75 Years 0f India’s Independence: ಕಿತ್ತೂರು ಕೋಟೆಯಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ

| Updated By: ಸಾಧು ಶ್ರೀನಾಥ್​

Updated on: Mar 12, 2021 | 1:42 PM

75 years of India's Independence Celebration: ಐತಿಹಾಸಿಕ ಕಿತ್ತೂರು ಕೋಟೆಯಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.

75 Years 0f Indias Independence: ಕಿತ್ತೂರು ಕೋಟೆಯಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ
75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ
Follow us on

ಬೆಳಗಾವಿ: ಇಂದು ಶುಕ್ರವಾರ ಐತಿಹಾಸಿಕ ಕಿತ್ತೂರು ಕೋಟೆಯಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ವೇದಿಕೆ ಮೂಲಕ ಚಾಲನೆ ನೀಡಿದ್ದಾರೆ. ದೇಶದ 75 ಸ್ಥಳಗಳಲ್ಲಿ ನಡೆಯುವ ಕಾರ್ಯಕ್ರಮ ಪೈಕಿ ಕಿತ್ತೂರಿನಲ್ಲೂ ಕಾರ್ಯಕ್ರಮ ನೆರವೇರಿದೆ.

ಜಿಲ್ಲೆಯ ಕಿತ್ತೂರು ಪಟ್ಟಣ ಸೇರಿ ದೇಶದ 75 ಕಡೆ ಏಕಕಾಲಕ್ಕೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಡಿಸಿಎಂ ಲಕ್ಷ್ಮಣ್ ಸವದಿ, ಸಚಿವ ಅರವಿಂದ ಲಿಂಬಾವಳಿ, ಸಂಸದ ಅಣ್ಣಾ ಸಾಹೇಬ್ ಜೊಲ್ಲೆ, ಮಹಾಂತೇಶ ಕವಟಗಿಮಠ ಭಾಗಿಯಾಗಿದ್ದಾರೆ. ಜೊತೆಗೆ ಕಿತ್ತೂರು ಕಲ್ಮಠ ರಾಜಗುರು ಶ್ರೀ ಮಡಿವಾಳ ರಾಜಯೋಗೀಂದ್ರ, ಶ್ರೀ ನಿಚ್ಚನಕಿಯ ಮಡಿವಾಳೇಶ್ವರ ಮಠದ ಪಂಚಾಕ್ಷರಿ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಿತ್ತೂರು ಸರ್ಕಾರಿ ಶಾಲೆ ವಿದ್ಯಾರ್ಥಿನಿಯರಿಂದ ರಾಷ್ಟ್ರಗೀತೆ ಜೊತೆಗೆ ನಾಡಗೀತೆ ಗಾಯನ ಕಾರ್ಯಕ್ರಮ ನಡೆಸಲಾಗಿದೆ.

ಐತಿಹಾಸಿಕ ಕಿತ್ತೂರು ಕೋಟೆಯಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ

ಐತಿಹಾಸಿಕ ಕಿತ್ತೂರು ಕೋಟೆಯಲ್ಲಿ ನೆರೆದ ಜನ

ಇದನ್ನೂ ಓದಿ: 75 years of India’s Independence: ಆತ್ಮನಿರ್ಭರ ಭಾರತದ ಮೂಲಕ ಗಾಂಧೀಜಿಯವರ ಕನಸು ನನಸಾಗಿಸೋಣ: ಪ್ರಧಾನಿ ಕರೆ

ಇದನ್ನೂ ಓದಿ: Dandi March: 5 ಅಂಶಗಳಲ್ಲಿ ಐತಿಹಾಸಿಕ ದಂಡಿ ಯಾತ್ರೆಯ ಬಗ್ಗೆ ತಿಳಿದುಕೊಳ್ಳಿ