ಅಂದು ಮೋಕ್ಷಿತಾ, ಇಂದು ಸ್ಪಂದನಾ; ಕಾರು ಹತ್ತಿ ಬಂದ ಬಳಿಕ ಭಾರೀ ಬದಲಾವಣೆ
ಮೋಕ್ಷಿತಾ ಪೈ ಅವರಂತೆ ಸ್ಪಂದನಾ ಕೂಡ ಬಿಗ್ ಬಾಸ್ ಮನೆಯಲ್ಲಿ ಮೌನದಿಂದ ಇದ್ದು, ಎಲಿಮಿನೇಷನ್ ಹಂತ ತಲುಪಿ ಮರಳಿ ಬಂದಿದ್ದಾರೆ. ಈ ಅನುಭವ ಸ್ಪಂದನಾ ಆಟವನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಅವರು ಈಗ ಹೆಚ್ಚು ಆಕ್ರಮಣಕಾರಿಯಾಗಿ ಆಡುತ್ತಿದ್ದು, ಮಾಳು ಬೆಸ್ಟ್ ಎಂದಿದ್ದ ರಕ್ಷಿತಾ ಶೆಟ್ಟಿ ಜೊತೆ ಜಗಳ ಮಾಡಿದ್ದಾರೆ. ಇದು ಸ್ಪಂದನಾ ಫಿನಾಲೆ ವಾರ ತಲುಪುವ ಸಾಧ್ಯತೆಗಳನ್ನು ಹೆಚ್ಚಿಸಿದೆ.

ಮೋಕ್ಷಿತಾ ಪೈ ಅವರು ಕಳೆದ ಸೀಸನ್ ಅಲ್ಲಿ ಸೈಲೆಂಟ್ ಆಗಿದ್ದೇ ಹೆಚ್ಚು. ಬೇಕಾದ ಕಡೆಗಳಲ್ಲಿ ಅವರು ಸ್ಟ್ಯಾಂಡ್ ತೆಗೆದುಕೊಂಡಿದ್ದು ಇದೆ. ಆದರೆ, ಸೈಲೆಂಟ್ ಆಗಿದ್ದರು ಎಂಬ ಕಾರಣಕ್ಕೆ ಅವರನ್ನು ಎಲ್ಲರೂ ನೆಗ್ಲೆಕ್ಟ್ ಮಾಡಿದ್ದರು. ಆದರೆ, ಆ ಒಂದು ಕ್ಷಣ ಎಲ್ಲವನ್ನೂ ಬದಲಿಸಿತ್ತು. ಅವರು ಎಲಿಮಿನೇಷನ್ ಹಂತ ತಲುಪಿದ್ದರು. ಕಾರಿನಲ್ಲಿ ಹೊರ ಹೋಗಿ, ಸೇವ್ ಆಗಿ ಬಂದರು. ಮರಳಿ ಬರುತ್ತಿದ್ದಂತೆ ಅವರು ಚಾಲೆಂಜ್ ಮಾಡಿದ್ದರು. ಅವರ ಆಟ ಸಂಪೂರ್ಣ ಬದಲಾಯಿತು. ಈ ಬಾರಿ ಸ್ಪಂದನಾ (Spandana) ಕೂಡ ಹಾಗೆಯೇ ಆಗುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ.
ಮೋಕ್ಷಿತಾ ಪೈ ಎಲಿಮಿನೇಷನ್ ಹಂತ ತಲುಪಿ ಮರಳಿ ಬಂದಿದ್ದರಿಂದ ಅವರಲ್ಲಿ ಗೆಲ್ಲಬೇಕು ಎನ್ನುವ ಛಲ ಹುಟ್ಟಿಕೊಂಡಿತು. ಈ ಕಾರಣದಿಂದಲೇ ಅವರ ಆಟದಲ್ಲಿ ಬದಲಾವಣೆ ಮಾಡಿಕೊಂಡರು. ಕಾರು ಇಳಿಯುತ್ತಿದ್ದಂತೆ ಅವರು ಚಾಲೆಂಜ್ ಕೂಡ ಮಾಡಿದರು. ಅವರು ಟಾಪ್ ಐದರಲ್ಲಿ ಸ್ಥಾನ ಪಡೆದರು. ಸ್ಪಂದನಾ ಕೂಡ ಹಾಗೆಯೇ ಆಗಬಹುದೇ ಎಂಬ ಪ್ರಶ್ನೆ ಮೂಡಿದೆ.
ಕಳೆದ ವಾರ ಮಾಳು ಹಾಗೂ ಸ್ಪಂದನಾ ನಾಮಿನೇಷನ್ ಲಿಸ್ಟ್ನಲ್ಲಿ ಇದ್ದರು. ಈ ಪೈಕಿ ಇಬ್ಬರನ್ನೂ ಕಾರು ಹತ್ತಿಸಿ ಕಳುಹಿಸಲಾಗಿದೆ. ಕೊನೆಯಲ್ಲಿ ಸ್ಪಂದನಾ ಉಳಿದುಕೊಂಡಿದ್ದಾರೆ. ಅವರು ಬಿಗ್ ಬಾಸ್ ಮನೆಗೆ ಬರುತ್ತಿದ್ದಂತೆ ಕಣ್ಣೀರು ಹಾಕಿದ್ದಾರೆ. ಆಟದಲ್ಲೂ ಬದಲಾವಣೆ ಮಾಡಿಕೊಂಡಂತೆ ಕಾಣಿಸುತ್ತದೆ.
ಇದನ್ನೂ ಓದಿ: ಬಿಗ್ ಬಾಸ್ ಕನ್ನಡ: ನಾಮಿನೇಟ್ ಆದ ಸ್ಪಂದನಾ; ಈ ವಾರವಾದ್ರೂ ಎಲಿಮಿನೇಟ್ ಆಗ್ತಾರಾ?
ಮೊದಲು ಸ್ಪಂದನಾ ಯಾರ ಜೊತೆಯೂ ಜಗಳ ಮಾಡಿದವರಲ್ಲ. ಆದರೆ, ಈಗ ಆ ರೀತಿಯ ಜಗಳ ನಡೆದಿದೆ. ‘ಸ್ಪಂದನಾಗಿಂತ ಮಾಳು ಬೆಸ್ಟ್’ ಎಂದು ಹೇಳಿದ ವಿಷಯಕ್ಕೆ ಸಂಬಂಧಿಸಿ ಅವರು ರಕ್ಷಿತಾ ಶೆಟ್ಟಿ ಜೊತೆ ಜಗಳ ಮಾಡಿದ್ದಾರೆ. ಈ ಮೂಲಕ ಮನೆಯಲ್ಲಿ ಹೈಲೈಟ್ ಆಗಿದ್ದಾರೆ. ಈ ವಾರ ಅವರ ಹೆಸರು ನಾಮಿನೇನ್ ಲಿಸ್ಟ್ನಲ್ಲಿ ಇದೆ. ಅವರು ಉತ್ತಮವಾಗಿ ಆಡಿದರೆ ಸೇವ್ ಆದರೂ ಆಗಬಹುದು. ಈ ವಾರ ಯಾರು ಫಿನಾಲೆ ವೀಕ್ ತಲುಪುತ್ತಾರೆ ಎಂಬ ಕುತೂಹಲ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




