ಮನೆಯ ಕೊನೆಯ ಕ್ಯಾಪ್ಟನ್ ಪಟ್ಟ ಯಾರ ಮುಡಿಗೆ? ಸ್ಪರ್ಧೆ ಬಲು ಜೋರು
Bigg Boss Kannada 12: ಬಿಗ್ಬಾಸ್ ಮನೆಯಲ್ಲಿ ಪ್ರಸ್ತುತ ಒಂಬತ್ತು ಮಂದಿ ಮಾತ್ರವೇ ಉಳಿದುಕೊಂಡಿದ್ದಾರೆ. ಪ್ರತಿ ವಾರದಂತೆ ಈ ವಾರವೂ ಸಹ ಟಾಸ್ಕ್ಗಳು ಜೋರಾಗಿ ನಡೆಯುತ್ತಿದೆ. ಆದರೆ ಹಿಂದಿನ ವಾರಗಳಿಗೆ ಹೋಲಿಸಿದರೆ ಈ ವಾರ ಕ್ಯಾಪ್ಟೆನ್ಸಿ ರೇಸಿಗೆ ಹೆಚ್ಚಿನ ಮಹತ್ವ ಇದೆ. ಈ ಬಾರಿ ಕ್ಯಾಪ್ಟನ್ ಆಗುವವರು ಮನೆಯ ಕೊನೆಯ ಕ್ಯಾಪ್ಟನ್ ಆಗಲಿದ್ದಾರೆ ಮಾತ್ರವಲ್ಲ, ನೇರವಾಗಿ ಫಿನಾಲೆ ಸ್ಪರ್ಧಿ ಸಹ ಆಗಲಿದ್ದಾರೆ ಹಾಗಾಗಿ ಸಹಜವಾಗಿಯೇ ಸ್ಪರ್ಧೆ ಜೋರಾಗಿದೆ.

ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಮುಗಿಯಲು ಉಳಿದಿರುವುದು ಕೆಲವು ದಿನಗಳಷ್ಟೆ. ಈಗಾಗಲೇ 95 ದಿನಗಳನ್ನು ಶೋ ಪೂರೈಸಿದೆ. ಮನೆಯಲ್ಲಿ ಪ್ರಸ್ತುತ ಒಂಬತ್ತು ಮಂದಿ ಮಾತ್ರವೇ ಉಳಿದುಕೊಂಡಿದ್ದಾರೆ. ಪ್ರತಿ ವಾರದಂತೆ ಈ ವಾರವೂ ಸಹ ಟಾಸ್ಕ್ಗಳು ಜೋರಾಗಿ ನಡೆಯುತ್ತಿದೆ. ಆದರೆ ಹಿಂದಿನ ವಾರಗಳಿಗೆ ಹೋಲಿಸಿದರೆ ಈ ವಾರ ಕ್ಯಾಪ್ಟೆನ್ಸಿ ರೇಸಿಗೆ ಹೆಚ್ಚಿನ ಮಹತ್ವ ಇದೆ. ಈ ಬಾರಿ ಕ್ಯಾಪ್ಟನ್ ಆಗುವವರು ಮನೆಯ ಕೊನೆಯ ಕ್ಯಾಪ್ಟನ್ ಆಗಲಿದ್ದಾರೆ ಮಾತ್ರವಲ್ಲ, ನೇರವಾಗಿ ಫಿನಾಲೆ ಸ್ಪರ್ಧಿ ಸಹ ಆಗಲಿದ್ದಾರೆ ಹಾಗಾಗಿ ಸಹಜವಾಗಿಯೇ ಸ್ಪರ್ಧೆ ಜೋರಾಗಿದೆ.
ಮೊದಲಿಗೆ ಸ್ಪಂದನಾ ಮತ್ತು ರಾಶಿಕಾ ನಡುವೆ ಬಿಲ್ಲೆಯ ಟಾಸ್ಕ್ ಒಂದು ನಡೆಯಿತು. ಬಿಗ್ಬಾಸ್ 71 ಬಿಲ್ಲೆಗಳನ್ನು ಮನೆಯೊಳಗೆ ಕಳಿಸಿದ್ದರು, ಮನೆಯ ರಾಜ ಗಿಲ್ಲಿ ಮತ್ತು ರಾಣಿ ಅಶ್ವಿನಿ ಆ ಬಿಲ್ಲೆಗಳನ್ನು ತಮ್ಮ ವಿವೇಚನೆಗೆ ತಕ್ಕಂತೆ ಮನೆಯ ಇತರೆ ಸದಸ್ಯರಿಗೆ ಹಂಚಬೇಕಿತ್ತು, ಆ ಬಿಲ್ಲೆಗಳನ್ನು ಅವರು ಸ್ಪಂದನಾ ಮತ್ತು ರಾಶಿಕಾಗೆ ಹಂಚಬೇಕಾಗಿತ್ತು. ಅದರಂತೆ ಸ್ಪಂದನಾಗೆ ಹೆಚ್ಚಿನ ಬಿಲ್ಲೆಗಳು ಬಂದವು, ರಾಶಿಕಾಗೆ ಕಡಿಮೆ ಬಿಲ್ಲೆಗಳು ಬಂದವು. ಆದರೆ ಇದೇ ರಾಶಿಕಾಗೆ ಪ್ಲಸ್ ಆಗಿ ಪರಿಣಮಿಸಿತು. ರಾಶಿಕಾ ತೋಳ್ಬಲ ಬಳಸಿ ಸ್ಪಂದನಾ ಗೆಲ್ಲದಂತೆ ತಡೆದರು ಮಾತ್ರವಲ್ಲದೆ ಕಡಿಮೆ ಬಿಲ್ಲೆಗಳಿದ್ದರೂ ಸಹ ಗೆದ್ದು ಕ್ಯಾಪ್ಟೆನ್ಸಿ ರೇಸಿಗೆ ಆಯ್ಕೆ ಆದರು.
ಬಳಿಕ ಪುರುಷ ಸ್ಪರ್ಧಿಗಳಿಗೆ ಟಾಸ್ಕ್ ಆಯೋಜನೆ ಆಯ್ತು. ಎಣ್ಣೆ ಚೆಲ್ಲಿಗೆ ಟಾರ್ಪಲ್ ಮೇಲೆ ಬ್ಯಾಲೆನ್ಸ್ ಮಾಡುತ್ತಾ ಸ್ಪರ್ಧಿಗಳು ಚೆಂಡುಗಳನ್ನು ಸಂಗ್ರಹಿಸಬೇಕು, ಅವನ್ನು ಮಹಿಳಾ ಸ್ಪರ್ಧಿಯ ಸಹಾಯದಿಂದ ಬುಟ್ಟಿಗೆ ಹಾಕಬೇಕು. ಈ ಟಾಸ್ಕ್ನಲ್ಲಿ ಧನುಶ್ ಭರ್ಜರಿ ಮುನ್ನಡೆಯಿಂದ ಗೆದ್ದರು. ದ್ವಿತೀಯ ಸ್ಥಾನ ಪಡೆದಿದ್ದು ರಘು, ತೃತೀಯ ಸ್ಥಾನಕ್ಕೆ ಧ್ರುವಂತ್ ತೃಪ್ತರಾದರು. ಆದರೆ ಬಿಗ್ಬಾಸ್ ಆದೇಶದಂತೆ ಧನುಶ್ ಜೊತೆಗೆ ಮತ್ತೊಬ್ಬರನ್ನು ಕ್ಯಾಪ್ಟೆನ್ಸಿ ರೇಸಿಗೆ ಆಯ್ಕೆ ಮಾಡಬೇಕಿತ್ತು. ಈ ಕಾರ್ಯವನ್ನು ರಾಜ-ರಾಣಿಗೆ ವಹಿಸಿದ್ದರು.
ಇದನ್ನೂ ಓದಿ:ಬಿಗ್ ಬಾಸ್ ಬಳಿಕ ಭೇಟಿಯಾದ ತನಿಷಾ ಹಾಗೂ ವರ್ತೂರ್ ಸಂತೋಷ್
ಗಿಲ್ಲಿಗೆ ರಘು ಕ್ಯಾಪ್ಟೆನ್ಸಿ ರೇಸಿಗೆ ಆಯ್ಕೆ ಆಗಬೇಕಿತ್ತು ಆದರೆ ಅಶ್ವಿನಿ ಧ್ರುವಂತ್ ಪರವಾಗಿ ನಿಂತಿದ್ದರು. ಬಹಳ ಹೊತ್ತು ಚರ್ಚೆ, ಜಗಳ, ವಾಗ್ವಾದ ನಡೆಯಿತು. ಬಿಗ್ಬಾಸ್ ಸಹ ಕೊನೆಗೆ ಎಚ್ಚರಿಕೆ ನೀಡಿದರು. ಅಂತಿಮವಾಗಿ ರಘು ಅವರನ್ನು ಆಯ್ಕೆ ಮಾಡಲಾಯ್ತು. ಇತರೆ ಸ್ಪರ್ಧಿಗಳಲ್ಲಿ ಯಾರಿಗೆ ಯಾರನ್ನು ಕ್ಯಾಪ್ಟೆನ್ಸಿ ಟಾಸ್ಕ್ಗೆ ಕಳಿಸಬೇಕು ಎಂದು ಮತ್ತೊಂದು ಟಾಸ್ಕ್ ನೀಡಲಾಯ್ತು. ಅದರಂತೆ ರಘು ಅವರಿಗೆ ಹೆಚ್ಚು ಮತಗಳು ದೊರೆತಿವೆ. ಆದರೆ ಟಾಸ್ಕ್ ಇನ್ನೂ ಮುಗಿದಿಲ್ಲ. ಧನುಶ್, ಟಾಸ್ಕ್ ಗೆದ್ದರೂ ಸಹ ಕ್ಯಾಪ್ಟೆನ್ಸಿ ರೇಸಿನಿಂದ ಹೊರಗೆ ಉಳಿಯುವ ಸಾಧ್ಯತೆ ಕಾಣುತ್ತಿದೆ.
ಆದರೆ ಸ್ಪಂದನಾ ಮತ್ತು ರಾಶಿಕಾ ಟಾಸ್ಕ್ನಲ್ಲಿಯೂ ಹೀಗೆಯೇ ಆಗಿತ್ತು, ಸ್ಪಂದನಾಗೆ ಹೆಚ್ಚು ಬಿಲ್ಲೆ ದೊರೆತರೂ ಸಹ ಸ್ಪಂದನಾ ಸೋತಿದ್ದರು, ಈಗ ರಘುಗೆ ಹೆಚ್ಚು ಮತ ದೊರೆತಿದೆ. ಟಾಸ್ಕ್ನ ನಿಯಮದಂತೆ ಅವರಿಗೆ ಹೆಚ್ಚು ಮಣ್ಣು ಸಹ ದೊರೆತಿದೆ. ಆದರೆ ಇದೇ ಅವರಿಗೆ ಶಾಪವಾಗುತ್ತದೆಯಾ? ಕಾದು ನೊಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




