ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ಎತ್ತಿಹಿಡಿದ CWMA: ಪ್ರತಿಭಟನೆ ಮಾಡ್ತೇವೆ ಎಂದ ರಾಕೇಶ್ ಸಿಂಗ್

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 13, 2023 | 4:43 PM

ತಮಿಳುನಾಡು ಬ್ಯಾಕ್​ಲಾಕ್ ನೀರು ಬಿಡಬೇಕು ಎಂದು ವಾದ ಮಾಡಿತ್ತು. ಅದಕ್ಕೂ ನಾವು ನೀರು ಬಿಡಲು ಆಗುವುದಿಲ್ಲ ಎಂದು ಹೇಳಿದ್ದೆವು. ಆದರೂ 3000 ಕ್ಯೂಸೆಕ್ ನೀರು ಬಿಡಬೇಕೆಂದು CWMA ಆದೇಶಿಸಿದೆ. ಮತ್ತೆ ಪುನರ್​ ಪರಿಶೀಲನಾ ಅರ್ಜಿ ಹಾಕಿ ಪ್ರತಿಭಟನೆ ಮಾಡುತ್ತೇವೆ. ಜಲಾಶಯದ ಒಳಹರಿವು ಹೆಚ್ಚಾದ್ರೆ, ಬ್ಯಾಕ್​ಲಾಕ್ ನೀರು ಬಿಡುತ್ತೇವೆ ಎಂದು ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಹೇಳಿದ್ದಾರೆ.

ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ಎತ್ತಿಹಿಡಿದ CWMA: ಪ್ರತಿಭಟನೆ ಮಾಡ್ತೇವೆ ಎಂದ ರಾಕೇಶ್ ಸಿಂಗ್
ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್
Follow us on

ನವದೆಹಲಿ, ಅ.13: ತಮಿಳುನಾಡಿಗೆ ಮತ್ತೆ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWMA) ಆದೇಶ ನೀಡಿತ್ತು. ಹೌದು, ಅ.16ರಿಂದ ಅ.31ರವರೆಗೆ ನೀರು ಹರಿಸಲು ಸೂಚಿಸಲಾಗಿದೆ. ಸಭೆ ಬಳಿಕ ಈ ಕುರಿತು ಮಾತನಾಡಿದ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್(Rakesh Singh)   ‘15 ದಿನ ನೀರು ಬಿಡುವುದಕ್ಕೆ ಆಗುವುದಿಲ್ಲ ಎಂದು ವಾದ ಮಾಡಿದ್ದೇವೆ. ಕಾವೇರಿ ನಿಯಂತ್ರಣ ಸಮಿತಿ 3 ಸಾವಿರ ಕ್ಯೂಸೆಕ್​ ಬಿಡಲು ಹೇಳಿತ್ತು. ನಾವು ಜಲಾಶಯಗಳಿಂದ ನೀರು ಬಿಡುವುದಿಲ್ಲ, ಹಿಂಗಾರು ಮಳೆ ನೋಡಿಕೊಂಡು ಮುಂದೆ ನೀರು ಬಿಡುತ್ತೆವೆ ಎಂದಿದ್ದೇವೆ.

ಪುನರ್​ ಪರಿಶೀಲನಾ ಅರ್ಜಿ ಹಾಕಿ ಪ್ರತಿಭಟನೆ

ಆದರೆ, ತಮಿಳುನಾಡು ಬ್ಯಾಕ್​ಲಾಕ್ ನೀರು ಬಿಡಬೇಕು ಎಂದು ವಾದ ಮಾಡಿತ್ತು. ಅದಕ್ಕೂ ನಾವು ನೀರು ಬಿಡಲು ಆಗುವುದಿಲ್ಲ ಎಂದು ಹೇಳಿದ್ದೆವು. ಆದರೂ 3000 ಕ್ಯೂಸೆಕ್ ನೀರು ಬಿಡಬೇಕೆಂದು CWMA ಆದೇಶಿಸಿದೆ. ಮತ್ತೆ ಪುನರ್​ ಪರಿಶೀಲನಾ ಅರ್ಜಿ ಹಾಕಿ ಪ್ರತಿಭಟನೆ ಮಾಡುತ್ತೇವೆ. ಜಲಾಶಯದ ಒಳಹರಿವು ಹೆಚ್ಚಾದ್ರೆ, ಬ್ಯಾಕ್​ಲಾಕ್ ನೀರು ಬಿಡುತ್ತೇವೆ. ಹಿಂಗಾರು ಮಳೆ ಆಗದಿದ್ರೆ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದಿದ್ದಾರೆ. ಇನ್ನು ಇದೇ ವೇಳೆ ಮೇಕೆದಾಟು ವಿಚಾರವನ್ನು ಮತ್ತೆ ಪ್ರಸ್ತಾಪ ಮಾಡಿದ್ದೇವೆ. ಈ ವಿಚಾರವಾಗಿ ಪ್ರತ್ಯೇಕ ಸಭೆ ಕರೆಯಲು ಮನವಿ ಮಾಡಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ:ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯಲ್ಲಿ ತಮಿಳುನಾಡು ಮತ್ತೊಂದು ಕ್ಯಾತೆ, ಇದಕ್ಕೆ ಕರ್ನಾಟಕ ಹೇಳಿದ್ದೇನು?

ಇನ್ನು ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಸೆಪ್ಟೆಂಬರ್ 29 ಶುಕ್ರವಾರ ದಂದು ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲೂ ಕರ್ನಾಟಕಕ್ಕೆ ತೀವ್ರ ಹಿನ್ನಡೆಯಾಗಿತ್ತು. ಹೌದು, ತಮಿಳುನಾಡಿಗೆ 15 ದಿನಗಳ ಕಾಲ ಪ್ರತಿ ದಿನ 3 ಸಾವಿರ ಕ್ಯೂಸೆಕ್ ನೀರು ಹರಿಸಬೇಕೆಂದು ಮಂಗಳವಾರ ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿದ್ದ ಆದೇಶವನ್ನು ಪಾಲಿಸುವಂತೆ ಸಿಡಬ್ಲ್ಯುಎಂಎ ಸೂಚನೆ ನೀಡಿತ್ತು.

ಕರ್ನಾಟಕ ಮಾಡಿದ್ದ ವಾದವೇನು?

ಕರ್ನಾಟಕದ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಶೇ 53 ರಷ್ಟು ಮಳೆ ಕೊರತೆ ಇದೆ. ರಾಜ್ಯ ಸರ್ಕಾರವು 161 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿದೆ. 34 ತಾಲೂಕುಗಳು ಮಧ್ಯಮ ಬರ ಪೀಡಿತವೆಂದು ಸರ್ಕಾರ ಘೋಷಿಸಿದೆ. 32 ತೀವ್ರ ಬರ ಪೀಡಿತ ತಾಲೂಕುಗಳು ಕಾವೇರಿ ಜಲಾನಯನ ಪ್ರದೇಶದಲ್ಲಿವೆ. ಕರ್ನಾಟಕ ತನ್ನ ಜಲಾಶಯಗಳಿಂದ ನೀರು ಹರಿಸುವ ಸ್ಥಿತಿಯಲ್ಲಿಲ್ಲ. ಕರ್ನಾಟಕ ಸರ್ಕಾರ ಈಗಾಗಲೇ ನಿಮ್ಮ ಎಲ್ಲಾ ಆದೇಶ ಪಾಲಿಸಿದೆ. ರಾಜ್ಯದಲ್ಲಿ ನೀರು ಕೊರತೆ ಇರುವುದನ್ನು ಸಿಡಬ್ಲ್ಯುಎಂಎ ಗಮನಿಸಬೇಕು. ರಾಜ್ಯದ ರೈತರು, ಜನರ ಆಕ್ರೋಶ ಹೆಚ್ಚಾಗಿದ್ದು ಸರಣಿ ಬಂದ್ ನಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಮತ್ತೆ ನೀರು ಹರಿಸುವುದು ಅಸಾಧ್ಯವೆಂದು ಕರ್ನಾಟಕ ಪರ ಅಧಿಕಾರಿಗಳು ವಾದ ಮಂಡಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ