ಗಿಲ್ಲಿಗೆ ಥರ್ಡ್ಕ್ಲಾಸ್ ಪದ ಬಳಕೆ ಮಾಡಿದ ಅಶ್ವಿನಿ; ಮತ್ತೆ ಬಂತು ಹಳೇ ವರ್ಷನ್
ಬಿಗ್ ಬಾಸ್ ಕನ್ನಡ 12 ರಲ್ಲಿ ಅಶ್ವಿನಿ ಗೌಡ ಮೊದಲು ಆಕ್ರಮಣಕಾರಿಯಾಗಿದ್ದರು, ನಂತರ ಮೌನಕ್ಕೆ ಶರಣಾಗಿದ್ದರು. ಆದರೆ ಇತ್ತೀಚೆಗೆ ಗಿಲ್ಲಿ ಜೊತೆಗಿನ ಜಗಳದಲ್ಲಿ ಅವರ ಹಳೆಯ ರೂಪ ಮತ್ತೆ ಪ್ರಕಟವಾಗಿದೆ. 'ಥರ್ಡ್ ಕ್ಲಾಸ್' ಎಂಬಂತಹ ಪದಬಳಸಿ ಬೈದಿದ್ದು, ಮನೆಯ ಸದಸ್ಯರಲ್ಲೂ ಅಸಮಾಧಾನ ಮೂಡಿಸಿದೆ. ಸ್ಪಂದನಾ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ (BBK 12) ಅಶ್ವಿನಿ ಗೌಡ ಅವರ ಹೊಸ ವರ್ಷನ್ ಇತ್ತೀಚೆಗಷ್ಟೇ ಆರಂಭ ಆಗಿತ್ತು. ಮೊದಲು ಕೂಗಾಟ, ಅವಾಚ್ಯ ಪದ ಬಳಕೆ ಮಾಡಿಕೊಂಡು ಓಡಾಡುತ್ತಿದ್ದ ಅವರು ನಂತರ ಬದಲಾದರು. ಇತ್ತೀಚೆಗೆ ಅವರು ಬಹುತೇಕ ಸಂದರ್ಭದಲ್ಲಿ ಮೌನವಾಗೇ ಇರುತ್ತಿದ್ದರು. ಯಾರೇ ಎಷ್ಟೇ ಟ್ರಿಗರ್ ಮಾಡಿದರೂ ಅವರು ರೇಗಾಡುತ್ತಾ ಇರಲಿಲ್ಲ. ತಾಳ್ಮೆಯಿಂದ ವರ್ತಿಸುತ್ತಿದ್ದರು. ಆದರೆ, ಈಗ ಅವರ ಹಳೆಯ ವರ್ಷನ್ ಮತ್ತೆ ಆರಂಭ ಆಗಿದೆ. ಅವರು ಗಿಲ್ಲಿಗೆ ಬಾಯಿಗೆ ಬಂದಂತೆ ಬೈದಿದ್ದಾರೆ.
ಧ್ರುವಂತ್ ಹಾಗೂ ಅಶ್ವಿನಿ ಗೌಡ ಒಂದೇ ಕಡೆ ಕುಳಿತಿದ್ದರು. ಅಲ್ಲಿಯೇ ಗಿಲ್ಲಿ ಕೂಡ ಇದ್ದರು. ಇಬ್ಬರ ಮಧ್ಯೆ ಮಾತಿನ ಚಕಮಕಿ ಶುರುವಾಗಿದೆ. ಇಬ್ಬರೂ ಕಿರಿಕ್ ಮಾಡಿಕೊಂಡಿದ್ದಾರೆ. ಗಿಲ್ಲಿ ಮಾತನಾಡಿದರು ಎಂದು ಅಶ್ವಿನಿ, ಅಶ್ವಿನಿ ಮಾತನಾಡಿದರು ಎಂದು ಗಿಲ್ಲಿ, ಹೀಗೆ, ಮಾತಿಗೆ ಮಾತು ಬೆಳೆದಿದೆ. ತಾಳ್ಮೆ ಕಳೆದುಕೊಂಡ ಅಶ್ವಿನಿ ಅವರು ಗಿಲ್ಲಿಗೆ ‘ಜೋಕರ್, ಥರ್ಡ್ ಕ್ಲಾಸ್’ ಎಂದೆಲ್ಲ ಬೈದಿದ್ದಾರೆ.
ಅಶ್ವಿನಿ ವಿರುದ್ಧ ಏಕವಚನ ಪದ ಬಳಕೆ ಮಾಡಿದರು ಗಿಲ್ಲಿ. ಇದರಿಂದ ಸಿಟ್ಟಾದ ಅಶ್ವಿನಿ, ‘ಗಿಲ್ಲಿ ನಿಂಗೆ ಬೆನ್ನುಮೂಳೆ ಇಲ್ಲ. ನೀನೊಬ್ಬ ಜೋಕರ್, ಜೋಕರ್ ಕ್ಯಾಪ್ಟನ್, ಥರ್ಡ್ ಕ್ಲಾಸ್ ನೀನು’ ಎಂದು ಕೂಗಾಡಿದ್ದಾರೆ. ಈ ವಿಷಯ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಮತ್ತೆ ಹಳೆಯ ವರ್ಷನ್ ಮರಳಿದೆ ಎಂದು ಅನೇಕರು ಹೇಳಿದ್ದಾರೆ. ಅಶ್ವಿನಿ ಗೌಡ ಅವರು ಈ ಮೊದಲು ಬಳಕೆ ಮಾಡಿದ ಪದಗಳ ಆಡಿಯೋ ಹಾಕಲಾಗಿತ್ತು. ಅಲ್ಲಿಂದ ಅವರು ಬದಲಾಗಿದ್ದರು. ಈಗ ಮತ್ತೆ ಕೂಗಾಡಿ ಸುದ್ದಿಯಾಗಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಆದೇಶಕ್ಕೆ ನಲುಗಿ ಹೋದ ಗಿಲ್ಲಿ ನಟ; ಇದಕ್ಕೆ ಕಾರಣ ರಘು-ಸೂರಜ್?
‘ನಿಮ್ಮ ಜಗಳದಿಂದ ಇಡೀ ಮನೆಗೆ ಗಾರ್ಡನ್ಗೆ ಬರೋಕೆ ಆಗ್ತಾ ಇಲ್ಲ. ಟಾಕ್ಸಿಕ್ ಎನಿಸುತ್ತಿದೆ. ದಯವಿಟ್ಟು ನಿಲ್ಲಿಸಿ. ಈ ರೀತಿಯ ವಿಷಯಗಳನ್ನು ಮಾತನಾಡಲು ಸುದೀಪ್ ಅವರು ಬರಬೇಕಾ’ ಎಂದು ಸ್ಪಂದನಾ ಅವರು ಕೇಳಿಕೊಂಡರು. ಆದಾಗ್ಯೂ ಧ್ರುವಂತ್ ಮಾತು ನಿಲ್ಲಿಸಿಲ್ಲ. ‘ಕೇಳಿ ಕೇಳಿ ಇಸ್ಕೋತೀದಾನೆ, ನಾನೇನು ಮಾಡಲಿ’ ಎಂದು ಗಿಲ್ಲಿ ಪ್ರಶ್ನೆ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:28 am, Thu, 1 January 26




