ವಿಜಯಪುರ: ವಿಜಯಪುರ (Vijaypur) ಜಿಲ್ಲಾ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಬಾಣಂತಿಯರು ಪರದಾಡುತ್ತಿದ್ದಾರೆ. ಸಿಜೇರಿಯನ್ ಡೆಲಿವರಿ ಆದ ಬಾಣಂತಿಯರ ಆಪರೇಷನ್ (Operation) ಸ್ಟಿಚಸ್ ಬಿಚ್ಚಿ ರಕ್ತಸ್ರಾವದಿಂದ ನರಳಾಡುತ್ತಿದ್ದಾರೆ. ರಕ್ತಸ್ರಾವದಿಂದ ಡಿಸ್ವ್ಯಾರ್ಜ್ ಆಗಿ ಮನೆಗೆ ಹೋಗಿದ್ದ ಬಾಣಂತಿಯರು ವಾಪಸ್ ಮತ್ತೇ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ಡಿಚ್ಚಿಸ್ ಬಿಚ್ಚಿರೋ ಕಾರಣ ಮತ್ತೆ ಬಾಣಂತಿಯರು ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಇದಕ್ಕೆ ಆಸ್ಪತ್ರೆಯ ವೈದ್ಯರ ಹಾಗೂ ಸಿಬ್ಬಂದಿಗಳ ನಿರ್ಲಕ್ಷ್ಯ ಕಾರಣ ಎಂದು ಜನರು ಆರೋಪ ಮಾಡುತ್ತಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ ಎಸ್ ಎಲ್ ಲಕ್ಕಣ್ಣವರ, ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಒಂದೇ ಆಪರೇಷನ್ ಥಿಯೇಟರ್ ಇದೆ. ಸಿಜೇರಿಯನ್ ಹೆರಿಗೆ ಆದವರಿಗೆ ಇನ್ಪೆಕ್ಷನ್ವ್ ಆಗಿದ್ದು ನಿಜಾ. ದಿನಕ್ಕೆ ಸರಾಸರಿ 40 ಕ್ಕೂ ಅಧಿಕ ಹೆರಿಗೆಗಳು ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಆಗುತ್ತವೆ. .ಈ ಪೈಕಿ ನಿತ್ಯ ಕನಿಷ್ಟ 15 ಗರ್ಭಿಣಿಯರಿಗೆ ಸಿಜೇರಿಯನ್ ಹೆರಿಗೆ ಆಗುತ್ತವೆ. ಒಂದೇ ಮಹಾಶಸ್ತ್ರಚಿಕಿತ್ಸಾ ಘಟಕ ಇರೋ ಕಾರಣ ಸಮಸ್ಯೆ ಆಗಿದೆ ಎಂದು ಹೇಳಿದರು.
ಹೆಚ್ಚು ಹೆರಿಗೆಗಳು ಆಗುತ್ತಿರೋ ಕಾರಣ ಓಟಿಯನ್ನು ಸರಿಯಾಗಿ ಕಾರ್ಬೋಲೈಜೇಷನ್ (ಶುಚೀಕರಣ) ಮಾಡಲಾಗುತ್ತಿಲ್ಲಾ. ಇನ್ನೊಂದು ಓಟಿ ತೆರೆಯಲು ಕ್ರಮ ತೆಗೆದುಕೊಳ್ಳಲಾಗುತ್ತಿದ್ದು, ಶೀಘ್ರದಲ್ಲೇ ಮುಕ್ತಾಯವಾಗಲಿದೆ. ಸದ್ಯ ಪುನಃ ಆಸ್ಪತ್ರೆಗೆ ದಾಖಲಾಗಿರೋ ಬಾಣಂತಿಯರಿಗೆ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಲಾಗುತ್ತದೆ ಎಂದು ಡಿಎಸ್ (DAS) ಮಾಹಿತಿ ನೀಡಿದ್ದಾರೆ.
ರಾಯಚೂರು ನಗರದ ರಿಮ್ಸ್ ಆಸ್ಪತ್ರೆಯೊಳಗಡೆ ಬೀದಿ ನಾಯಿಗಳ ಹಾವಳಿ
ರಾಯಚೂರು: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಗರದ ರಿಮ್ಸ್ ಆಸ್ಪತ್ರೆಯೊಳಗಡೆ ಕೂಡಾ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಬೀದಿ ನಾಯಿಗಳು 5 ಅಂತಸ್ತಿನ ಮಕ್ಕಳ ಕೋಣೆಗೆ ಪ್ರವೇಶ ಮಾಡಿವೆ. ರಿಮ್ಸ್ ಆಸ್ಪತ್ರೆಯ ಮಕ್ಕಳ ವಾರ್ಡ್ ಗಳಲ್ಲಿಯೂ ಬೀದಿ ನಾಯಿಗಳು ಓಡಾಡುತ್ತಿವೆ. ನಗರದಲ್ಲಿ ನಗರದಲ್ಲಿ ಮಹಿಳೆಯರು, ಮಕ್ಕಳ ಮೇಲೆ ಬೀದಿ ನಾಯಿಗಳು ದಾಳಿ ಸಾಮಾನ್ಯವಾಗಿದೆ. ಬೀದಿ ನಾಯಿಗಳ ಹಾವಳಿಯಿಂದ ಸಣ್ಣಪುಟ್ಟ ಘಟನೆಗಳು ನಡೆದಿದ್ವು. ಇಷ್ಟಿದ್ರು ನಗರಸಭೆ ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕಿಲ್ಲ. ಈಗ ರಿಮ್ಸ್ ಆಸ್ಪತ್ರೆಯಲ್ಲಿ ಬೀದಿ ನಾಯಿಗಳು ಓಡಾತ್ತಿದ್ದು, ರೋಗಿಗಳು, ಮಕ್ಕಳ ಮೇಲೆ ಬೀದಿನಾಯಿಗಳು ದಾಳಿ ನಡೆಸೋ ಭೀತಿ ಎದುರಾಗಿದೆ. ಇದಕ್ಕೆ ರಿಮ್ಸ್ ಅಧಿಕಾರಿಗಳ ದಿವ್ಯ ನಿರ್ಲಕ್ಷವೇ ಕಾರಣ ಎಂದು ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹೆಚ್ಚಿನ ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ