ತಂತ್ರದಿಂದ ಗಿಲ್ಲಿ ಬಳಿ ದೊಡ್ಡ ಅವಕಾಶ ಪಡೆದ ಅಶ್ವಿನಿ; ಫಿನಾಲೆ ವಾರ ತಲುಪೋದು ಮತ್ತಷ್ಟು ಸುಲಭ
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಅಶ್ವಿನಿ ಗೌಡರನ್ನು ರಾಣಿಯಾಗಿ ಆಯ್ಕೆ ಮಾಡಿದ ನಿರ್ಧಾರ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಸಾಮಾನ್ಯವಾಗಿ ಕಾವ್ಯಾ ಪರ ನಿಲ್ಲುತ್ತಿದ್ದ ಗಿಲ್ಲಿ, ಈ ಬಾರಿ ಅಶ್ವಿನಿಗೆ ಕ್ಯಾಪ್ಟನ್ಸಿ ರೇಸ್ ಅವಕಾಶ ನೀಡಿದರು. 'ಟಾಸ್ಕ್ ಆಡಲು ಅರ್ಹರಲ್ಲದ ಮಹಿಳಾ ಸ್ಪರ್ಧಿಯನ್ನು ಆರಿಸಬೇಕು' ಎಂಬ ಬಿಗ್ ಬಾಸ್ ಸೂಚನೆ ಮತ್ತು ಅಶ್ವಿನಿ ಅವರ ಚಾಣಾಕ್ಷ ತಂತ್ರದಿಂದ ಈ ಆಯ್ಕೆ ಸಾಧ್ಯವಾಯಿತು.

ಅಶ್ವಿನಿ ಗೌಡ ಹಾಗೂ ಗಿಲ್ಲಿ ನಟ ಮಧ್ಯೆ ಆಗಾಗ ಕಿರಿಕ್ಗಳು ಆಗುತ್ತಲೇ ಇರುತ್ತವೆ. ಗಿಲ್ಲಿ ಅವರು ಅಶ್ವಿನಿ ಪರ ನಿಂತಿದ್ದು, ಅವರ ಜರ್ನಿಗೆ ಸಹಾಯ ಆಗುವಂತೆ ನಡೆದುಕೊಂಡಿದ್ದು ತುಂಬಾನೇ ಕಡಿಮೆ. ಆದರೆ, ಬಿಗ್ ಬಾಸ್ (Bigg Boss) ಫಿನಾಲೆ ವೀಕ್ನಲ್ಲಿ ಅಶ್ವಿನಿ ಗೌಡ ಅವರಿಗೆ ಗಿಲ್ಲಿ ಅವರು ದೊಡ್ಡ ಅವಕಾಶ ನೀಡಿದರು. ಈ ನಿರ್ಧಾರ ಮನೆಯ ಅನೇಕರಿಗೆ ಅಚ್ಚರಿ ತಂದಿದೆ. ಕೆಲವರಿಗೆ ಶಾಕ್ ಎನಿಸಿದೆ. ಅಷ್ಟಕ್ಕೂ ಏನು ಆ ನಿರ್ಧಾರ? ಗಿಲ್ಲಿ ಈ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು? ಆ ಬಗ್ಗೆ ಇಲ್ಲಿದೆ ವಿವರ.
ಫಿನಾಲೆಗೆ ಉಳಿದುಕೊಂಡಿರೋದು ಕೆಲವೇ ವಾರಗಳು ಮಾತ್ರ. ಹೀಗಿರುವಾಗ ಸೀಸನ್ನ ಕೊನೆಯ ಕ್ಯಾಪ್ಟನ್ ಆಯ್ಕೆ ಮಾಡಲು ಪ್ರಕ್ರಿಯೆ ಆರಂಭ ಆಯಿತು. ಗಿಲ್ಲಿ ನಟ ಈ ವಾರದ ಕ್ಯಾಪ್ಟನ್ ಆಗಿರುವುದರಿಂದ ಅವರನ್ನು ರಾಜ ಎಂದು ಬಿಗ್ ಬಾಸ್ ಘೋಷಣೆ ಮಾಡಿದರು. ಇಷ್ಟೇ ಅಲ್ಲ, ಮುಂದಿನ ಕ್ಯಾಪ್ಟನ್ಸಿ ರೇಸ್ಗೆ ಅವರು ನೇರವಾಗಿ ಆಯ್ಕೆ ಆದರು. ರಾಜನ ಆಯ್ಕೆ ಮಾಡಿದ ಮೇಲೆ ರಾಣಿನ ಆಯ್ಕೆ ಮಾಡಲೇಬೇಕಲ್ಲವೇ? ಗಿಲ್ಲಿಗೆ ರಾಣಿ ಆಯ್ಕೆ ಮಾಡುವ ಅವಕಾಶ ನೀಡಲಾಯಿತು. ಈ ವೇಳೆ ಅವರು ಆಯ್ಕೆ ಮಾಡಿದ್ದು ಅಶ್ವಿನಿ ಗೌಡ ಅವರನ್ನು.
ಕಾವ್ಯಾ ಪರವಾಗಿ ಗಿಲ್ಲಿ ಹೆಚ್ಚು ನಿಲ್ಲುತ್ತಿದ್ದರು. ಆದರೆ, ಈ ಬಾರಿ ಕಾವ್ಯಾನ ಬಿಟ್ಟು ಅಶ್ವಿನಿ ಗೌಡಗೆ ದೊಡ್ಡ ಅವಕಾಶ ನೀಡಿದರು ಗಿಲ್ಲಿ. ಇದಕ್ಕೆ ಕಾರಣ ಬಿಗ್ ಬಾಸ್ ಕೊಟ್ಟ ಸೂಚನೆ ಹಾಗೂ ಅಶ್ವಿನಿ ಗೌಡ ರೂಪಿಸಿ ತಂತ್ರ. ‘ಟಾಸ್ಕ್ ಆಡಿ ಗೆಲ್ಲಲು ಅರ್ಹರಲ್ಲ ಎನಿಸಿದ ಮಹಿಳಾ ಸ್ಪರ್ಧಿಯನ್ನು ರಾಣಿ ಸ್ಥಾನಕ್ಕೆ ಆಯ್ಕೆ ಮಾಡಬೇಕು’ ಎಂದು ಬಿಗ್ ಬಾಸ್ ಹೇಳಿದರು.
ಇದನ್ನೂ ಓದಿ: ಅಂದು ಮೋಕ್ಷಿತಾ, ಇಂದು ಸ್ಪಂದನಾ; ಕಾರು ಹತ್ತಿ ಬಂದ ಬಳಿಕ ಭಾರೀ ಬದಲಾವಣೆ ಅಚ್ಚರಿಯ ಸಂಗತಿ ಎಂದರೆ ಹಿಂದಿನ ದಿನವಷ್ಟೇ ಅಶ್ವಿನಿ ಬಳಿ ಮಾತನಾಡಿದ್ದ ಗಿಲ್ಲಿ, ‘ನಿಮಗೆ ಟಾಸ್ಕ್ ಆಡೋಕೆ ಬರಲ್ಲ. ನೀವು ಟಾಸ್ಕ್ಗಳನ್ನು ಗೆಲ್ಲಲ್ಲ’ ಎಂದಿದ್ದರು. ಹೀಗಾಗಿ, ಇದೇ ಮಾತನ್ನು ಇಟ್ಟುಕೊಂಡು ಅಶ್ವಿನಿ ಟಾಂಟ್ ಕೊಡೋಕೆ ಆರಂಭಿಸಿದರು. ‘ನನಗೆ ಟಾಸ್ಕ್ ಆಡೋಕೆ ಬರೋದಿಲ್ಲ ಎಂದಿದ್ಯಲ್ಲ. ಹಾಗಿದ್ರೆ ಮಾತಿನಮೇಲೆ ನಿಂತುಕೋ’ ಎಂದು ಗಿಲ್ಲಿಗೆ ಹೇಳಿದರು ಅಶ್ವಿನಿ. ಈ ಕಾರಣಕ್ಕೆ ಅಶ್ವಿನಿಯನ್ನು ರಾಣಿಯಾಗಿ ಗಿಲ್ಲಿ ಆಯ್ಕೆ ಮಾಡಿದರು. ಇದರಿಂದ ಅವರು ಕೂಡ ಕ್ಯಾಪ್ಟನ್ಸಿ ರೇಸ್ಗೆ ಸ್ಥಾನ ಪಡೆದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




