ಸಾರ್ವಜನಿಕ ಗ್ರಂಥಾಲಯಗಳನ್ನು ಪುನರುಜ್ಜೀವನಗೊಳಿಸುವಲ್ಲಿ ಕರ್ನಾಟಕ ಕೈಗೊಂಡ ವಿಧಾನಗಳ ಬಗ್ಗೆ ಕೇಂದ್ರ ಮೆಚ್ಚುಗೆ, ಇದನ್ನು ನೋಡಿ ಕಲಿಯುವಂತೆ ರಾಜ್ಯಗಳಿಗೆ ತಾಕೀತು
ಪಂಚಾಯತ್ ರಾಜ್ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಲೋಕ್ ಪ್ರೇಮ್ ನಗರ್ ಅವರು ಎಲ್ಲಾ ರಾಜ್ಯಗಳ ಪಂಚಾಯತ್ ರಾಜ್ ಇಲಾಖೆಯ ಮುಖ್ಯಸ್ಥರಿಗೆ ಬರೆದ ಪತ್ರದಲ್ಲಿ, ಗ್ರಂಥಾಲಯಗಳ ಪುನರುಜ್ಜೀವನಗೊಳಿಸುವಲ್ಲಿ ಕರ್ನಾಟಕದ ಭಾಗವಹಿಸುವಿಕೆ ಯೋಗ್ಯವಾಗಿವೆ" ಎಂದು ಹೇಳಿದ್ದಾರೆ.

ತಂತ್ರಜ್ಞಾನವನ್ನು ಬಳಸಿಕೊಂಡು ಸಾರ್ವಜನಿಕ ಗ್ರಂಥಾಲಯಗಳನ್ನು(Public Libraries) ಪುನರುಜ್ಜೀವನಗೊಳಿಸುವಲ್ಲಿ ಕರ್ನಾಟಕದ ವಿಧಾನವನ್ನು ಅಳವಡಿಸಿಕೊಳ್ಳುವಂತೆ ಹಾಗೂ ಅದನ್ನು ನೋಡಿ ಕಲಿಯುವಂತೆ ಕೇಂದ್ರ ಸರ್ಕಾರವು ಇತರೆ ರಾಜ್ಯಗಳಿಗೆ ತಾಕೀತು ಮಾಡಿದೆ. ಹಾಗೂ ಕರ್ನಾಟಕ ಗ್ರಂಥಾಲಯಗಳು ಬದಲಾದ ಬಗ್ಗೆ ಕೇಂದ್ರ ಸರಕಾರ ಹೊಗಳಿದೆ.
ಪಂಚಾಯತ್ ರಾಜ್ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಲೋಕ್ ಪ್ರೇಮ್ ನಗರ್ ಅವರು ಎಲ್ಲಾ ರಾಜ್ಯಗಳ ಪಂಚಾಯತ್ ರಾಜ್ ಇಲಾಖೆಯ ಮುಖ್ಯಸ್ಥರಿಗೆ ಬರೆದ ಪತ್ರದಲ್ಲಿ, ಗ್ರಂಥಾಲಯಗಳ ಪುನರುಜ್ಜೀವನಗೊಳಿಸುವಲ್ಲಿ ಕರ್ನಾಟಕದ ಭಾಗವಹಿಸುವಿಕೆ ಯೋಗ್ಯವಾಗಿವೆ” ಎಂದು ಹೇಳಿದ್ದಾರೆ.
ಗ್ರಾಮೀಣ ಸಾರ್ವಜನಿಕ ಗ್ರಂಥಾಲಯಗಳನ್ನು ಪುನರುಜ್ಜೀವನಗೊಳಿಸಲು ಕರ್ನಾಟಕ ಏನು ಮಾಡಿದೆ ಎಂಬುದನ್ನು ತಿಳಿಸುವ ಪರಿಕಲ್ಪನೆಯ ಟಿಪ್ಪಣಿಯನ್ನು ಸಚಿವಾಲಯ ಸಿದ್ಧಪಡಿಸಿದೆ. ಇನ್ನು ಪ್ರೇಮ್ ನಗರ್ ಅವರು ತಂತ್ರಜ್ಞಾನದ ಮೂಲಕ ಸಾರ್ವಜನಿಕ ಗ್ರಂಥಾಲಯಗಳನ್ನು ಪುನರುಜ್ಜೀವನಗೊಳಿಸಲು “ಕರ್ನಾಟಕವು ಮಾಡಿದ ಪ್ರಯತ್ನಗಳನ್ನು ತಿಳಿಯಲು ಹಾಗೂ ಅಳವಡಿಸಿಕೊಳ್ಳಲು ಇತರೆ ರಾಜ್ಯಗಳಿಗೆ ತಿಳಿಸಿದ್ದಾರೆ.
So pleased to see this recognition from Govt of India for Karnataka's revitalization of rural public libraries. Rural public libraries can play a key role in their communities as vibrant decentralized learning spaces. pic.twitter.com/wWfaaEoT33
— Uma Mahadevan-Dasgupta (@readingkafka) July 12, 2022
ಕೇಂದ್ರ ಸಚಿವಾಲಯದ ಪ್ರಕಾರ, ಕರ್ನಾಟಕವು ಗ್ರಾಮೀಣ ಸಾರ್ವಜನಿಕ ಗ್ರಂಥಾಲಯಗಳನ್ನು ಪುನರುಜ್ಜೀವನಗೊಳಿಸಲು ಎರಡು ರೀತಿಯ ವಿಧಾನವನ್ನು ಅಳವಡಿಸಿಕೊಂಡಿದೆ. “ಮೊದಲನೆಯದಾಗಿ, ಗ್ರಾಮೀಣ ಗ್ರಂಥಾಲಯಗಳ ಪುನರುಜ್ಜೀವನ, ಗ್ರಾಮ ಪಂಚಾಯತ್ ಗ್ರಂಥಾಲಯಗಳು ಮತ್ತು ಮಾಹಿತಿ ಕೇಂದ್ರಗಳನ್ನು (GPLIC), ಮತ್ತು ಅವುಗಳನ್ನು ಬಹು-ಶಿಸ್ತಿನ ಮತ್ತು ಬಹು-ಪೀಳಿಗೆಯ ಕಲಿಕೆಯ ಸ್ಥಳಗಳಾಗಿ ಪರಿವರ್ತಿಸುವುದು. ಎರಡನೆಯದಾಗಿ, ಸಾರ್ವಜನಿಕ ಗ್ರಂಥಾಲಯಗಳ ಇಲಾಖೆಯು ಕರ್ನಾಟಕ ಸಾರ್ವಜನಿಕ ಡಿಜಿಟಲ್ ಗ್ರಂಥಾಲಯದ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಿದೆ ಇದರಿಂದ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದು ಎಂದು” ಪ್ರೇಮ್ ನಾಗರ್ ವಿವರಿಸಿದರು.
“ಕರ್ನಾಟಕವು 5,623 ಜಿಪಿಎಲ್‌ಐಸಿಗಳನ್ನು ಹೊಂದಿದ್ದು, 16 ಲಕ್ಷ ಅಥವಾ 1.6 ಮಿಲಿಯನ್ ಮಕ್ಕಳನ್ನು ಕೇವಲ ಒಂದು ವರ್ಷದಲ್ಲಿ ಉಚಿತವಾಗಿ ಸದಸ್ಯರನ್ನಾಗಿ ನೋಂದಾಯಿಸಲಾಗಿದೆ” ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಪಂಚಾಯತ್ ರಾಜ್) ಉಮಾ ಮಹದೇವನ್ ಮಾಹಿತಿ ನೀಡಿದರು. ಜೊತೆಗೆ 1.1 ಮಿಲಿಯನ್ ಪುಸ್ತಕಗಳನ್ನು ದೇಣಿಗೆಗಳ ಮೂಲಕ ಸಂಗ್ರಹಿಸಲಾಗಿದೆ. “ಇದು ತುಂಬಾ ತೃಪ್ತಿಕರ ಮತ್ತು ಅರ್ಥಪೂರ್ಣ ಯೋಜನೆಯಾಗಿದೆ” ಎಂದು ಹೇಳಿದರು.
Published On - 7:49 pm, Wed, 13 July 22