ಕೀ ಕೊಡೋದ್ರಲ್ಲಿ ಮಾಸ್ಟರ್; ಗಿಲ್ಲಿ ಮಾತಿಗೆ ಉರಿದುರಿದು ಬಿದ್ದ ಧ್ರುವಂತ್-ಅಶ್ವಿನಿ
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ, ಅಶ್ವಿನಿ ಗೌಡ ಮತ್ತು ಧ್ರುವಂತ್ ನಡುವೆ ತೀವ್ರ ಜಗಳ ನಡೆದಿದೆ. ಗಿಲ್ಲಿಯ ಮಾತು ಅಶ್ವಿನಿ ಅವರನ್ನು ನಿಯಂತ್ರಣ ಕಳೆದುಕೊಳ್ಳುವಂತೆ ಮಾಡಿದೆ. ಇದರಿಂದ ಅವರು ಕೆಟ್ಟ ಪದಗಳನ್ನು ಬಳಸಿದ್ದಾರೆ. ವೀಕೆಂಡ್‌ನಲ್ಲಿ ಈ ಘಟನೆ ಪ್ರಮುಖ ಚರ್ಚೆಯ ವಿಷಯವಾಗುವ ಸಾಧ್ಯತೆಯಿದೆ.

ಗಿಲ್ಲಿ ನಟ (Gilli Nata) ಅವರು ಯಾರನ್ನಾದರೂ ಉರಿಸಬೇಕು, ಯಾರನ್ನಾದರೂ ಅಳಿಸಬೇಕು ಎಂದು ನಿರ್ಧರಿಸಿದರೆ ಅವರ ಮಾತೇ ಸಾಕು. ಅವರು ಕೀ ಕೊಡೋದ್ರಲ್ಲಿ ಮಾಸ್ಟರ್. ಈಗ ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ-ಧ್ರುವಂತ್ ಹಾಗೂ ಗಿಲ್ಲಿ ನಟ ಮಧ್ಯೆ ಕಿರಿಕ್ ಆಗಿದೆ. ಗಿಲ್ಲಿ ಅದೆಷ್ಟು ಟ್ರಿಗರ್ ಮಾಡಿದರು ಎಂದರೆ, ಅಶ್ವಿನಿ ಅವರಿಗೆ ಕಂಟ್ರೋಲ್ ಸಿಗಲೇ ಇಲ್ಲ. ಅವರ ಮಾತು ಮಿತಿಮೀರಿದೆ. ತಾವು ಏಕವಚನ ಬಳಸಿ ಬೇರೆಯವರಿಂದ ಗೌರವ ನಿರೀಕ್ಷೆ ಮಾಡಿದ್ದಾರೆ. ಇದು ಚರ್ಚೆಗೆ ಕಾರಣ ಆಗಿದೆ.
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ ಮಧ್ಯೆ ಮೊದಲಿನಿಂದಲೂ ಕಿರಿಕ್ಗಳು ಆದ ಉದಾಹರಣೆ ಇದೆ. ಇತ್ತೀಚೆಗೆ ಅಶ್ವಿನಿ ಗೌಡ ಅವರು ಬದಲಾಗಿದ್ದರು. ಯಾವುದೇ ವಿಷಯ ಬಂದರೂ ಮೌನ ತಾಳುತ್ತಿದ್ದರು. ಅವರು ಯಾರ ಮೇಲೂ ಕೋಪ ಮಾಡಿಕೊಳ್ಳುತ್ತಾ ಇರಲಿಲ್ಲ. ಆದರೆ, ಈಗ ಅವರು ಮತ್ತೆ ಬದಲಾಗಿದ್ದಾರೆ. ಅವರು ನಿಯಂತ್ರಣ ಕಳೆದುಕೊಂಡಿದ್ದಾರೆ.
ಗಿಲ್ಲಿ ಮಾಡಿದ ಉಸ್ತುವಾರಿ ವಿಷಯಕ್ಕೆ ಚರ್ಚೆಗಳು ಆರಂಭ ಆದವು. ಗಿಲ್ಲಿ ನಟ ಅವರು ಉಸ್ತುವಾರಿಗೆ ತುಂಬಾನೇ ಟೈಮ್ ತೆಗೆದುಕೊಂಡರು ಎಂದು ಅಶ್ವಿನಿ ಗೌಡ ಹಾಗೂ ಧ್ರುವಂತ್ ಹೇಳಿದರು. ಇದು ಗಿಲ್ಲಿಗೆ ಕೋಪ ತರಿಸಿದೆ. ಇಬ್ಬರನ್ನೂ ಗಿಲ್ಲಿ ಟ್ರಿಗರ್ ಮಾಡುವ ನಿರ್ಧಾರಕ್ಕೆ ಬಂದರು. ಗಿಲ್ಲಿ ಮಾತಿನ ಮೂಲಕವೇ ಕಿಡಿ ಹೊತ್ತಿಸಿದರು. ಅದು ನಂತರ ಕಾಡ್ಗಿಚ್ಚಾಯಿತು.
ಇದನ್ನೂ ಓದಿ: ಗಿಲ್ಲಿಗೆ ‘ಲೋ*ರ್’, ಥರ್ಡ್ಕ್ಲಾಸ್ ಪದ ಬಳಕೆ ಮಾಡಿದ ಅಶ್ವಿನಿ; ಮತ್ತೆ ಬಂತು ಹಳೇ ವರ್ಷನ್
ಧ್ರುವಂತ್ ಹಾಗೂ ಅಶ್ವಿನಿ ಗೌಡ ಅವರು ಉರಿದುರಿದು ಬೀಳೋಕೆ ಆರಂಭಿಸಿದರು. ಆದರೆ, ಗಿಲ್ಲಿ ಮಾತ್ರ ಇದನ್ನು ಕೂಲ್ ಆಗೇ ತೆಗೆದುಕೊಳ್ಳುತ್ತಿದ್ದರು. ಇಬ್ಬರ ನಡುವೆ ನಡೆದ ವಾಗ್ವಾದದಲ್ಲಿ ಅಶ್ವಿನಿ ಗೌಡ ಅವರು ಕೆಟ್ಟ ಪದಗಳನ್ನು ಬಳಕೆ ಮಾಡಿದ್ದಾರೆ. ಈ ವಿಷಯ ವೀಕೆಂಡ್‌ನಲ್ಲಿ ಚರ್ಚೆ ಆಗುವ ಸಾಧ್ಯತೆ ಇದೆ. ಇವರ ಜಗಳ ಮನೆಯವರ ಅಸಮಾಧಾನಕ್ಕೆ ಕಾರಣ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




