ಒಟ್ಟಿಗೆ ದಾಳಿ ಮಾಡಿದ ಧ್ರುವಂತ್-ಅಶ್ವಿನಿ, ಕಕ್ಕಾಬಿಕ್ಕಿಯಾದ ಗಿಲ್ಲಿ
Bigg Boss Kannada 12: ಬಿಗ್ಬಾಸ್ ಮನೆಯಲ್ಲಿ ಗಿಲ್ಲಿ ಹಿರಿಯರು, ಕಿರಿಯರೆನ್ನದೆ ಮಾತನಾಡುವುದು, ವಿಪರೀತಕ್ಕೆ ಹೋಗಿ ಗೇಲಿ ಮಾಡುವುದು, ವ್ಯಂಗ್ಯ ಮಾಡುವುದು ಮಾಡುತ್ತಾರೆ. ಇದೇ ಕಾರಣಕ್ಕೆ ಮನೆಯ ಕೆಲವು ಸದಸ್ಯರಿಂದ ಬೈಸಿಕೊಂಡಿದ್ದು, ವಿರೋಧ ಕಟ್ಟಿಕೊಂಡಿದ್ದೂ ಸಹ ಇದೆ. ಆದರೆ ಯಾರೂ ಸಹ ಗಿಲ್ಲಿಯ ಬಾಯಿಗೆ ಬಾಯಿ ಕೊಟ್ಟು ಮಾತನಾಡಿರಲಿಲ್ಲ. ಆದರೆ ಈ ಬಾರಿ ಧ್ರುವಂತ್ ಮತ್ತು ಅಶ್ವಿನಿ ಅವರ ಆರ್ಭಟಕ್ಕೆ ಸ್ವತಃ ಗಿಲ್ಲಿ ಕಕ್ಕಾ ಬಿಕ್ಕಿ ಆಗಿಬಿಟ್ಟಿದ್ದಾರೆ.

ಬಿಗ್ಬಾಸ್ (Bigg Boss) ಮನೆಯಲ್ಲಿ ಗಿಲ್ಲಿ ಮಾಡುವ ಹಾಸ್ಯ ಎಲ್ಲರಿಗೂ ಇಷ್ಟ ಆಗುವಂಥಹುದ್ದಲ್ಲ, ಅದರಲ್ಲೂ ಕೆಲವೊಮ್ಮೆ ಅತಿರೇಕಕ್ಕೆ ಹೋಗಿ ಹಿರಿಯರು, ಕಿರಿಯರೆನ್ನದೆ ಮಾತನಾಡುವುದು, ವಿಪರೀತಕ್ಕೆ ಹೋಗಿ ಗೇಲಿ ಮಾಡುವುದು, ವ್ಯಂಗ್ಯ ಮಾಡುವುದು ಮಾಡುತ್ತಾರೆ. ಇದೇ ಕಾರಣಕ್ಕೆ ಮನೆಯ ಕೆಲವು ಸದಸ್ಯರಿಂದ ಬೈಸಿಕೊಂಡಿದ್ದು, ವಿರೋಧ ಕಟ್ಟಿಕೊಂಡಿದ್ದೂ ಸಹ ಇದೆ. ಆದರೆ ಯಾರೂ ಸಹ ಗಿಲ್ಲಿಯ ಬಾಯಿಗೆ ಬಾಯಿ ಕೊಟ್ಟು ಮಾತನಾಡಿರಲಿಲ್ಲ. ಆದರೆ ಈ ಬಾರಿ ಧ್ರುವಂತ್ ಮತ್ತು ಅಶ್ವಿನಿ ಅವರ ಆರ್ಭಟಕ್ಕೆ ಸ್ವತಃ ಗಿಲ್ಲಿ ಕಕ್ಕಾ ಬಿಕ್ಕಿ ಆಗಿಬಿಟ್ಟಿದ್ದಾರೆ.
ಅಶ್ವಿನಿ, ಧ್ರುವಂತ್ ಅವರು ಗಾರ್ಡನ್ ಏರಿಯಾನಲ್ಲಿ ಕುಳಿತಿದ್ದಾಗ ಸುಮ್ಮನೆ ನಿನ್ನೆ ನಡೆದ ಟಾಸ್ಕ್ ವಿಚಾರವಾಗಿ ಚರ್ಚೆಗೆ ಎಳೆದ ಗಿಲ್ಲಿ, ಅಶ್ವಿನಿ ಅವರನ್ನು ಮೂದಲಿಸಲು ಆರಂಭಿಸಿದರು. ಕೂಡಲೇ ಧ್ರುವಂತ್ ಸಹ ಗಿಲ್ಲಿಯ ಮೂದಲಿಕೆ ಆರಂಭಿಸಿದರು. ಅಶ್ವಿನಿ ಮತ್ತು ಧ್ರುವಂತ್ ಒಟ್ಟಾಗಿ ಗಿಲ್ಲಿಯ ಮೇಲೆ ಮುಗಿಬಿದ್ದರು. ಟಾಸ್ಕ್ ವಿಷಯದಿಂದ ಆರಂಭವಾದ ಜಗಳ ವೈಯಕ್ತಿಕ ಮಟ್ಟಕ್ಕೂ ಸಹ ಹೋಯ್ತು. ಒಂದು ಹಂತದಲ್ಲಂತೂ ಗಿಲ್ಲಿಗೆ ಏನು ಮಾತನಾಡಬೇಕು ಎಂದು ಸಹ ತೋಚದೆ ಏನೇನೋ ಚಿತ್ರ ವಿಚತ್ರ ಸದ್ದುಗಳನ್ನು ಮಾಡಲು ಆರಂಭಿಸಿದರು.
ಇದನ್ನೂ ಓದಿ:ಅಶ್ವಿನಿ ಗೌಡ ಎದುರು ಗಿಲ್ಲಿ ನಟ ಆ್ಯಟಿಟ್ಯೂಡ್: ವಿಡಿಯೋ ನೋಡಿ..
ಇವರ ಜಗಳದ ಜೋರು ನೋಡಿ ಮನೆ ಸದಸ್ಯರೆಲ್ಲ ಗಾರ್ಡನ್ ಏರಿಯಾದಿಂದ ಎದ್ದು ಕಿಚನ್ಗೆ ಹೊರಟು ಬಿಟ್ಟರು. ಅಲ್ಲಿ ಅವರು ಅಡುಗೆ ಮಾಡಿ ವಾಪಸ್ ಗಾರ್ಡನ್ ಏರಿಯಾಕ್ಕೆ ಬಂದಾಗಲೂ ಸಹ ಇವರ ಜಗಳ ಮುಂದುವರೆಯುತ್ತಲೇ ಇತ್ತು. ಧ್ರುವಂತ್ ಮತ್ತು ಅಶ್ವಿನಿ, ಪಾಯಿಂಟ್ಗಳ ಮೇಲೆ ಪಾಯಿಂಟ್ ಹಾಕುತ್ತಾ, ಗಿಲ್ಲಿ ರೀತಿಯಲ್ಲೇ ವ್ಯಂಗ್ಯ ಮಾಡುತ್ತಾ, ಹೀಗಳೆಯುತ್ತಾ ಜಗಳ ಮಾಡಿದರು. ತನ್ನದೇ ಮದ್ದು ತನ್ನ ಮೇಲೆ ಪ್ರಯೋಗಿಸಿದಾಗ ಸಹಜವಾಗಿಯೇ ಗಿಲ್ಲಿ ಅವಕ್ಕಾದರು, ಅದರಲ್ಲೂ ಧ್ರುವಂತ್ ಅಂತೂ ಗಿಲ್ಲಿಯ ಮುಂದೆ ಹೋಗಿ ಕೂತು, ‘ತಾಕತ್ತಿದ್ದರೆ ಮಾತನಾಡು’ ಎಂದು ಸವಾಲುಗಳನ್ನು ಎಸೆದರು. ಧ್ರುವಂತ್ ಆರ್ಭಟಕ್ಕೆ ಪೆಚ್ಚಾಗಿ ಕೊನೆಗೆ ಗಿಲ್ಲಿಯೇ ಮಾತು ನಿಲ್ಲಿಸಿ ಎದ್ದು ಹೋಗುವಂತಾಯ್ತು.
‘ನಿನ್ನ ಮೂರು-ಮುಕ್ಕಾಲು ರಿಯಾಲಿಟಿ ಶೋನ ಕಂಟೆಂಟ್ ಮುಗಿದು ಹೋಗಿದೆ ಅದೇ ಕಾರಣಕ್ಕೆ ಈಗ ಏನೇನೋ ಶಬ್ದ ಮಾಡುತ್ತಿದ್ದೀಯ’ ಎಂದೆಲ್ಲ ಧ್ರುವಂತ್ ಬೈದರೆ, ಗಿಲ್ಲಿ, ಅಶ್ವಿನಿ ಕುರಿತಂತೆ ‘ಅಜ್ಜಿ ಎಂದು, ಹಲ್ಲು ಸೆಟ್’ ಎಂದು ರೇಗಿಸಿದ. ಧ್ರುವಂತ್ಗೆ ‘ವೀಕ್ ಪರ್ಸನ್’ ಎಂದು ರೇಗಿಸಿದ. ಆದರೆ ಇಂದು ನಡೆದ ಜಗಳದಲ್ಲಿ ಸ್ಪಷ್ಟವಾಗಿ ಧ್ರುವಂತ್ ಅವರದ್ದೇ ಮೇಲುಗೈ ಆಗಿದ್ದು ಸ್ಪಷ್ಟವಾಗಿ ಕಂಡು ಬಂತು. ಗಿಲ್ಲಿ ಸಾಮಾನ್ಯವಾಗಿ ಜಗಳದಲ್ಲಿ ಗೆಲುವು ಸಾಧಿಸುತ್ತಿದ್ದ ಆದರೆ ಈ ಬಾರಿ ಸೋತಿದ್ದಾರೆ. ಗಿಲ್ಲಿಯ ಮಾತಿಗೆ ಪ್ರತಿ ಮಾತು ಸಹ ಆಡದೆ ಸುಮ್ಮನೇ ಇರುತ್ತಿದ್ದ ಧ್ರುವಂತ್, ಗಿಲ್ಲಿಯನ್ನೇ ಕೆಣಕಿ ಸೈ ಎನಿಸಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




