ಒಂದಂಕಿ ಲಾಟರಿ: ಚಾರ್ಜ್‌ಶೀಟ್ ಸಲ್ಲಿಸಿದ CBI
ಬೆಂಗಳೂರು: ಒಂದಂಕಿ ಲಾಟರಿ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕ್ಲೀನ್‌ಚಿಟ್ ನೀಡಲಾಗಿದೆ. ADGP ಅಲೋಕ್ ಕುಮಾರ್, ಧರಣೇಂದ್ರ ಹಾಗೂ ಪ್ರಕರಣದ ಪ್ರಮುಖ ಆರೋಪಿ ಪಾರಿರಾಜನ್ಗೂ ಕೂಡ ಕ್ಲೀನ್‌ಚಿಟ್ ನೀಡಲಾಗಿದೆ. ನಿವೃತ್ತ ಐಜಿ ಸೇರಿ 10 ಜನರ ವಿರುದ್ಧ ಸಿಬಿಐ ಅಧಿಕಾರಿಗಳಿಂದ ಬೆಂಗಳೂರಿನ ಸಿಬಿಐ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ನಿವೃತ್ತ ಐಜಿ ಪದ್ಮನಯನ ಮೊದಲನೇ ಆರೋಪಿ. ಇನ್ಸ್‌ಪೆಕ್ಟರ್ ಕನಕಲಕ್ಷ್ಮೀ ಎರಡನೇ ಆರೋಪಿ. ಜಿ.ಟಿ.ರಾಮಸ್ವಾಮಿ, ಸಿ.ಆರ್.ರಂಗನಾಥ, ಲೋಕೇಶ್, ಶ್ರೀಕಂಠ, ರವಿಪ್ರಕಾಶ್, ತಿಪ್ಪೇಸ್ವಾಮಿ, ವೇಣುಗೋಪಾಲ ಮತ್ತು ರವಿಕುಮಾರ್ ವಿರುದ್ಧ […]
ಬೆಂಗಳೂರು: ಒಂದಂಕಿ ಲಾಟರಿ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕ್ಲೀನ್‌ಚಿಟ್ ನೀಡಲಾಗಿದೆ. ADGP ಅಲೋಕ್ ಕುಮಾರ್, ಧರಣೇಂದ್ರ ಹಾಗೂ ಪ್ರಕರಣದ ಪ್ರಮುಖ ಆರೋಪಿ ಪಾರಿರಾಜನ್ಗೂ ಕೂಡ ಕ್ಲೀನ್‌ಚಿಟ್ ನೀಡಲಾಗಿದೆ.
ನಿವೃತ್ತ ಐಜಿ ಸೇರಿ 10 ಜನರ ವಿರುದ್ಧ ಸಿಬಿಐ ಅಧಿಕಾರಿಗಳಿಂದ ಬೆಂಗಳೂರಿನ ಸಿಬಿಐ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ನಿವೃತ್ತ ಐಜಿ ಪದ್ಮನಯನ ಮೊದಲನೇ ಆರೋಪಿ. ಇನ್ಸ್‌ಪೆಕ್ಟರ್ ಕನಕಲಕ್ಷ್ಮೀ ಎರಡನೇ ಆರೋಪಿ. ಜಿ.ಟಿ.ರಾಮಸ್ವಾಮಿ, ಸಿ.ಆರ್.ರಂಗನಾಥ, ಲೋಕೇಶ್, ಶ್ರೀಕಂಠ, ರವಿಪ್ರಕಾಶ್, ತಿಪ್ಪೇಸ್ವಾಮಿ, ವೇಣುಗೋಪಾಲ ಮತ್ತು ರವಿಕುಮಾರ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಸುಳ್ಳು ಕೇಸ್ ದಾಖಲು ಮಾಡಿದ ಆರೋಪದಲ್ಲಿ 10 ಮಂದಿ ಪೊಲೀಸರ ವಿರುದ್ದ ಜಾರ್ಜ್ ಶೀಟ್ ಸಲ್ಲಿಸಲಾಗಿದೆ.
ನನಗೆ ನ್ಯಾಯ ಸಿಕ್ಕಿದೆ: ನನ್ನ ಹೆಸರನ್ನ ಉದ್ದೇಶಪೂರ್ವಕವಾಗಿ ತಳಕು ಹಾಕಲಾಗಿತ್ತು. ಪಾರಿರಾಜನ್ ಫೋನ್ ಮಾಡಿದ್ದ ಸುಳಿವನ್ನ ಬಂಡವಾಳವಾಗಿಟ್ಟುಕೊಂಡು ನನ್ನ ಹೆಸರನ್ನ ಸೇರಿಸಿದ್ರು. ನಾನು ದೊಡ್ಡ ಹಗರಣವನ್ನ ಮಾಡಿದ ರೀತಿ ಬಿಂಬಿಸಲಾಗಿತ್ತು. ಚಾರ್ಜ್ಶೀಟ್ನಲ್ಲಿ ಎಲ್ಲೂ ನನ್ನ ಹೆಸರು ಉಲ್ಲೇಖವಾಗಿಲ್ಲ ಎಂದು ಟಿವಿ9ಗೆ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಇದೇ ಪ್ರಕರಣದಿಂದ 24 ಗಂಟೆಗಳಲ್ಲಿ ನಾನು ಅಮಾನತಾಗಿದ್ದೆ. ಸಾರ್ವಜನಿಕರಲ್ಲಿ ನನ್ನ ಬಗ್ಗೆ ತಪ್ಪಿತಸ್ಥನಂತೆ ಬಿಂಬಿಸಲಾಗಿತ್ತು. ಒಂದಂಕಿ ಲಾಟರಿ ಪ್ರಕರಣದಿಂದ ನನಗೆ ವೇತನವೂ ಆಗಿಲ್ಲ. ದೇವರು ನನ್ನನ್ನು ಕಾಪಾಡಿದ್ದಾನೆ ನನಗೆ ನ್ಯಾಯ ಸಿಕ್ಕಿದೆ ಎಂದು ಅಲೋಕ್ ಕುಮಾರ್ ಪ್ರಕರಣದಿಂದಾದ ನೋವನ್ನು ಮತ್ತು ತಮಗೆ ಸಿಕ್ಕಜಯಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ.
Published On - 3:50 pm, Thu, 6 February 20