ಕಾವೇರಿ ವಿವಾದದಲ್ಲಿ ಪ್ರಧಾನಿ ಮೋದಿ ಮಧ್ಯಪ್ರವೇಶಿಸುವ ಅನಿವಾರ್ಯತೆ ಸೃಷ್ಟಿ: ವಾಟಾಳ್ ನಾಗರಾಜ್
ತಮಿಳುನಾಡಿಗೆ ಮತ್ತೆ ನೀರು ಹರಿಸುವಂತೆ ಸಿಡಬ್ಲ್ಯೂಎಂಎ ಆದೇಶ ಹೊರಡಿಸಿದ ಬಗ್ಗೆ ಬೇಸರ ವ್ಯಕ್ತಪಡಿಸಿದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್, ಈ ಹಿಂದೆ ಕಾವೇರಿ ವಿವಾದದ ಸಂಬದರ್ಭದಲ್ಲಿ ಪಿ.ವಿ.ನರಸಿಂಹರಾವ್, ಡಾ.ಸಿಂಗ್ ಪ್ರಧಾನಿಯಾಗಿದ್ದಾಗ ಮಧ್ಯಪ್ರವೇಶಿಸಿದ್ದರು. ಇದೀಗ ಪ್ರಧಾನಿ ಮೋದಿ ಮಧ್ಯಪ್ರವೇಶಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದರು.

ಬೆಂಗಳೂರು, ಸೆ.29: ತಮಿಳುನಾಡಿಗೆ ಮತ್ತೆ ನೀರು ಹರಿಸುವಂತೆ ಸಿಡಬ್ಲ್ಯೂಎಂಎ ಆದೇಶ ಹೊರಡಿಸಿದ ಬಗ್ಗೆ ಬೇಸರ ವ್ಯಕ್ತಪಡಿಸಿದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj), ಕಾವೇರಿ ವಿವಾದದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಧ್ಯಪ್ರವೇಶಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆದೇಶ ಖಂಡಿಸಿ ನಾಳೆ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಚಳವಳಿ ನಡೆಸುತ್ತೇವೆ ಎಂದರು.
ನಗರದ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಿಂದ ತೀವ್ರ ಆಘಾತವಾಗಿದೆ. ಕಾವೇರಿ ವಿವಾದದಲ್ಲಿ ಈ ಹಿಂದೆ ಪಿ.ವಿ.ನರಸಿಂಹರಾವ್, ಡಾ.ಸಿಂಗ್ ಪ್ರಧಾನಿಯಾಗಿದ್ದಾಗ ಮಧ್ಯಪ್ರವೇಶಿಸಿದ್ದರು. ಈಗ ಪ್ರಧಾನಿ ಮೋದಿ ಮಧ್ಯಪ್ರವೇಶಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದರು.
ಮಳೆ ಕೊರತೆಯಿಂದ ಕಾವೇರಿ ಕೊಳ್ಳದ ಜಲಾಶಯಗಳು ಭರ್ತಿಯಾಗಿಲ್ಲ. ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ತಮಿಳುನಾಡಿಗೆ ನೀರು ಹರಿಸಲಾಗಿದೆ. ಆದರೆ ಈಗ ಸಂಕಷ್ಟದ ಕಾಲ, ಸಂಕಷ್ಟಸೂತ್ರದ ಅನ್ವಯ ಪರಿಹಾರ ನೀಡಲಿ. ತಮಿಳುನಾಡಿಗೆ ಮತ್ತೆ ನೀರು ಹರಿಸಿದರೆ ನಾವೆಲ್ಲರೂ ಸಂಕಷ್ಟಕ್ಕೆ ಸಿಲುಕುತ್ತೇವೆ ಎಂದರು.
ಬೆಂಗಳೂರಿನ ಜನರಿಗೆ ಕುಡಿಯುವ ನೀರಿಗೂ ಸಮಸ್ಯೆ ಎದುರಾಗುತ್ತದೆ. ತಮಿಳುನಾಡು, ಕರ್ನಾಟಕ ಸರ್ಕಾರದ ಜೊತೆ ಪ್ರಧಾನಿ ಮಾತಾಡಬೇಕು. ಸಂಕಷ್ಟದ ಸೂತ್ರದ ಅನ್ವಯ ಪ್ರಧಾನಿ ಕರ್ನಾಟಕಕ್ಕೆ ನ್ಯಾಯ ಕೊಡಿಸಬೇಕು. ರಾಜ್ಯದ ಸಂಸದರು ಪ್ರಧಾನಿ ಮೋದಿ ಮನವೊಲಿಸಿ ಮಧ್ಯಸ್ಥಿಕೆಗೆ ಆಗ್ರಹಿಸಲಿ. ಪ್ರತಿ ಹಂತದಲ್ಲೂ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ, ಸಹಿಸಲು ಆಗುವುದಿಲ್ಲ. ಕೂಡಲೇ ಪ್ರಧಾನಮಂತ್ರಿ ಮಧ್ಯಪ್ರವೇಶಿಸಿ ಕರ್ನಾಟಕಕ್ಕೆ ನ್ಯಾಯ ಒದಗಿಸಲಿ ಎಂದರು.
ಇದನ್ನೂ ಓದಿ: Karnataka Bandh: ರ‍್ಯಾಲಿ ತೆಗೆಯಲು ಅವಕಾಶ ನೀಡದ ಸಿದ್ದರಾಮಯ್ಯ ಯಾರ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ? ವಾಟಾಳ್ ನಾಗರಾಜ್
ಎರಡು ರಾಜ್ಯದವರನ್ನು ಕರೆದು ಮೋದಿ ಮಾತನಾಡಬೇಕು. ನಮ್ಮ ಪಾರ್ಲಿಮೆಂಟ್ ಸದಸ್ಯರು ರಾಜಕೀಯ ಮಾಡದೇ ಎಲ್ಲಾ ಸದಸ್ಯರು ಪ್ರಧಾನಿಗಳನ್ನು ಭೇಟಿ ಮಾಡಿ ನಮ್ಮ ಪರಿಸ್ಥಿತಿ ಹೇಳಬೇಕು ಎಂದು ವಾಟಾಳ್ ನಾಗರಾಜ್ ಹೇಳಿದರು.
ನಿರ್ವಾಹಣ ಸಮಿತಿ 15 ದಿನ 3 ಸಾವಿರ ಕ್ಯೂಸೆಕ್ ನೀರನ್ನು ಪ್ರತಿದಿನ ಬಿಡಬೇಕು ಎಂದು ಪ್ರಾಧಿಕಾರ ಸೂಚಿಸಿದೆ. ಕರ್ನಾಟಕ ಅವರಿಗೆ ಬೇಕಾಗಿಲ್ಲ. ಒಂದು ದಿನದಲ್ಲಿ ತಮಿಳುನಾಡಿನ ಜಲಾಶಯ ಮಟ್ಟ ಅಳಿಬಹುದಿತ್ತು. ತಾವೇ ಬಂದು ಪರಿಶೀಲನೆ ಮಾಡಿ ನೊಡಬೇಕಾಗಿತ್ತು. ನೋಡದೇ ಪ್ರಾಧಿಕಾರ ಆದೇಶ ಮಾಡಿದೆ ಎಂದು ಅಸಾಮಾಧಾನ ಹೊರಹಾಕಿದರು.
ಸಂಕಷ್ಟ ಪರಿಸ್ಥಿತಿಯಲ್ಲಿ ಸ್ಪಷ್ಟ ತೀರ್ಮಾನ ಈವರೆಗೂ ಆಗಿಲ್ಲ. ತುರ್ತು ಶಾಸನ ಸಭೆ ಕರೆದು ನಮಗೆ ನೀರಿಲ್ಲ. ನಾವು ಕೊಡಲ್ಲ ಎಂದು ಶಾಸನ ಸಭೆಯಲ್ಲಿ ತೀರ್ಮಾನ ಮಾಡಬೇಕು ಎಂದು ವಾಟಾಳ್ ನಾಗರಾಜ್ ಹೇಳಿದರು.
ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಚಳವಳಿ
CWMA ಆದೇಶ ಖಂಡಿಸಿ ನಾಳೆ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಚಳವಳಿ ನಡೆಸುತ್ತೇವೆ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ. ಅ.5ರಂದು ಬೆಂಗಳೂರಿನಿಂದ ವಾಹನಗಳಲ್ಲಿ ಕೆಆರ್‌ಎಸ್‌ಗೆ ತೆರಳಿ ಪ್ರತಿಭಟನೆ ನಡೆಸುತ್ತೇವೆ. ಕಾವೇರಿ ವಿಚಾರದಲ್ಲಿ ನಿರಂತರವಾಗಿ ಹೋರಾಟ ನಡೆಸುತ್ತೇವೆ ಎಂದರು.
ಇವತ್ತಿನ ಬಂದ್ ಐತಿಹಾಸಿಕ ಬಂದ್. ಇಷ್ಟು ಒತ್ತಡ ಹಾಕಿದ್ದಾರೆ. ನೋಟಿಸ್ ಯಾಕೆ ಜಾರಿ ಮಾಡಿದರೋ ಗೊತ್ತಿಲ್ಲ. ನಗರ ಪೊಲೀಸ್ ಆಯುಕ್ತರು ಸುದ್ದಿಗೋಷ್ಟಿ ಮಾಡಿದ್ದಾರೆ. ಯಾರೋ ಸಂಘಟನೆ ಬಂದ್ಗೆ ಕರೆ ಮಾಡಿದರು, ನಾವು ಬಂದೊಬಸ್ತ್ ಮಾಡಿದೆವು ಅಂತ ಹೇಳಿದ್ದಾರೆ. ಆಯುಕ್ತರೇ ನಾನು ವಾಟಳ್ ನಾಗರಾಜ್. ಪ್ರಮಾಣಿಕನಾಗಿ ಹೊರಾಟ ಮಾಡುವ ಹೋರಾಟಗಾರ ಎಂದರು.
ನಾವು ಒಕ್ಕೂಟ ಮಾಡಿ ಹೊರಾಟ ಮಾಡಿದ್ದೇವೆ. ನೀವು ಕಮಿಷನರ್ ಆದಾಗ ಮಾಡಿದ್ದಲ್ಲ. ಬಹಳ ವರ್ಷದಿಂದ ಮಾಡಿಕೊಂಡಿ ಬಂದಿದ್ದೇವೆ. ಕಮಿಷನರೇ ನಾಲಿಗೆಯನ್ನು ಭದ್ರ ಇಟ್ಟುಕೊಳ್ಳಿ, ಯಾರೋ ಬಂದ್ ಕರೆದಿದ್ದಾರೆ ಎಂದರೇ ಏನರ್ಥ? ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ವಿರುದ್ಧ ಆಕ್ರೋಶ ಹೊರಹಾಕಿದರು.
ಯಾರೋ ಕರ್ನಾಟಕ ಬಂದ್ ಮಾಡಿದರು ಅಂತ ಹೇಳಬೇಡಿ. ಮುಖ್ಯಮಂತ್ರಿ, ಸಚಿವ ಸಂಪುಟ, ಕನ್ನಡ ಜನತೆಗೆ ನಾವು ಯಾರು ಅಂತ ಗೊತ್ತು. ಇವತ್ತು ಕರ್ನಾಟಕದ ಜನ ನಿಮಗೆ ಉತ್ತರ ಕೊಟ್ಟಿದ್ದಾರೆ. ಕಮಿಷನರ್ ಮಾತನಾಡಿರುವುದು ಗೌರವವಲ್ಲ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:22 pm, Fri, 29 September 23