಚಾರ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಕುಂಬಳಕಾಯಿ ಒಡೆದು ಅರ್ಚಕರನ್ನ ಕರೆಸಿ ಪೂಜೆ ಸಲ್ಲಿಸಲಾಗಿದೆ. ಪ್ರಯಾಣಿಕರನ್ನ ಕರೆದೊಯ್ಯೋಕೆ ಬಸ್ಗಳು ಸರ್ವಸನ್ನದ್ಧವಾಗಿವೆ. ಇಂದು ಸುಮಾರು 1,500 ಕೆಎಸ್ಆರ್ಟಿಸಿ ಬಸ್ಗಳು ಸಂಚಾರ ಆರಂಭಿಸಲಿವೆ. ಬಸ್ ಪ್ರಯಾಣ ದರದಲ್ಲಿ ಯಾವುದೇ ಹೆಚ್ಚಳವಿಲ್ಲ. ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಮಾತ್ರ ಓಡಾಟ ಇರುತ್ತದೆ. ಕಂಟೇನ್ಮೆಂಟ್ ಜೋನ್ಗಳಲ್ಲಿ ಬಸ್ ಸಂಚಾರವಿಲ್ಲ. ಸರ್ಕಾರದ ಅದೇಶ […]
ಬೆಂಗಳೂರು: ಲಾಕ್ಡೌನ್ ನಡುವೆ ಬಂಧಿಯಾಗಿದ್ದ ಕೆಎಸ್ಆರ್ಟಿಸಿ ಬಸ್ಗಳು ಇವತ್ತು ರಸ್ತೆಗಿಳೀತಿವೆ. 55 ದಿನಗಳ ಬಳಿಕ ಮತ್ತೆ ಬಸ್ ಸಂಚಾರ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಕುಂಬಳಕಾಯಿ ಒಡೆದು ಅರ್ಚಕರನ್ನ ಕರೆಸಿ ಪೂಜೆ ಸಲ್ಲಿಸಲಾಗಿದೆ.
ಪ್ರಯಾಣಿಕರನ್ನ ಕರೆದೊಯ್ಯೋಕೆ ಬಸ್ಗಳು ಸರ್ವಸನ್ನದ್ಧವಾಗಿವೆ. ಇಂದು ಸುಮಾರು 1,500 ಕೆಎಸ್ಆರ್ಟಿಸಿ ಬಸ್ಗಳು ಸಂಚಾರ ಆರಂಭಿಸಲಿವೆ. ಬಸ್ ಪ್ರಯಾಣ ದರದಲ್ಲಿ ಯಾವುದೇ ಹೆಚ್ಚಳವಿಲ್ಲ. ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಮಾತ್ರ ಓಡಾಟ ಇರುತ್ತದೆ. ಕಂಟೇನ್ಮೆಂಟ್ ಜೋನ್ಗಳಲ್ಲಿ ಬಸ್ ಸಂಚಾರವಿಲ್ಲ. ಸರ್ಕಾರದ ಅದೇಶ ಪಾಲಿಸುವುದು ಕಡ್ಡಾಯವಾಗಿದೆ.
Published On - 7:43 am, Tue, 19 May 20