ಸಿಡಿ ಯುವತಿ ನನ್ನನ್ನು ಭೇಟಿ ಮಾಡಿಲ್ಲ; ನೆರವು ಕೋರಿ ಬಂದರೆ ನೆರವು ನೀಡುವೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

ಕಷ್ಟ ಅಂತ ಬಂದವರಿಗೆ ನಾನು ಸಹಾಯ ಮಾಡುತ್ತೇನೆ. ಪ್ರಾಮಾಣಿಕವಿದ್ದರೆ ಅವರಿಗೆಲ್ಲ ಸಹಾಯ ಮಾಡುವೆ. ಸಿಡಿ ಯುವತಿ ವಿಷಯದಲ್ಲೂ ಅಷ್ಟೇ; ಭೇಟಿಯಾಗಲು ಬಂದರೆ ನಾನು ನೆರವು ನೀಡುವೆ ಎಂದಿದ್ದಾರೆ ಡಿ.ಕೆ. ಶಿವಕುಮಾರ್.

ಸಿಡಿ ಯುವತಿ ನನ್ನನ್ನು ಭೇಟಿ ಮಾಡಿಲ್ಲ; ನೆರವು ಕೋರಿ ಬಂದರೆ ನೆರವು ನೀಡುವೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್
ಡಿಕೆ ಶಿವಕುಮಾರ್ (ಸಂಗ್ರಹ ಚಿತ್ರ)
Follow us
ಸಾಧು ಶ್ರೀನಾಥ್​
|

Updated on:Mar 27, 2021 | 12:07 PM

ಬೆಂಗಳೂರು: ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಲೈಂಗಿಕ ಸಿಡಿ ಪ್ರಕರಣದಲ್ಲಿ ನಿನ್ನೆ ರಾತ್ರಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದ ಸಿಡಿ ಯುವತಿ ತಾನು ಪೋಷಕರ ಜೊತೆ ಮಾತನಾಡುತ್ತಾ ತಾನು ಡಿಕೆ ಶಿವಕುಮಾರ್ ಅವರ ಭೇಟಿಗೆ ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದ್ದಳು. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷರೂ ಆದ ಕಾಂಗ್ರೆಸ್​ ಶಾಸಕ ಡಿ.ಕೆ.ಶಿವಕುಮಾರ್ ಬೆಂಗಳೂರಲ್ಲಿ ಹೇಳಿಕೆ ನೀಡಿದ್ದು, CD ಯಲ್ಲಿದ್ದ ಯುವತಿ ನನ್ನ ಭೇಟಿಗೆ ಪ್ರಯತ್ನಿಸಿರಬಹುದು. ಆದರೆ ಆ ಯುವತಿ ನನ್ನನ್ನು ಭೇಟಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕಷ್ಟ ಅಂತ ಬಂದವರಿಗೆ ನಾನು ಸಹಾಯ ಮಾಡುತ್ತೇನೆ. ನಮ್ಮ ಕಚೇರಿಗೆ ದಿನಕ್ಕೆ ಬೇಕಾದಷ್ಟು ಜನರು ಬರುತ್ತಾರೆ. ಪ್ರಾಮಾಣಿಕವಿದ್ದರೆ ಅವರಿಗೆಲ್ಲ ಸಹಾಯ ಮಾಡುವೆ. ಸಿಡಿ ಯುವತಿ ವಿಷಯದಲ್ಲೂ ಅಷ್ಟೇ; ಭೇಟಿಯಾಗಲು ಬಂದರೆ ನಾನು ನೆರವು ನೀಡುವೆ ಎಂದಿದ್ದಾರೆ. ಇನ್ನು ಸಿಡಿ ಪ್ರಕರಣದ ಆರೋಪಿ, ಮಾಜಿ ಪತ್ರಕರ್ತ ನರೇಶ್ ಗೌಡ ನನಗೆ ಬೇಕಾದ ಹುಡುಗ, ನಾನು ಭೇಟಿಯಾಗಿದ್ದೇನೆ. ನಾನು ಕೆಲವು ವಿಚಾರ ತಿಳಿಸಿದ್ದೇನೆ, ಅವನಿಂದ ಪಡೆದಿದ್ದೇನೆ ಎಂದೂ ಡಿ.ಕೆ.ಶಿವಕುಮಾರ್ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ಇನ್ನು, ತನ್ನ ಬಗ್ಗೆ ಶಾಸಕ ರಮೇಶ್ ಜಾರಕಿಹೊಳಿ ವ್ಯಂಗ್ಯವಾಗಿ ಮಾತನಾಡಿರುವ ಬಗ್ಗೆ ಪ್ರತಿಕ್ರಿಯಿಸುತ್ತಾ ನನ್ನ ಬಗ್ಗೆ ರಮೇಶ್​ಗೆ ಅನುಕಂಪವಿದ್ದರೆ ನನಗೆ ಬಹಳ ಸಂತೋಷ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

Published On - 12:01 pm, Sat, 27 March 21