ದೆಹಲಿ: ರಾಜ್ಯಗಳಲ್ಲಿ ವಿವಿಧ ಯೋಜನೆಗಳಿಗೆ ಹಣ ಹೂಡಿಕೆ ತ್ವರಿತಗೊಳ್ಳಲೆಂಬ ಉದ್ದೇಶ ಹಿನ್ನೆಲೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಜಿಎಸ್ಟಿ ಪಾಲು ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರ ಜೂನ್ ತಿಂಗಳಲ್ಲಿ ವಿವಿಧ ರಾಜ್ಯಗಳಿಗೆ ಒಟ್ಟಿಗೆ ಎರಡು ಕಂತುಗಳ ಜಿಎಸ್ಟಿ ಪಾಲು (GST Devolution) ಹಂಚಿಕೆ ಮಾಡಿದೆ. ತಿಂಗಳಿಗೆ 59,140 ಕೋಟಿ ರೂ. ನೀಡಬೇಕಿದ್ದ ಕೇಂದ್ರ ಸರ್ಕಾರ (Central Government) ಈ ಬಾರಿ 1,18,280 ಕೋಟಿ ರೂ. ಹಣವನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವರ್ಗಾಯಿಸಿದೆ. ಜೂನ್ 12ರಂದು ಕೇಂದ್ರದಿಂದ ಹಣ ಬಿಡುಗಡೆ ಆಗಿದೆ.
ರಾಜ್ಯಗಳಲ್ಲಿ ವಿವಿಧ ಯೋಜನೆಗಳಿಗೆ ಹಣ ಹೂಡಿಕೆ ಸಾಧ್ಯವಾಗಲಿ ಎಂಬ ಕಾರಣಕ್ಕೆ ಮುಂಗಡವಾಗಿಯೇ ಜಿಎಸ್ಟಿ ಹಣ ನೀಡಲಾಗಿದೆ. ವಿವಿಧ ರಾಜ್ಯಗಳಿಗೆ ನೀಡಲಾಗಿರುವ 1,18,280 ರೂ ಪೈಕಿ ಕರ್ನಾಟಕಕ್ಕೆ 4,314 ಕೋಟಿ ರೂ. ದೊರೆತಿದೆ. ಮಹಾರಾಷ್ಟ್ರ ರಾಜ್ಯಕ್ಕೆ ಸಿಕ್ಕಿರುವುದು 7,472 ಕೋಟಿ ರೂ. ಮಹಾರಾಷ್ಟ್ರ ಮತ್ತು ಕರ್ನಾಟಕ ದೇಶದಲ್ಲಿ ಅತಿಹೆಚ್ಚು ಜಿಎಸ್ಟಿ ಸಂಗ್ರಹ ಮಾಡಿ ಕೇಂದ್ರಕ್ಕೆ ತಲುಪಿಸುವ ರಾಜ್ಯಗಳಾಗಿವೆ. ಜಿಎಸ್ಟಿ ಪಾಲಿನಲ್ಲಿ ಉತ್ತರಪ್ರದೇಶಕ್ಕೆ ಸಿಂಹ ಪಾಲು ಇದೆ. ಉ.ಪ್ರ.ಗೆ 21,218 ಕೋಟಿ ರೂ ಸಿಕ್ಕಿದೆ. ಬಿಹಾರ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ರಾಜ್ಯಗಳಿಗೆ 8,000 ಕೋಟಿ ರೂಗಿಂತ ಹೆಚ್ಚು ಜಿಎಸ್ಟಿ ಪಾಲು ಜೂನ್ ತಿಂಗಳಲ್ಲಿ ಸಿಕ್ಕಿದೆ.
? Central Government @FinMinIndia releases ₹1,18,280 crore as 3rd instalment of tax devolution to State Governments as against normal monthly devolution of ₹59,140 crore.
? One advance instalment in addition to the regular instalment due in June 2023 is being released to… pic.twitter.com/N6UyCYzGgu
— Ministry of Finance (@FinMinIndia) June 12, 2023
ಗುಜರಾತ್‍ಗೆ 4,114 ರೂ., ಛತ್ತೀಸ್‍ಗಡಗೆ 4,030 ರೂ., ಜಾರ್ಖಂಡ್‍ಗೆ 3,912 ರೂ., ಅಸ್ಸಾಂಗೆ 3,700 ರೂ., ತೆಲಂಗಾಣಕ್ಕೆ 2,486 ರೂ., ಕೇರಳಕ್ಕೆ 2,277 ರೂ., ಪಂಜಾಬ್‍ಗೆ 2,137 ರೂ., ಅರುಣಾಚಲಪ್ರದೇಶಕ್ಕೆ 2,078 ರೂ., ಉತ್ತರಾಖಂಡ್‍ಗೆ 1,322 ರೂ., ಹರಿಯಾಣಕ್ಕೆ 1,293 ರೂ. ಬಿಡುಗಡೆಯಾಗಿದೆ. ಹಿಮಾಚಲಪ್ರದೇಶ, ಮೇಘಾಲಯ, ಮಣಿಪುರ, ತ್ರಿಪುರಾ, ಗೋವಾ, ನಾಗಾಲ್ಯಾಂಡ್ ಹಾಗೂ ಸಿಕ್ಕಿಂಗೆ 800-900 ಕೋಟಿ ರೂ. ಬಿಡುಗಡೆಯಾಗಿದೆ.
ರಾಜ್ಯಗಳ ಆರ್ಥಿಕ ಸ್ಥಿತಿಗಳಿಗೆ ಅನುಸಾರವಾಗಿ ಕೇಂದ್ರ ಸರ್ಕಾರ ಜಿಎಸ್ಟಿ ಪಾಲು ಹಂಚಿಕೆಯನ್ನು ಮಾಡುತ್ತದೆ. ಹೆಚ್ಚು ಹಿಂದುಳಿದ ರಾಜ್ಯಗಳಾದ ಉತ್ತರಪ್ರದೇಶ, ಬಿಹಾರ, ಛತ್ತೀಸ್ಗಡ, ಜಾರ್ಖಂಡ್, ಮಧ್ಯಪ್ರದೇಶ ಮೊದಲಾದವಕ್ಕೆ ಹೆಚ್ಚಿನ ತೆರಿಗೆ ಪಾಲು ಇದೆ. ಹೀಗಾಗಿ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಮೊದಲಾದ ರಾಜ್ಯಗಳಿಗೆ ಕಡಿಮೆ ಜಿಎಸ್ಟಿ ಪಾಲು ದೊರಕುತ್ತದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ