ಕಾವೇರಿ ಆರತಿ ಬೇಕಂತ ಕೇಳಿದ್ದೀವಾ? ಸಚಿವ ಚಲುವರಾಯಸ್ವಾಮಿಯನ್ನು ತರಾಟೆಗೆ ತೆಗೆದುಕೊಂಡ ಮಂಡ್ಯ ರೈತರು
ರೈತರು ಕಾವೇರಿ ಆರತಿ ಬಗ್ಗೆ ಆಕ್ಷೇಪಣೆ ಸಲ್ಲಿಸುತ್ತಿದ್ದರೆ ಚಲುವರಾಯಸ್ವಾಮಿ ತಮ್ಮ ಅಸಹಾಯಕತೆಯನ್ನು ಪ್ರದರ್ಶಿಸಿದರು. ರೈತರು ಹೀಗೆಯೇ ಮಾತಾಡಿ ಅಂತ ಹೇಳಕ್ಕಾಗಲ್ಲ ಮತ್ತು ಜನಪ್ರತಿನಿಧಿಗಳಿಗೂ ಮಾತಾಡುವುದನ್ನು ಹೇಳಲಾಗಲ್ಲ, ರೈತರು ತಮ್ಮ ಆಕ್ಷೇಪಣೆ ಮತ್ತು ಬೇಡಿಕೆಗಳನ್ನು ಬರೆದುಕೊಡಲಿ, ಸಂಬಂಧಪಟ್ಟವರೊಂದಿಗೆ ಚರ್ಚೆ ಮಾಡೋದಾಗಿ ಜಿಲ್ಲಾ ಉಸ್ತುವಾರಿ ಸಚಿವ ಹೇಳಿದರು.
ಮಂಡ್ಯ, ಜೂನ್ 7: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ದಸರಾ ಮಹೋತ್ಸವ ಸಂದರ್ಭದಲ್ಲಿ ಕಾವೇರಿ ಆರತಿ ಮಾಡಿಯೇ ತೀರುತ್ತೇನೆಂದು ಪಣತೊಟ್ಟಿದ್ದರೆ, ಮಂಡ್ಯಭಾಗದ ರೈತರು ಯೋಜನೆಗೆ ತೀವ್ರಸ್ವರೂಪದ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ನೇತೃತ್ವದಲ್ಲಿ ನಡೆದ ಇವತ್ತಿನ ಸಭೆಯಲ್ಲಿ ಪಾಲ್ಗೊಂಡಿದ್ದ ರೈತರು ಸಚಿವ ಮತ್ತು ಸರ್ಕಾರದ ನೀರಿಳಿಸಿದರು. ಮಳವಳ್ಳಿ, ಕೊಪ್ಪ, ಮದ್ದೂರು ಭಾಗಗಳಲ್ಲಿರುವ ಕೆರೆಗಳನ್ನು ತುಂಬಿಸುವ ಕೆಲಸ ಜನಪ್ರತಿನಿಧಿಗಳ ಆದ್ಯತೆಯಾಗಬೇಕು, ಜಿಲ್ಲೆಯಲ್ಲಿರುವ ಸರ್ಕಾರೀ ಶಾಲೆಗಳ ಪೈಕಿ ಹಲವಾರು ಪಾಳುಬಿದ್ದಿವೆ, ಕೆಲಕಟ್ಟಡಗಳ ಸೀಲಿಂಗ್ ಕಳಚಿ ಬೀಳುವ ಸ್ಥಿತಿಯಲ್ಲಿದೆ, ಇದನ್ನೆಲ್ಲ ಯಾವಾಗ ನೋಡ್ತೀರಿ, ಕಾವೇರಿ ಆರತಿ ಬೇಕೆಂದು ರೈತರೇನಾದರೂ ಬಂದು ಕೇಳಿದ್ರಾ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ದಸರಾ ಮಹೋತ್ಸವದ ಜೊತೆ ಕಾವೇರಿ ಆರತಿ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಶಿವಕುಮಾರ್
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ