ಕರ್ನಾಟಕಕ್ಕೆ ಮೋದಿ ಗಿಫ್ಟ್​​: 3 ಕೇಂದ್ರೀಯ ವಿದ್ಯಾಲಯಗಳ ಸ್ಥಾಪನೆ

|

Updated on: Dec 07, 2024 | 9:57 AM

ಕೇಂದ್ರ ಸರ್ಕಾರವು 85 ಹೊಸ ಕೇಂದ್ರೀಯ ವಿದ್ಯಾಲಯಗಳ ಸ್ಥಾಪನೆಗೆ ಅನುಮೋದನೆ ನೀಡಿದೆ. ಇದರಲ್ಲಿ ಕರ್ನಾಟಕಕ್ಕೆ ಮೂರು ಹೊಸ ವಿದ್ಯಾಲಯಗಳು ಸಿಗಲಿವೆ. ಶಿವಮೊಗ್ಗದ ಕೇಂದ್ರೀಯ ವಿದ್ಯಾಲಯವನ್ನು ವಿಸ್ತರಿಸಲಾಗುತ್ತಿದೆ. ಈ ಯೋಜನೆಗೆ 5872.08 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಇದರಿಂದ ಸಾವಿರಾರು ವಿದ್ಯಾರ್ಥಿಗಳು ಹಾಗೂ ನೌಕರರಿಗೆ ಅನುಕೂಲವಾಗಲಿದೆ.

ಕರ್ನಾಟಕಕ್ಕೆ ಮೋದಿ ಗಿಫ್ಟ್​​: 3 ಕೇಂದ್ರೀಯ ವಿದ್ಯಾಲಯಗಳ ಸ್ಥಾಪನೆ
ಕೇಂದ್ರೀಯ ವಿದ್ಯಾಲಯ
Follow us on

ನವದೆಹಲಿ/ಬೆಂಗಳೂರು, ಡಿಸೆಂಬರ್​ 07: ಕರ್ನಾಟಕದಲ್ಲಿ (Karnataka) ಮೂರು ಸೇರಿ ದೇಶದಲ್ಲಿ 85 ಹೊಸ ಕೇಂದ್ರೀಯ ವಿದ್ಯಾಲಯಗಳನ್ನು (Kendriya Vidyalayas) ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದೇ ವೇಳೆ, ಶಿವಮೊಗ್ಗದ ಕೇಂದ್ರೀಯ ವಿದ್ಯಾಲಯದ ಎಲ್ಲ ತರಗತಿಗಳಿಗೆ ತಲಾ ಎರಡು ಸೆಕ್ಷನ್​​ಗಳನ್ನು ಹೊಸದಾಗಿ ಸೇರಿಸಲು ಕೂಡ ಸಂಪುಟ ಅನುಮೋದನೆ ನೀಡಿದೆ.

ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಶಿವಮೊಗ್ಗ ಕೇಂದ್ರೀಯ ವಿದ್ಯಾಲಯದಲ್ಲಿ ಎಲ್ಲ ತರಗತಿಗಳಲ್ಲಿ ಎರಡು ಹೆಚ್ಚುವರಿ ವಿಭಾಗಗಳನ್ನು ಸೇರಿಸುವ ಮೂಲಕ ಕೇಂದ್ರ ಸರ್ಕಾರಿ ನೌಕರರ ಸಂಖ್ಯೆಯನ್ನು ಹೆಚ್ಚಿಸಲು ಅನುಮೋದನೆ ನೀಡಿದೆ.

85 ಕೇಂದ್ರೀಯವಿದ್ಯಾಲಯಗಳ ಸ್ಥಾಪನೆಗೆ ಮತ್ತು ಒಂದು ಕೇಂದ್ರೀಯ ವಿದ್ಯಾಲಯದ ವಿಸ್ತರಣೆಗೆ 5872.08 ಕೋಟಿ ರೂ. ನೀಡಲಾಗುತ್ತದೆ. ಇದರಲ್ಲಿ, ಹೊಸ ಕೇಂದ್ರ ವಿದ್ಯಾಲಯ ಸ್ಥಾಪನೆಗೆ 2862.71 ಕೋಟಿ ರೂ. ಮತ್ತು ನಿರ್ವಹಣೆಗಾಗಿ 3009.37 ಕೋಟಿ ರೂ. ನೀಡಲು ನಿರ್ಣಯ ಮಾಡಲಾಗಿದೆ.

ಒಂದು ವಿದ್ಯಾಲಯದಲ್ಲಿ 960 ಮಕ್ಕಳಂತೆ ಒಟ್ಟು 82560 ಮಕ್ಕಳಿಗೆ ಪ್ರವೇಶಾವಕಾಶ ಸಿಗಲಿದೆ. ಒಂದು ಕೇಂದ್ರಿಯ ವಿದ್ಯಾಲಯಕ್ಕೆ 63 ನೌಕರರಂತೆ ಹಾಗೂ ಶಿವಮೊಗ್ಗದ ವಿಸ್ತರಿತ ಕೇಂದ್ರಿಯ ವಿದ್ಯಾಲಯದಲ್ಲಿ 33 ನೌಕರರಂತೆ 5388 ಜನರಿಗೆ ಉದ್ಯೋಗ ಸಿಗಲಿದೆ.

ಕರ್ನಾಟಕದ ಎಲ್ಲಿ ಸ್ಥಾಪನೆ?

ಕರ್ನಾಟಕದ ಯಾದಗಿರಿ ಜಿಲ್ಲೆಯ ಮುದ್ನಾಳ್​ ಗ್ರಾಮ, ಚಿತ್ರದುರ್ಗ ಜಿಲ್ಲೆಯ ಕುಂಚಿಗನಾಳ ಗ್ರಾಮ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಎಳರಗಿ (ಡಿ) ಗ್ರಾಮದಲ್ಲಿ ಕೇಂದ್ರೀಯ ವಿದ್ಯಾಲಯಗಳು ಸ್ಥಾಪನೆ ಆಗಲಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:56 am, Sat, 7 December 24