ಬಾಗಲಕೋಟೆ: ಪೊಲೀಸರಿಗೆ ಮನೆ ತೋರಿಸಿದರು ಎಂಬ ಕಾರಣಕ್ಕೆ ಪಕ್ಕದ ಮನೆಯವರ ಜೊತೆ ಜಗಳವಾಡಿದ ವಕೀಲೆ ಮೇಲೆ ಮಾರಣಾಂತಿಕ ಹಲ್ಲೆ

ಬಾಗಲಕೋಟೆ: ಪೊಲೀಸರಿಗೆ ಮನೆ ತೋರಿಸಿದರು ಎಂಬ ಕಾರಣಕ್ಕೆ ಪಕ್ಕದ ಮನೆಯವರ ಜೊತೆ ಜಗಳವಾಡಿದ ವಕೀಲೆ ಮೇಲೆ ಮಾರಣಾಂತಿಕ ಹಲ್ಲೆ
ವಕೀಲೆ ಮೇಲೆ ಹಲ್ಲೆ ನಡೆಸುತ್ತಿರುವ ವ್ಯಕ್ತಿ

ನನ್ನ ಪತಿ ಹಾಗೂ ನನ್ನ ಮೇಲೆ ಮಾರಣಾಂತಿಕ ಹಲ್ಲೆ ಆಗಿದೆ ಎಂದು ವಕೀಲೆ ಸಂಗೀತಾ ಶಿಕ್ಕೇರಿ ಆರೋಪಿಸಿದ್ದಾರೆ. ವಿನಾಯಕ ನಗರದ ನಿವಾಸಿ ಮಹಾಂತೇಶ್ ಚೊಳಚಗುಡ್ಡ ಹಲ್ಲೆ ಮಾಡಿರುವುದಾಗಿ ಆರೋಪ ಕೇಳಿಬಂದಿದೆ. ಕಾಲು ಎದೆ ಭಾಗ, ತಲೆಗೆ ಪೆಟ್ಟಾಗಿದೆ.

TV9kannada Web Team

| Edited By: sandhya thejappa

May 14, 2022 | 2:40 PM

ಬಾಗಲಕೋಟೆ: ಪೊಲೀಸರಿಗೆ (Police) ಮನೆ ತೋರಿಸಿದರು ಎಂಬ ಕಾರಣಕ್ಕೆ ಪಕ್ಕದ ಮನೆಯವರ ಜೊತೆ ವಕೀಲೆ (Lawyer) ಜಗಳವಾಡಿರುವ ಘಟನೆ ಬಾಗಲಕೋಟೆಯ ವಿನಾಯಕ ನಗರದಲ್ಲಿ ಸಂಭವಿಸಿದೆ. ಜಗಳದಲ್ಲಿ ವಕೀಲೆ, ಕುಟುಂಬಸ್ಥರು ಹಾಗೂ ಇನ್ನೋರ್ವ ವ್ಯಕ್ತಿ ಮಧ್ಯೆ ಮಾರಾಮಾರಿ ನಡೆದಿದೆ. ಈ ವೇಳೆ ವಕೀಲೆ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಗಾಯಾಳುಗಳನ್ನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮಾಂತೇಶ ಚೊಳಚಗುಡ್ಡ ಎಂಬ ವ್ಯಕ್ತಿ ವಕೀಲೆ ಸಂಗೀತಾ ಶಿಕ್ಕೇರಿ ಮೇಲೆ ಹಲ್ಲೆ ನಡೆಸಿದ್ದಾರೆ.

ನನ್ನ ಪತಿ ಹಾಗೂ ನನ್ನ ಮೇಲೆ ಮಾರಣಾಂತಿಕ ಹಲ್ಲೆ ಆಗಿದೆ ಎಂದು ವಕೀಲೆ ಸಂಗೀತಾ ಶಿಕ್ಕೇರಿ ಆರೋಪಿಸಿದ್ದಾರೆ. ವಿನಾಯಕ ನಗರದ ನಿವಾಸಿ ಮಹಾಂತೇಶ್ ಚೊಳಚಗುಡ್ಡ ಹಲ್ಲೆ ಮಾಡಿರುವುದಾಗಿ ಆರೋಪ ಕೇಳಿಬಂದಿದೆ. ಕಾಲು ಎದೆ ಭಾಗ, ತಲೆಗೆ ಪೆಟ್ಟಾಗಿದೆ. ನನ್ನ ಪತಿಗೆ ಕಿವಿ ಹಾಗೂ ತಲೆಗೆ ಗಾಯವಾಗಿದೆ. ಬಿಜೆಪಿ ಮುಖಂಡ ರಾಜು ನಾಯ್ಕರ್ ಕುಮ್ಮಕ್ಕಿನಿಂದ ಮಹಾಂತೇಶ ಚೊಳಚಗುಡ್ಡ ಹಲ್ಲೆ ಮಾಡಿದ್ದಾರೆ ಎಂದು ವಕೀಲೆ ದೂರಿದ್ದಾರೆ.

ವಿವಾದದಲ್ಲಿ ಇದ್ದ‌ ಮನೆ: ಬಾಗಲಕೋಟೆಯ ವಿನಾಯಕ ನಗರದ 3 ನೇ ಕ್ರಾಸ್​ನಲ್ಲಿರುವ ವಕೀಲೆ ಸಂಗೀತಾ ಶಿಕ್ಕೇರಿ ಮನೆಯ ಕಂಪೌಂಡ್​ನ ಜೆಸಿಬಿಯಿಂದ ಬೆಳಗಿನ ಜಾವ ಧ್ವಂಸ ಮಾಡಲಾಗಿದೆ. ಸಂಗೀತಾ ದೊಡ್ಡಪ್ಪ ಹನುಮಂತ ಶಿಕ್ಕೇರಿ ಅವರಿಂದ ಈ ಕೃತ್ಯ ನಡೆದಿದೆ ಎಂಬ ಆರೋಪ ಕೇಳಬಂದಿದೆ. ಸಂಗೀತಾ ಶಿಕ್ಕೇರಿ ತಾಯಿ ಶಾರದಾ ಶಿಕ್ಕೇರಿ, ಶುವಿತಾ ಶಿಕ್ಕೇರಿ ಹಾಗೂ ಹನುಮಂತ ಶಿಕ್ಕೇರಿ ಎಂಬುವರ ಮಧ್ಯೆ ವಿವಾದ ಇತ್ತು. ಬಾಗಲಕೋಟೆ ಜಿಲ್ಲಾ ನ್ಯಾಯಾಲಯದಲ್ಲಿ ಹಾಗೂ ದೆಹಲಿ ಸುಪ್ರೀಮ್ ಕೋರ್ಟ್​ನಲ್ಲಿ ಮನೆ ವಿವಾದ ವಿಚಾರಣಾ ಹಂತದಲ್ಲಿತ್ತು. ಬಾಗಲಕೋಟೆ ಹಿರಿಯ ನ್ಯಾಯಾಧೀಶರು ಯಥಾ ಸ್ಥಿತಿ ಕಾಪಾಡುವಂತೆ ಸ್ಟೇ ಇದೆ. ಸ್ಟೇ ಇದ್ದಾಗಲೂ ಕೃತ ಎಸಗಿದ್ದಾರೆ ಎಂದ ಎಂದು ಸಂಗೀತಾ ಆರೋಪಿಸಿದ್ದಾರೆ. ವಿದ್ಯುತ್ ಕಟ್ ಮಾಡಿಸಿ ನೀರು ಸರಬರಾಜು ಬಂದ್ ಮಾಡಿಸಿ ಮನೆ ಕಂಪೌಂಡ್ ಕೆಡವಿದ್ದಾರೆ ಎಂದು ದೊಡ್ಡಪ್ಪ ಹನುಮಂತ ಶಿಕ್ಕೇರಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಕಾಲೇಜು ಚುನಾವಣೆ ವಿಚಾರವಾಗಿ ವಿದ್ಯಾರ್ಥಿಗಳ ಬಡಿದಾಟ: ಬೆಳಗಾವಿ: ಬೆಳಗಾವಿಯ ಬಿಮ್ಸ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದಿದೆ. ಈ ಘಟನೆ ಮೇ 4ರಂದು ತಡರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೊಠಡಿಗೆ ನುಗ್ಗಿ ವಿದ್ಯಾರ್ಥಿ ಬುರಾರಾಮ್ ಗೋಧರೆ ಮೇಲೆ ಎಂಬಿಬಿಎಸ್ 4ನೇ ವರ್ಷದ 15 ವಿದ್ಯಾರ್ಥಿಗಳ ಗುಂಪು ಹಲ್ಲೆ ನಡೆಸಿದೆ. ವಿದ್ಯಾರ್ಥಿ ಬುರಾರಾಮ್ ಮೂಗು, ಕಿವಿ, ಬೆರಳಿಗೆ ತೀವ್ರ ಗಾಯವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ರಾಜಸ್ಥಾನದ ಉದಯಪುರ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಘಟನೆ ಸಂಬಂಧ ಬಿಮ್ಸ್ ಆಡಳಿತಾಧಿಕಾರಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ

ಪ್ರಕರಣ ಸಂಬಂಧ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಎಂಬಿಬಿಎಸ್​ನ 15 ವಿದ್ಯಾರ್ಥಿಗಳ ವಿರುದ್ಧ ಎಫ್​ಐಆರ್​​ ದಾಖಲಾಗಿದೆ. 15 ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಮೇ 1ರಂದು ಬಿಮ್ಸ್ ಕಾಲೇಜಿನ ಜಿಎಸ್​ಗೆ ಚುನಾವಣೆ ನಡೆದಿತ್ತು. ಚುನಾವಣೆ ವೇಳೆ ಕೃಷ್ಣಾ ರಾಥೋಡ್ ಆ್ಯಂಡ್ ಟೀಮ್‌ಗೆ ವಿರೋಧ ಮಾಡಿದ್ದಕ್ಕೆ ಬುರಾರಾಮ್ ಮೇಲೆ ಹಲ್ಲೆ ನಡೆಸಿದ್ದರು.

Follow us on

Related Stories

Most Read Stories

Click on your DTH Provider to Add TV9 Kannada