AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾವ್ಯಾಗೆ ಫೇವರಿಸಂ ಮಾಡಿದ ಗಿಲ್ಲಿ? ಶುರುವಾಗಿದೆ ಚರ್ಚೆ

ಬಿಗ್ ಬಾಸ್ ಕ್ಯಾಪ್ಟನ್ ಗಿಲ್ಲಿ, ಕಾವ್ಯಾಗೆ ನಾಮಿನೇಷನ್‌ನಲ್ಲಿ ಫೇವರಿಸಂ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಾವ್ಯಾ ಹೆಸರು ಹಲವು ಬಾರಿ ಬಂದರೂ, ಗಿಲ್ಲಿ ಅವರನ್ನು ಪದೇ ಪದೇ ಸೇವ್ ಮಾಡಿದ್ದಾರೆ. ಧನುಷ್ ಮತ್ತು ಅಶ್ವಿನಿ ಸೇರಿದಂತೆ ಇತರ ಸ್ಪರ್ಧಿಗಳಲ್ಲಿ ಇದು ತೀವ್ರ ಚರ್ಚೆಗೆ ಕಾರಣವಾಗಿದೆ. ಈ ವಿಷಯ ವಾರಾಂತ್ಯದಲ್ಲಿ ದೊಡ್ಡ ಚರ್ಚೆಯಾಗುವ ಸಾಧ್ಯತೆ ಇದೆ.

ಕಾವ್ಯಾಗೆ ಫೇವರಿಸಂ ಮಾಡಿದ ಗಿಲ್ಲಿ? ಶುರುವಾಗಿದೆ ಚರ್ಚೆ
ಗಿಲ್ಲಿ-ಕಾವ್ಯಾ
ರಾಜೇಶ್ ದುಗ್ಗುಮನೆ
|

Updated on: Dec 31, 2025 | 11:54 AM

Share

ಕಾವ್ಯಾ ಹಾಗೂ ಗಿಲ್ಲಿ (Gilli) ಸಾಕಷ್ಟು ಆಪ್ತವಾಗಿದ್ದಾರೆ. ಇಬ್ಬರ ಮಧ್ಯೆ ಒಳ್ಳೆಯ ಗೆಳೆತನ ಇದೆ. ಇವರ ಜೋಡಿ ಹೊರಗೆ ಯಾವ ರೀತಿ ಕಾಣಿಸುತ್ತಿದೆ ಎಂಬುದನ್ನು ಅವರ ಸಹೋದರ ಕಾವ್ಯಾಗೆ ತಿಳಿಸಿದ್ದ. ಈ ಕಾರಣಕ್ಕೆ ಅವರನ್ನು ಹೊರಕ್ಕೆ ಕಳುಹಿಸಲಾಯಿತು. ಈಗ ಕಾವ್ಯಾ ಅವರು ಗಿಲ್ಲಿ ಜೊತೆ ಸೇಫ್ ಗೇಮ್ ಆಡ್ತಿರೋದು ಸ್ಪಷ್ಟವಾಗುತ್ತಿದೆ. ಈ ಮಧ್ಯೆ ಗಿಲ್ಲಿ ಅವರು ಕಾವ್ಯಾಗೆ ಫೇವರಿಸಂ ಮಾಡೋಕೆ ಆರಂಭಿಸಿದ ಆರೋಪ ಕೇಳಿ ಬಂದಿದೆ.

ಗಿಲ್ಲಿ ಅವರು ಈ ವಾರದ ಕ್ಯಾಪ್ಟನ್ ಆಗಿದ್ದಾರೆ. ಅವರಿಗೆ ವಿಶೇಷ ಅಧಿಕಾರವನ್ನು ಬಿಗ್ ಬಾಸ್ ನೀಡಿದ್ದಾರೆ. ಸ್ಪರ್ಧಿಗಳು ನಾಮಿನೇಷನ್​ಗೆ ಇಬ್ಬರ ಹೆಸರನ್ನು ಸೂಚಿಸಬೇಕು. ಅದಕ್ಕೆ ಸೂಕ್ತ ಕಾರಣ ನೀಡಬೇಕು. ಯಾವುದು ಹೆಚ್ಚು ಸೂಕ್ತ ಎನಿಸಿತೋ ಅವರನ್ನು ಸೇವ್ ಮಾಡಬೇಕು. ಮತ್ತೊಬ್ಬರನ್ನು ನಾಮಿನೇಟ್ ಮಾಡಬೇಕು. ಕಾವ್ಯಾ ಹೆಸರು ಮೂರ್ನಾಲ್ಕು ಬಾರಿ ಬಂದರೂ ಗಿಲ್ಲಿ ಒಮ್ಮೆಯೂ ನಾಮಿನೇಟ್ ಮಾಡಿಲ್ಲ. ಪ್ರತಿ ಬಾರಿಯೂ ಅವರನ್ನು ಗಿಲ್ಲಿ ಸೇವ್ ಮಾಡಿದ್ದಾರೆ. ಇದು ಚರ್ಚೆಗೆ ಕಾರಣ ಆಗಿದೆ.

ಕಳೆದ ಸೀಸನ್ ಅಲ್ಲಿ ಹನುಮಂತ ಹಾಗೂ ಧನರಾಜ್ ಅವರ ಮಧ್ಯೆ ಒಳ್ಳೆಯ ಗೆಳೆತನ ಇತ್ತು. ಆದರೆ, ಅದು ಅವರ ಆಟದ ಮೇಲೆ ಎಂದಿಗೂ ಪರಿಣಾಮ ಬೀರಿಲ್ಲ. ಧನರಾಜ್ ಅವರನ್ನು ನಾಮಿನೇಟ್ ಮಾಡುವ ಪರಿಸ್ಥಿತಿ ಬಂದಾಗ ಹನುಮಂತ ಅವರು ಹೆದರದೇ ನಾಮಿನೇಟ್ ಮಾಡಿದ್ದರು. ಆದರೆ, ಗಿಲ್ಲಿ ಅವರು ಕಾವ್ಯಾ ಜೊತೆಗಿನ ಆಪ್ತತೆ ಕಾರಣಕ್ಕೆ ಅವರಿಗೆ ಫೇವರಿಸಂ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.

ಈ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಚರ್ಚೆ ಆಗಿದೆ. ಧನುಷ್ ಹಾಗೂ ಕಾವ್ಯಾ ಹೆಸರು ಬಂದಾಗ, ಕಾವ್ಯಾ ಅವರನ್ನು ಸೇವ್ ಮಾಡಿ ಧನುಷ್​​ನ ನಾಮಿನೇಟ್ ಮಾಡಿದರು. ಇದು ಅವರಿಗೆ ಸರಿ ಎನಿಸಿಲ್ಲ. ಗಿಲ್ಲಿ ನಡೆದುಕೊಂಡ ರೀತಿಯು ಅಶ್ವಿನಿಗೂ ಕೋಪ ತರಿಸಿದೆ. ಗಿಲ್ಲಿ ಫೇವರಿಸಂ ಮಾಡುತ್ತಿದ್ದಾರೆ ಎಂದು ಅವರಿಗೆ ಬಲವಾಗಿ ಅನಿಸಿದೆ. ವೀಕೆಂಡ್​​ನಲ್ಲಿ ಈ ವಿಷಯ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ: ವೇದಿಕೆ ಏರಿದ ಮಾಳು ವಿರುದ್ಧ ಸೇಡು ತೀರಿಸಿಕೊಂಡ ಗಿಲ್ಲಿ ಫ್ಯಾನ್ಸ್; ಭಾರೀ ಮುಜುಗರ ರಕ್ಷಿತಾ ಜೊತೆ ಮಾತನಾಡುವಾಗ ಗಿಲ್ಲಿ ಈ ವಿಷಯಕ್ಕೆ ಸ್ಪಷ್ಟನೆ ನೀಡಿದ್ದಾರೆ. ‘ಕಳೆದ ವಾರ ಫ್ಯಾಮಿಲಿ ವೀಕ್ ಆಯಿತು. ಆಗ ಕಾವ್ಯಾಗೆ ಹೊರಗಿನ ವಿಷಯಗಳು ತಿಳಿದವು. ಈ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದರೆ ನಾನು ಅವರನ್ನು ಸೇವ್ ಮಾಡುತ್ತಿರಲಿಲ್ಲ’ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಇದು ಚರ್ಚೆಗೆ ಕಾರಣ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.