ಭುವನ್ ಪೊನ್ನಣ್ಣ ಜನ್ಮದಿನ: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ
ಭುವನ್ ಪೊನ್ನಣ್ಣ ಅವರು ಪತ್ನಿ ಹರ್ಷಿಕಾ ಪೂಣಚ್ಚ, ಮಗಳು ತ್ರಿದೇವಿ ಜೊತೆ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಕುಟುಂಬದ ಸದಸ್ಯರ ಜೊತೆ ಬಂದು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅವರು ಪೂಜೆ ಸಲ್ಲಿಸಿದ್ದಾರೆ. ಈ ದೇವರ ಕೃಪೆಯಿಂದ ತಮ್ಮ ಜೀವನದಲ್ಲಿ ಎಲ್ಲವೂ ಒಳ್ಳೆಯದೇ ಆಗುತ್ತಿದೆ ಎಂದು ಭುವನ್ ಅವರು ನಂಬಿದ್ದಾರೆ.

ನಟ ಭುವನ್ ಪೊನ್ನಣ್ಣ (Bhuvann Ponannaa) ಅವರಿಗೆ ಡಿಸೆಂಬರ್ 30ರಂದು ಹುಟ್ಟುಹಬ್ಬದ ಸಂಭ್ರಮ. ನಟನೆ, ನಿರ್ಮಾಣ, ರಿಯಾಲಿಟಿ ಶೋಗಳ ಮೂಲಕ ಗುರುತಿಸಿಕೊಂಡ ಅವರು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಪ್ರತಿ ವರ್ಷ ಅವರು ಹುಟ್ಟುಹಬ್ಬದ ದಿನ ದೇವಸ್ಥಾನಕ್ಕೆ ಹೋಗುವುದನ್ನು ಮರೆಯಲ್ಲ. ಮಾಡರ್ನ್ ಆಗಿ ಕಾಣಿಸಿಕೊಳ್ಳುವ ಅವರು ಸಂಪ್ರದಾಯಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಪ್ರತಿ ವರ್ಷ ಅವರು ತಪ್ಪದೇ ಕಟೀಲು ದುರ್ಗಾಪರಮೇಶ್ವರಿ (Kateel Durga Parameshwari) ದೇವಸ್ಥಾನಕ್ಕೆ ಭೇಟಿ ನೀಡುವುದೇ ಈ ಮಾತಿಗೆ ಸಾಕ್ಷಿ. ಈ ವರ್ಷ ಕೂಡ ಅವರು ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಭುವನ್ ಅವರು ಈಗಾಗಲೇ ತಮ್ಮ ಮದುವೆ ಮತ್ತು ಮಗಳ ವಿಚಾರದಲ್ಲಿ ಸಂಸ್ಕೃತಿ ಸಂಪ್ರದಾಯವನ್ನ ಪಾಲಿಸಿ ಗಮನ ಸೆಳೆದಿದ್ದಾರೆ. ಹುಟ್ಟುಹಬ್ಬದ ಖುಷಿಯಲ್ಲಿ ಕೂಡ ಅವರು ದೇವರನ್ನು ಮರೆಯಲ್ಲ. ಎಲ್ಲೇ ಇರಲಿ, ಹೇಗೆ ಇರಲಿ ಪ್ರತಿ ವರ್ಷ ಹುಟ್ಟುಹಬ್ಬದ ದಿನ ಮಿಸ್ ಮಾಡದೇ ಅವರು ಕಟೀಲು ದುರ್ಗಾಪರಮೇಶ್ವರಿ ದೇವಿಯ ದರ್ಶನ ಪಡೆಯುತ್ತಾರೆ. ದೇವಿಯಿಂದ ತಮ್ಮ ಬದುಕಿನಲ್ಲಿ ಆಗಿರುವ ಒಳ್ಳೆಯ ಬೆಳವಣಿಗೆಯೇ ಇದಕ್ಕೆ ಕಾರಣ ಎಂದು ಭುವನ್ ಹೇಳಿದ್ದಾರೆ.
ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭುವನ್ ಅವರು ಭೇಟಿ ನೀಡುವುದಕ್ಕೆ ಶುರು ಮಾಡಿದ ಬಳಿಕ ಅವರ ಜೀವನದಲ್ಲಿ ಎಲ್ಲವೂ ಚೆನ್ನಾಗಿಯೇ ನಡೆಯುತ್ತಿದೆ. ಸಿನಿಮಾ ಅವಕಾಶಗಳು ಬರುತ್ತಿವೆ. ಸ್ವತಃ ಸಿನಿಮಾ ನಿರ್ಮಾಣ ಮಾಡಲು ಸಾಧ್ಯವಾಗಿದೆ. ಇದೆಲ್ಲವೂ ಆಗಿದ್ದು ದೇವಿ ದರ್ಶನದ ನಂತರವೇ ಎಂದು ಭುವನ್ ಪೊನ್ನಣ್ಣ ಅವರು ನಂಬಿದ್ದಾರೆ.
ಮದುವೆ ಆದ ಬಳಿಕ ಕಟೀಲು ದುರ್ಗಾ ಪರಮೇಶ್ವರಿ ಬಳಿ ತಮಗೆ ಮಗಳ ಹುಟ್ಟಬೇಕು ಎಂದು ಭುವನ್ ಪೊನ್ನಣ್ಣ ಬೇಡಿಕೊಂಡಿದ್ದರಂತೆ. ಹಾಗಾಗಿ ಮಗಳನ್ನೂ ಕೂಡ ಮೊದಲು ಕರೆದುಕೂಂಡು ಹೋಗಿದ್ದು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ! ಆದ್ದರಿಂದ ಭುವನ್ ಪೊನಣ್ಣ ಅವರು ಪ್ರತಿ ವರ್ಷ ತಮ್ಮ ಬರ್ತ್ಡೇ ದಿನ ಕುಟುಂಬ ಸಮೇತರಾಗಿ ಈ ದೇವಸ್ಥಾನಕ್ಕೆ ಭೇಟಿ ನೀಡುವುದನ್ನು ತಪ್ಪಿಸಲ್ಲ.
ಇದನ್ನೂ ಓದಿ: ನಿರ್ದೇಶಕ ಯೋಗರಾಜ್ ಭಟ್ ಜತೆ ಭುವನ್ ಪೊನ್ನಣ್ಣ ಹೊಸ ಸಿನಿಮಾ ‘ಹಲೋ 123’
ದೇವರ ಮೇಲೆ ಅಪಾರ ನಂಬಿಕೆ ಹೊಂದಿರುವ ಭುವನ್ ಪೊನ್ನಣ್ಣ ಅವರು ಈ ವರ್ಷ ಕೂಡ ಪತ್ನಿ ಹರ್ಷಿಕಾ ಪೂಣಚ್ಚ, ಮಗಳು ತ್ರಿದೇವಿ ಹಾಗೂ ಫ್ಯಾಮಿಲಿಯ ಇತರೆ ಸದಸ್ಯರ ಜೊತೆಗೆ ದೇವಸ್ಥಾನಕ್ಕೆ ಭೇಟಿಕೊಟ್ಟು ಪೂಜೆ ಸಲ್ಲಿಸಿದ್ದಾರೆ. ಸಿನಿಮಾ ಬಗ್ಗೆ ಹೇಳೋದಾದರೆ, ಭುವನ್ ಅವರು ಸದ್ಯ ಯೋಗರಾಜ್ ಭಟ್ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




