AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯಲ್ಲಿ ತಮಿಳುನಾಡು ಮತ್ತೊಂದು ಕ್ಯಾತೆ, ಇದಕ್ಕೆ ಕರ್ನಾಟಕ ಹೇಳಿದ್ದೇನು?

ಬಂದು ಕಡೆ ತಮಿಳುನಾಡಿಗೆ ನೀರು ಬಿಡುತ್ತಿರುವ ಬಗ್ಗೆ ಕರ್ನಾಟಕದಲ್ಲಿ ಆಕ್ರೋಶ ಭುಗಿಲೆದ್ದಿದ್ದು ಮತ್ತೊಂದೆಡೆ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯಲ್ಲಿ ತಮಿಳುನಾಡು ಮತ್ತೊಂದು ಕ್ಯಾತೆ ತೆಗೆದಿದೆ. ಪ್ರತಿದಿನ 12,500 ಕ್ಯೂಸೆಕ್ ನೀರು ಹರಿಸುವಂತೆ ತಮಿಳುನಾಡು ವಾದ ಮಂಡಿಸುತ್ತಿದ್ದು ಬಾಕಿ ಉಳಿದ 83 ಟಿಎಂಸಿ ನೀರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದೆ.

ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯಲ್ಲಿ ತಮಿಳುನಾಡು ಮತ್ತೊಂದು ಕ್ಯಾತೆ, ಇದಕ್ಕೆ ಕರ್ನಾಟಕ ಹೇಳಿದ್ದೇನು?
ಕಾವೇರಿ ನದಿ
H P
| Edited By: |

Updated on:Sep 26, 2023 | 1:26 PM

Share

ದೆಹಲಿ,ಸೆ.26: ಕಾವೇರಿ ನೀರು (Cauvery Water Dispute) ಹರಿಸಲು CWRC ಆದೇಶದ ಅವಧಿ ಮುಕ್ತಾಯ ಹಿನ್ನೆಲೆ ದೆಹಲಿಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಕಚೇರಿಯಲ್ಲಿ ಸಭೆ ನಡೆಯುತ್ತಿದೆ. ಕರ್ನಾಟಕ (Karnataka) ಹಾಗೂ ತಮಿಳುನಾಡು (Tamilnadu) ಅಧಿಕಾರಿಗಳು ವರ್ಚುವಲ್ ಮೂಲಕ ಸಭೆಯಲ್ಲಿ ಭಾಗಿಯಾಗಿ ಚರ್ಚೆಯಲ್ಲಿ ಪಾಲ್ಗೊಂಡಿದ್ದಾರೆ. ಬಂದು ಕಡೆ ತಮಿಳುನಾಡಿಗೆ ನೀರು ಬಿಡುತ್ತಿರುವ ಬಗ್ಗೆ ಬೆಂಗಳೂರು ಬಂದ್ (Bengaluru Bandh) ಮಾಡಿ ಕರ್ನಾಟಕದಲ್ಲಿ ಆಕ್ರೋಶ ಭುಗಿಲೆದ್ದಿದ್ದು ಮತ್ತೊಂದೆಡೆ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯಲ್ಲಿ ತಮಿಳುನಾಡು ಮತ್ತೊಂದು ಕ್ಯಾತೆ ತೆಗೆದಿದೆ. ಪ್ರತಿದಿನ 12,500 ಕ್ಯೂಸೆಕ್ ನೀರು ಹರಿಸುವಂತೆ ತಮಿಳುನಾಡು ವಾದ ಮಂಡಿಸುತ್ತಿದ್ದು ಬಾಕಿ ಉಳಿದ 83 ಟಿಎಂಸಿ ನೀರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದೆ.

ಸಭೆಯಲ್ಲಿ ಪ್ರತಿದಿನ 12,500 ಕ್ಯೂಸೆಕ್ ನೀರು ಹರಿಸುವಂತೆ ಒತ್ತಾಯಿಸಿದ್ದು ಜೂನ್​ನಿಂದ ಸೆಪ್ಟೆಂಬರ್​​ವರೆಗೂ 123 ಟಿಎಂಸಿ ನೀರನ್ನು ಕರ್ನಾಟಕ ತಮಿಳುನಾಡಿಗೆ ಹರಿಸಬೇಕಿತ್ತು. ಆದರೆ ಕರ್ನಾಟಕ ಈವರೆಗೂ ಕೇವಲ 40 ಟಿಎಂಸಿ ನೀರು ಹರಿಸಿದೆ. ಬಾಕಿ ಉಳಿದ 83 ಟಿಎಂಸಿ ನೀರನ್ನು ಕೂಡಲೇ ಬಿಡುಗಡೆ ಮಾಡಬೇಕು. ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಯಾವುದೇ ಕಾರಣಕ್ಕೂ ನೀರಿನ ಪ್ರಮಾಣ ಕಡಿಮೆ ಮಾಡಬಾರದು. ತಮಿಳುನಾಡಿಗೆ ಹರಿಸಬೇಕಾದ ನೀರನ್ನು CWRC ಕೊಡಬೇಕು. ಅಕ್ಟೋಬರ್​​ನಲ್ಲಿ 22 ಟಿಎಂಸಿ ನೀರನ್ನು ಸಹ ಕರ್ನಾಟಕ ಹರಿಸಬೇಕು. ಸೆಪ್ಟೆಂಬರ್​​​ ತಿಂಗಳ 7 ಟಿಎಂಸಿ ಬಾಕಿ ನೀರು ಹರಿಸಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯಲ್ಲಿ ತಮಿಳುನಾಡು ವಾದ ಮಂಡಿಸಿದೆ.

ಕರ್ನಾಟಕದ ವಾದವೇನು?

ಇನ್ನು CWRC ಮುಂದೆ ಕರ್ನಾಟಕದ ಅಧಿಕಾರಿಗಳು ತಮ್ಮ ವಾದ ಮಂಡಿಸಿದ್ದು ವಾಸ್ತವ ಸ್ಥಿತಿ ಪರಿಚಯ ಮಾಡಿಕೊಟ್ಟಿದ್ದಾರೆ. ಸೆ.25ರ ವರೆಗೆ ಕರ್ನಾಟಕದ ನಾಲ್ಕು ಜಲಾಶಯಗಳಿಗೆ ಒಟ್ಟು ಒಳಹರಿವಿನ ಕೊರತೆ 53.04% ಆಗಿದೆ. ಕರ್ನಾಟಕ ಸರ್ಕಾರವು ದಿನಾಂಕ 13.09.2023 ರ ಆದೇಶದಲ್ಲಿ ರಾಜ್ಯದ 161 ತಾಲೂಕುಗಳನ್ನು ತೀವ್ರ ಬರ ಪೀಡಿತ ಮತ್ತು 34 ತಾಲೂಕುಗಳನ್ನು ಮಧ್ಯಮ ಬರ ಪೀಡಿತ ಎಂದು ಘೋಷಿಸಿದೆ. ಈ ಪೈಕಿ 32 ತೀವ್ರ ಬರ ಪೀಡಿತ ತಾಲೂಕುಗಳು ಮತ್ತು 15 ಮಧ್ಯಮ ಬರ ಪೀಡಿತ ತಾಲೂಕುಗಳು ಕಾವೇರಿ ಜಲಾನಯನ ಪ್ರದೇಶದಲ್ಲಿವೆ. ಈ ಅಂಶವನ್ನು ಸಮಿತಿ ಗಂಭೀರವಾಗಿ ಪರಿಗಣಿಸಬೇಕೆಂದು CWRC ಮುಂದೆ ಕರ್ನಾಟಕ ವಾಸ್ತವ ಸ್ಥಿತಿ ಸಲ್ಲಿಕೆ ಮಾಡಿದೆ.

ಇದನ್ನೂ ಓದಿ: ಕಾವೇರಿ ನೀರಿಗಾಗಿ ಬೆಂಗಳೂರು ಬಂದ್: ಸಿದ್ದರಾಮಯ್ಯ, ಹೆಚ್​ಡಿ ದೇವೇಗೌಡ ಹೇಳಿದ್ದಿಷ್ಟು

ಕರ್ನಾಟಕವು ತನ್ನ ಜಲಾಶಯಗಳಿಂದ ಯಾವುದೇ ನೀರನ್ನು ಬಿಡುಗಡೆ ಮಾಡುವ ಸ್ಥಿತಿಯಲ್ಲಿಲ್ಲ. ರಾಜ್ಯದ ಜಲಾಶಯಗಳಿಂದ ಯಾವುದೇ ಹರಿವನ್ನು ಅಂತಾರಾಜ್ಯ ಗಡಿಯಾದ ಬಿಳಿಗುಂಡ್ಲುನಲ್ಲಿ ನಿರ್ವಹಿಸಲು ಸಾಧ್ಯವಿಲ್ಲ ಎಂದ ಕರ್ನಾಟಕ ಹೇಳಿದೆ. 34 ತಾಲೂಕುಗಳು ಭಾಗಶಃ ಬರಕ್ಕೆ ತುತ್ತಾಗಿವೆ. ಈ ಪರಿಸ್ಥಿತಿಯಲ್ಲಿ ಕಾವೇರಿ ನೀರು ಹರಿಸಲು ಸಾಧ್ಯವಿಲ್ಲ. ಜಲಾಶಯಗಳಲ್ಲಿ ನೀರಿಲ್ಲ, ನೀರು ಬಿಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಅಧಿಕಾರಿಗಳು ವಾದ ಮಂಡಿಸಿದ್ದಾರೆ.

ಇನ್ನು ಸಭೆಯಲ್ಲಿ ಕಾವೇರಿ ನಿರ್ವಹಣಾ ಸಮಿತಿ ಅಧ್ಯಕ್ಷ ವಿನೀತ್ ಗುಪ್ತಾ, ಸಮಿತಿ ಕಾರ್ಯದರ್ಶಿ ಡಿ.ಟಿ.ಶರ್ಮಾ, ಸದಸ್ಯ ಗೋಪಾಲ್ ರಾಯ್ ಭಾಗಿಯಾಗಿದ್ದು ತಮಿಳುನಾಡಿನ ಪರವಾಗಿ ಜಲಸಂಪನ್ಮೂಲ ಕಾರ್ಯದರ್ಶಿ ಸಂದೀಪ್ ಸಕ್ಸೇನಾ, ಕಾವೇರಿ ತಾಂತ್ರಿಕ ಸಮಿತಿ ಅಧ್ಯಕ್ಷ ಸುಬ್ರಮಣ್ಯಂ ಮತ್ತಿತರರು ಭಾಗಿಯಾಗಿದ್ದಾರೆ. ಇಂದಿನ ಸಭೆಯಲ್ಲಿ ಈವರೆಗೂ ಹರಿಸಿರುವ ನೀರಿನ ಪ್ರಮಾಣದ ಬಗ್ಗೆ ಚರ್ಚೆ ನಡೆಯುತ್ತಿದೆ. ಜೂನ್‌ನಿಂದ ಸೆಪ್ಟೆಂಬರ್ ವರೆಗೂ ಹರಿಸಿರುವ ನೀರಿನ ಪ್ರಮಾಣ ಎಷ್ಟು? ಬಿಳಿಗುಂಡ್ಲು ಮೂಲಕ ಹರಿದ ನೀರು ಎಷ್ಟು? ಕೊರತೆಯ ಪ್ರಮಾಣ ಎಷ್ಟು ಎನ್ನುವ ಬಗ್ಗೆ ಲೆಕ್ಕಚಾರ ಹಾಕಲಾಗುತ್ತಿದೆ.

ರಾಜ್ಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:17 pm, Tue, 26 September 23