AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರ್ಪೆಟ್​ನಿಂದ ಹಿಡಿದು ಡೈಮಂಡ್‌ವರೆಗೆ: CBI ತಂಡದಿಂದ ಪ್ರತಿಯೊಂದರ ಲೆಕ್ಕಾಚಾರ

ಬೆಂಗಳೂರು: KPCC ಅಧ್ಯಕ್ಷ ಡಿ.ಕೆ ಶಿವಕುಮಾರ್ ನಿವಾಸ ಸೇರಿ ಹಲವೆಡೆ ಸಿಬಿಐ ಅಧಿಕಾರಿಗಳು ರೇಡ್ ಮಾಡಿ ಸತತ 11 ಗಂಟೆಗಳಿಂದ ಶೋಧ ನಡೆಸಿದ್ದಾರೆ. ಸದಾಶಿವನಗರದಲ್ಲಿರುವ ಡಿಕೆಶಿ ನಿವಾಸದಲ್ಲಿ ಸಿಬಿಐ ತಂಡದಿಂದ ಪರಿಶೀಲನೆ ನಡೆಸಲಾಗುತ್ತಿದೆ. ಸಿಬಿಐ ಅಧಿಕಾರಿಗಳು ಶಿವಕುಮಾರ್​ ನಿವಾಸದ ಪ್ರತಿಯೊಂದು ವಸ್ತುಗಳ ಮೌಲ್ಯಮಾಪನ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಡಿ.ಕೆ.ಶಿವಕುಮಾರ್‌ಗೆ ಈವರೆಗೆ ಇರುವ ಆದಾಯ ಎಷ್ಟು? ಡಿ.ಕೆ.ಶಿವಕುಮಾರ್‌ ಮನೆಯಲ್ಲಿರುವ ಸ್ಥಿರಾಸ್ತಿ, ಚರಾಸ್ತಿ ಎಷ್ಟು? ಎಂದು ಅಧಿಕಾರಿಗಳು ಲೆಕ್ಕಾಚಾರ ಹಾಕುತ್ತಿದ್ದಾರೆ ಎಂದು ಹೇಳಲಾಗಿದೆ. ನಿವಾಸದಲ್ಲಿರುವ ಟಿವಿ, ಫ್ರಿಡ್ಜ್‌, ಎಸಿ ಸೇರಿದಂತೆ […]

ಕಾರ್ಪೆಟ್​ನಿಂದ ಹಿಡಿದು ಡೈಮಂಡ್‌ವರೆಗೆ: CBI ತಂಡದಿಂದ ಪ್ರತಿಯೊಂದರ ಲೆಕ್ಕಾಚಾರ
Follow us
KUSHAL V
|

Updated on: Oct 05, 2020 | 5:57 PM

ಬೆಂಗಳೂರು: KPCC ಅಧ್ಯಕ್ಷ ಡಿ.ಕೆ ಶಿವಕುಮಾರ್ ನಿವಾಸ ಸೇರಿ ಹಲವೆಡೆ ಸಿಬಿಐ ಅಧಿಕಾರಿಗಳು ರೇಡ್ ಮಾಡಿ ಸತತ 11 ಗಂಟೆಗಳಿಂದ ಶೋಧ ನಡೆಸಿದ್ದಾರೆ. ಸದಾಶಿವನಗರದಲ್ಲಿರುವ ಡಿಕೆಶಿ ನಿವಾಸದಲ್ಲಿ ಸಿಬಿಐ ತಂಡದಿಂದ ಪರಿಶೀಲನೆ ನಡೆಸಲಾಗುತ್ತಿದೆ. ಸಿಬಿಐ ಅಧಿಕಾರಿಗಳು ಶಿವಕುಮಾರ್​ ನಿವಾಸದ ಪ್ರತಿಯೊಂದು ವಸ್ತುಗಳ ಮೌಲ್ಯಮಾಪನ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಡಿ.ಕೆ.ಶಿವಕುಮಾರ್‌ಗೆ ಈವರೆಗೆ ಇರುವ ಆದಾಯ ಎಷ್ಟು? ಡಿ.ಕೆ.ಶಿವಕುಮಾರ್‌ ಮನೆಯಲ್ಲಿರುವ ಸ್ಥಿರಾಸ್ತಿ, ಚರಾಸ್ತಿ ಎಷ್ಟು? ಎಂದು ಅಧಿಕಾರಿಗಳು ಲೆಕ್ಕಾಚಾರ ಹಾಕುತ್ತಿದ್ದಾರೆ ಎಂದು ಹೇಳಲಾಗಿದೆ.

ನಿವಾಸದಲ್ಲಿರುವ ಟಿವಿ, ಫ್ರಿಡ್ಜ್‌, ಎಸಿ ಸೇರಿದಂತೆ ಮನೆಯ ನಿರ್ಮಾಣ ವೆಚ್ಚವನ್ನು ಸಹ ಮೌಲ್ಯಮಾಪನ ಮಾಡಲಾಗುತ್ತಿದೆಯಂತೆ. ಇದಲ್ಲದೆ, ಡಿ.ಕೆ ಶಿವಕುಮಾರ್‌ಗೆ ಸೇರಿರುವ ಕಾರುಗಳ ಮಾಡೆಲ್‌ ಮತ್ತು ಬೆಲೆಯ ಬಗ್ಗೆ ಸಹ ಅಧಿಕಾರಿಗಳು ಲೆಕ್ಕ ಮಾಡುತ್ತಿದ್ದಾರಂತೆ.

ಇದಲ್ಲದೆ, ಮನೆಯುಲ್ಲಿ ಇರುವ ಇತರೆ ದುಬಾರಿ ವಸ್ತುಗಳ ಮೌಲ್ಯಮಾಪನ ಸಹ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ. ಮನೆಯಲ್ಲಿರುವ ಕಾರ್ಪೆಟ್‌ಯಿಂದ ಹಿಡಿದು ಕಡಿಮೆ ಹಾಗೂ ದುಬಾರಿ ವೆಚ್ಚದ ವಸ್ತುಗಳ ಬೆಲೆ ಮತ್ತು ಖರೀದಿಯ ಬಿಲ್​ಗಳನ್ನು ಅಧಿಕಾರಿಗಳು ಕೇಳುತ್ತಿದ್ದಾರಂತೆ. ಜೊತೆಗೆ, ಇವೆಲ್ಲಾ ವಸ್ತುಗಳ ಖರೀದಿಗೆ ಹಣದ ಮೂಲದ ಬಗ್ಗೆ ಸಹ ಪ್ರಶ್ನಿಸಿದ್ದಾರಂತೆ. ಜೊತೆಗೆ, ತಮ್ಮ ಮಗಳು ಐಶ್ವರ್ಯಾರ ನಿಶ್ಚಿತಾರ್ಥಕ್ಕೆ ತಂದಿದ್ದ ಒಡವೆಗಳ ಪರಿಶೀಲನೆ ಸಹ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಡಿ.ಕೆ ಶಿವಿಕುಮಾರ್ ಪುತ್ರಿಯ ನಿಶ್ಚಿತಾರ್ಥಕ್ಕೆ ಖರೀದಿ ಮಾಡಿದ್ದ ವಜ್ರ ಮತ್ತು ಚಿನ್ನಾಭರಣಗಳ ಪರಿಶೀಲನೆ ಮಾಡಲಾಯಿತು. ಡಿಕೆಶಿ ಪುತ್ರಿ ಐಶ್ವರ್ಯಾ ನಿಶ್ಚಿತಾರ್ಥ ನವೆಂಬರ್‌ನಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ಡೈಮಂಡ್ ಹಾಗೂ ಚಿನ್ನಾಭರಣಗಳ ಖರೀದಿಯ ರಸೀದಿ ಬಗ್ಗೆ ಸಹ ಅಧಿಕಾರಿಗಳು ಪ್ರಶ್ನೆ ಮಾಡಿದ್ದಾರಂತೆ. ಜೊತೆಗೆ, ಬೀರು, ಕಪಾಟಿನಲ್ಲಿರುವ ವಸ್ತ್ರಗಳ ಪರಿಶೀಲನೆ ಸಹ ನಡೆದಿದೆ ಎಂದು ತಿಳಿದುಬಂದಿದೆ.

ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಬಿಡಿಎನಲ್ಲಿ ಬಾಕಿಯುಳಿಸಿಕೊಂಡಿರುವ ಸಂಸ್ಥೆಗಳ ಬಡ್ಡಿ ಒಮ್ಮೆ ಮನ್ನಾ: ಡಿಕೆಶಿ
ಬಿಡಿಎನಲ್ಲಿ ಬಾಕಿಯುಳಿಸಿಕೊಂಡಿರುವ ಸಂಸ್ಥೆಗಳ ಬಡ್ಡಿ ಒಮ್ಮೆ ಮನ್ನಾ: ಡಿಕೆಶಿ