ರೌಡಿ ಬಾಂಬೆ ಸಲೀಂನ ಪತ್ನಿ ಜೊತೆ ಚಾಟಿಂಗ್! ಬಾಗೇಪಲ್ಲಿಯ ಚಿತ್ರಾವತಿ ಡ್ಯಾಂ ಬಳಿ ಯುವಕನ ಕೊಲೆ

ಚಿಕ್ಕಬಳ್ಳಾಪುರ: ಬೆಂಗಳೂರಿನ ಕುಖ್ಯಾತ ರೌಡಿ ಬಾಂಬೆ ಸಲೀಂನಿಂದ ಮತ್ತೊಂದು ಹತ್ಯೆ ನಡೆದಿದ್ದು ಸುಮಾರು 6 ತಿಂಗಳ ಬಳಿಕ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಬಾಂಬೆ ಸಲೀಂ ಪತ್ನಿ ಶಾಹೀನಾ ಜತೆ ಪೃಥ್ವಿರಾಜ್ ಎಂಬ ಯುವಕನೊಬ್ಬ ಪ್ರತಿದಿನ ಚಾಟಿಂಗ್ ಮಾಡುತ್ತಿದ್ದನಂತೆ. ಇದಲ್ಲದೆ, ಇಬ್ಬರ ನಡುವೆ ಅಕ್ರಮ ಸಂಬಂಧವಿರುವ ಶಂಕೆ ಸಹ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಪೃಥ್ವಿರಾಜ್​ನನ್ನು ಸಲೀಂ & ಟೀಂ ಕೊಲೆಗೈದಿದೆ ಎಂದು ತಿಳಿದುಬಂದಿದೆ. ಬಾಂಬೆ ಸಲೀಂ ಮಾಡಿದ್ದ ಕೊಲೆ ಸ್ಕೆಚ್ ಹೇಗಿತ್ತು? ಪೀಣ್ಯ […]

ರೌಡಿ ಬಾಂಬೆ ಸಲೀಂನ ಪತ್ನಿ ಜೊತೆ ಚಾಟಿಂಗ್! ಬಾಗೇಪಲ್ಲಿಯ ಚಿತ್ರಾವತಿ ಡ್ಯಾಂ ಬಳಿ ಯುವಕನ ಕೊಲೆ
Follow us
KUSHAL V
| Updated By: ಸಾಧು ಶ್ರೀನಾಥ್​

Updated on: Oct 05, 2020 | 4:42 PM

ಚಿಕ್ಕಬಳ್ಳಾಪುರ: ಬೆಂಗಳೂರಿನ ಕುಖ್ಯಾತ ರೌಡಿ ಬಾಂಬೆ ಸಲೀಂನಿಂದ ಮತ್ತೊಂದು ಹತ್ಯೆ ನಡೆದಿದ್ದು ಸುಮಾರು 6 ತಿಂಗಳ ಬಳಿಕ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಬಾಂಬೆ ಸಲೀಂ ಪತ್ನಿ ಶಾಹೀನಾ ಜತೆ ಪೃಥ್ವಿರಾಜ್ ಎಂಬ ಯುವಕನೊಬ್ಬ ಪ್ರತಿದಿನ ಚಾಟಿಂಗ್ ಮಾಡುತ್ತಿದ್ದನಂತೆ. ಇದಲ್ಲದೆ, ಇಬ್ಬರ ನಡುವೆ ಅಕ್ರಮ ಸಂಬಂಧವಿರುವ ಶಂಕೆ ಸಹ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಪೃಥ್ವಿರಾಜ್​ನನ್ನು ಸಲೀಂ & ಟೀಂ ಕೊಲೆಗೈದಿದೆ ಎಂದು ತಿಳಿದುಬಂದಿದೆ. ಬಾಂಬೆ ಸಲೀಂ ಮಾಡಿದ್ದ ಕೊಲೆ ಸ್ಕೆಚ್ ಹೇಗಿತ್ತು? ಪೀಣ್ಯ ಕೈಗಾರಿಕಾ ಪ್ರದೇಶದ ಕಂಪನಿಯಲ್ಲಿ ಕೆಲಸ‌ ಮಾಡುತ್ತಿದ್ದ ಪ್ರಥ್ವಿರಾಜ್, ಶಾಹೀನಾಳ ಜೊತೆ ಪ್ರತಿದಿನ ಚಾಟಿಂಗ್​ ಮಾಡುತ್ತಿದ್ದ. ತನ್ನ ಪತ್ನಿಯ ವ್ಯವಹಾರದ ಬಗ್ಗೆ ತಿಳಿದ ಸಲೀಂ, ಪೃಥ್ವಿರಾಜ್​ನ ಕೊಲೆ ಮಾಡಲು ನಿರ್ಧರಿಸಿದ. ಅಂತೆಯೇ, ಶಾಹೀನಾ ಮುಖಾಂತರ ಪೃಥ್ವಿರಾಜ್‌ಗೆ ಕರೆ ಮಾಡಿ ಚಿಕ್ಕಬಳ್ಳಾಪುರಕ್ಕೆ ಕರೆಸಿದ್ದ. ತಾನು ತನ್ನ ಕಾರಿನಲ್ಲಿ ಚಾಲಕನ ಜತೆ ಬರುವುದಾಗಿ ಶಾಹೀನಾ ಹೇಳಿದ್ದಳು ಎಂದು ಹೇಳಲಾಗಿದೆ.

ಆದ್ರೆ ಕಾರನ್ನು ಬಾಂಬೆ ಸಲೀಂ ಚಲಾಯಿಸಿಕೊಂಡು ಬಂದಿದ್ದನಂತೆ. ಚಿಕ್ಕಬಳ್ಳಾಪುರದ ಬಳಿ ಶಾಹೀನಾನ ಕಂಡು ಪೃಥ್ವಿರಾಜ್‌ ಆಕೆಯ ಕಾರು ಹತ್ತಿದ್ದ. ಹೈವೇಯಲ್ಲಿ ಕಾರು ಹತ್ತಿದ್ದ ಪ್ರಥ್ವಿರಾಜ್, ಶಾಹೀನಾ ಮೇಲೆ ಕೈ ಹಾಕಿ ಕೂತಿದ್ದನಂತೆ. ಇದರಿಂದ ರೊಚ್ಚಿಗೆದ್ದ ಬಾಂಬೆ ಸಲೀಂ ದಾರಿ ಮಧ್ಯೆಯೇ ಶಾಹೀನಾಳನ್ನ ಮನೆಗೆ ಕಳುಹಿಸಿ ಪೃಥ್ವಿರಾಜ್​ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದ.

ಬಳಿಕ ಡ್ಯಾಗರ್‌ನಿಂದ ಮನಸೋ ಇಚ್ಛೆ ಹಲ್ಲೆ ನಡೆಸಿ ಸಲೀಂ ಮತ್ತು ಆತನ ಸಹಚರರು ಪೃಥ್ವಿರಾಜ್​ನ ಕೊಲೆಗೈದಿದ್ದರು. ಇದಾದ ನಂತರ ಮಾರ್ಚ್ 16ರಂದು ಜಿಲ್ಲೆಯ ಬಾಗೇಪಲ್ಲಿಯ ಚಿತ್ರಾವತಿ ಡ್ಯಾಂ ಬಳಿ ಪೃಥ್ವಿರಾಜ್ ಮೃತದೇಹ ಪತ್ತೆಯಾಗಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿದ್ದ ಬಾಗೇಪಲ್ಲಿ ಪೊಲೀಸರು ಕೊಲೆ ರಹಸ್ಯವನ್ನು ಭೇದಿಸಿದ್ದಾರೆ.

ಸದ್ಯ ಬೇರೆ ಬೇರೆ ಕೊಲೆ ಕೇಸ್‌ನಲ್ಲಿ ಬಾಂಬೆ ಸಲೀಂ ಆಗಲೇ ಪರಪ್ಪನ ಆಗ್ರಹಾರ ಜೈಲು ಸೇರಿದ್ದಾನೆ. ಇದೀಗ, ಪೃಥ್ವಿರಾಜ್ ಕೊಲೆಯಲ್ಲಿ ಭಾಗಿಯಾಗಿದ್ದ ಆತನ ನಾಲ್ವರು ಸಹಚರರು ಸಹ ಅರೆಸ್ಟ್ ಆಗಿದ್ದಾರೆ. ಬಂಧಿತ ಆರೋಪಿಗಳನ್ನ ಬಾಗೇಪಲ್ಲಿಯ ನಾರಾಯಣಸ್ವಾಮಿ, ಚೇತನ್ ಕುಮಾರ್, ಬಾಲಚಂದ್ರ ಹಾಗೂ ವಿನೋದ್ ಎಂದು ಗುರುತಿಸಲಾಗಿದೆ.

‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ