AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

NDAP: ಸರ್ಕಾರದ ಡೇಟಾ ಸಾರ್ವಜನಿಕರಿಗೆ ದೊರೆಯಲು ನ್ಯಾಷನಲ್ ಡೇಟಾ ಅಂಡ್ ಅನಲಿಟಿಕ್ಸ್ ಪ್ಲಾಟ್​ಫಾರ್ಮ್ ಅನಾವರಣ

ಸರ್ಕಾರದ ಡೇಟಾ ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗಲಿ ಎಂಬ ಉದ್ದೇಶದಿಂದ ನೀತಿ ಆಯೋಗವು ಶುಕ್ರವಾರದ ನ್ಯಾಷನಲ್ ಡೇಟಾ ಅನಲಿಟಿಕ್ಸ್ ಪ್ಲಾಟ್​ಫಾರ್ಮ್ ಅನಾವರಣಗೊಳಿಸಿದೆ.

NDAP: ಸರ್ಕಾರದ ಡೇಟಾ ಸಾರ್ವಜನಿಕರಿಗೆ ದೊರೆಯಲು ನ್ಯಾಷನಲ್ ಡೇಟಾ ಅಂಡ್ ಅನಲಿಟಿಕ್ಸ್ ಪ್ಲಾಟ್​ಫಾರ್ಮ್ ಅನಾವರಣ
NDAP ಅನಾವರಣದ ವೇಳೆಯ ಚಿತ್ರ
TV9 Web
| Updated By: Srinivas Mata|

Updated on: May 14, 2022 | 1:08 PM

Share

ನೀತಿ ಆಯೋಗದಿಂದ (NITI Aayog) ಶುಕ್ರವಾರ ನ್ಯಾಷನಲ್ ಡೇಟಾ ಅಂಡ್ ಅನಲಿಟಿಕ್ಸ್ ಪ್ಲಾಟ್​ಫಾರ್ಮ್ (NDAP) ಅನಾವರಣ ಮಾಡಲಾಗಿದೆ. ಸರ್ಕಾರದ ಡೇಟಾ ಈ ಪ್ಲಾಟ್​ಫಾರ್ಮ್​ನಲ್ಲಿ ಸಾರ್ವಜನಿಕರಿಗೆ ಸುಲಭವಾಗಿ ದೊರೆಯಬೇಕು ಎಂಬುದು ಗುರಿಯಾಗಿದೆ. ಸಂಪರ್ಕಿಸಬಹುದಾದ, ಪರಸ್ಪರ ಕಾರ್ಯ ನಿರ್ವಹಿಸಬಹುದಾದ, ಸಂವಾದಾತ್ಮಕ ಮತ್ತು ಬಳಕೆದಾರ ಸ್ನೇಹಿ ವೇದಿಕೆಯಲ್ಲಿ ಡೇಟಾ ಲಭ್ಯವಿದೆ. ಈ ಪ್ಲಾಟ್​ಫಾರ್ಮ್ ಅನ್ನು ನೀತಿ ಆಯೋಗದ ಉಪಾಧ್ಯಕ್ಷರಾದ ಸುಮನ್ ಬೆರಿ ಅನಾವರಣಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಮತ್ತು ಇತರ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಈ ವೇಳೆ ಅಮಿತಾಬ್ ಕಾಂತ್ ಮಾತನಾಡಿ, ಡೇಟಾ ಮತ್ತು ಡಿಜಿಟಲ್ ತಂತ್ರಜ್ಞಾನಗಳ ವ್ಯಾಪಕತೆ ಸರ್ಕಾರಗಳ ದೈನಂದಿನ ಕಾರ್ಯಾಚರಣೆಗಳ ಮೇಲೆ ಅಗಾಧವಾದ ಪರಿಣಾಮ ಬೀರುವುದರ ಜತೆಗೆ ಆರ್ಥಿಕತೆಗಳು ಮತ್ತು ಸಮಾಜವನ್ನು ವೇಗವಾಗಿ ಪರಿವರ್ತಿಸುತ್ತಿದೆ ಎಂದರು. ಈ ಪ್ಲಾಟ್​ಫಾರ್ಮ್ ಒಂದು ನಿರ್ಣಾಯಕ ಮೈಲುಗಲ್ಲು ಆಗಿದ್ದು, ಡೇಟಾ-ಚಾಲಿತ ಬಹಿರಂಗಪಡಿಸುವಿಕೆಯನ್ನು ಉತ್ತೇಜಿಸುವ ಮೂಲಕ ದೇಶದ ಪ್ರಗತಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿದೆ. ನಿರ್ಧಾರ ತೆಗೆದುಕೊಳ್ಳುವುದು ಮತ್ತು ಕೊನೆಯ ಮೈಲುವರೆಗೆ ಸಂಪರ್ಕಿಸುವ ಡೇಟಾದ ಲಭ್ಯತೆಯನ್ನು ಖಾತ್ರಿಪಡಿಸುತ್ತದೆ ಎಂದಿದ್ದಾರೆ.

NDAP ವಿವಿಧ ಸರ್ಕಾರಿ ಏಜೆನ್ಸಿಗಳಿಂದ ಮೂಲ ಡೇಟಾಸೆಟ್‌ಗಳನ್ನು ಒದಗಿಸಿ ಕೊಡುತ್ತದೆ. ಆ ನಂತರ ಅವುಗಳನ್ನು ವ್ಯವಸ್ಥಿತವಾಗಿ ಪ್ರಸ್ತುತಪಡಿಸುತ್ತದೆ ಹಾಗೂ ವಿಶ್ಲೇಷಣೆ ಮತ್ತು ವಿಶ್ಯುಯಲೈಸೇಷನ್​ಗಾಗಿ ಸಾಧನಗಳನ್ನು ಒದಗಿಸುತ್ತದೆ ಎಂದು ನೀತಿ ಆಯೋಗದ ಬಿಡುಗಡೆ ಶುಕ್ರವಾರ ತಿಳಿಸಿದೆ. ಆಗಸ್ಟ್ 2021ರಲ್ಲಿ ಪ್ಲಾಟ್‌ಫಾರ್ಮ್‌ನ ಬೇಟಾ ಬಿಡುಗಡೆಯನ್ನು ಮಾಡಲಾಗಿತ್ತು. ಇದೀಗ NDAPಯ ಸಾರ್ವಜನಿಕ ಬಿಡುಗಡೆ ಮಾಡಲಾಗಿದೆ. ಇದು ಪರೀಕ್ಷೆ ಮತ್ತು ಪ್ರತಿಕ್ರಿಯೆಗಾಗಿ ಸೀಮಿತ ಸಂಖ್ಯೆಯ ಬಳಕೆದಾರರಿಗೆ ಪ್ರವೇಶವನ್ನು ಒದಗಿಸಿದೆ.

ಪ್ಲಾಟ್‌ಫಾರ್ಮ್‌ನಲ್ಲಿ ಹೋಸ್ಟ್ ಮಾಡಲಾದ ಡೇಟಾಸೆಟ್‌ಗಳು ಸರ್ಕಾರ, ಶೈಕ್ಷಣಿಕ, ಪತ್ರಿಕೋದ್ಯಮ, ನಾಗರಿಕ ಸಮಾಜ ಮತ್ತು ಖಾಸಗಿ ವಲಯದ ಡೇಟಾ ಬಳಕೆದಾರರ ಅಗತ್ಯಗಳಿಗೆ ಅನುಗುಣವಾಗಿರುವುದನ್ನು ಖಚಿತಪಡಿಸಿಕೊಳ್ಳಲು NDAP ಬಳಕೆ-ಪ್ರಕರಣ ಆಧಾರಿತ ವಿಧಾನವನ್ನು ಅನುಸರಿಸುತ್ತದೆ. ಎಲ್ಲ ಡೇಟಾಸೆಟ್‌ಗಳನ್ನು ಸಾಮಾನ್ಯ ಸ್ಕೀಮಾಗೆ ಪ್ರಮಾಣೀಕರಿಸಲಾಗಿದೆ. ಇದು ಡೇಟಾಸೆಟ್‌ಗಳನ್ನು ವಿಲೀನಗೊಳಿಸಲು ಮತ್ತು ಕ್ರಾಸ್-ವಿಭಾಗದ ವಿಶ್ಲೇಷಣೆ ಮಾಡಲು ಸುಲಭಗೊಳಿಸುತ್ತದೆ.

NDAP ಅನ್ನು http://ndap.niti.gov.inನಲ್ಲಿ ಸಂಪರ್ಕಿಸಬಹುದು ಮತ್ತು ಪ್ಲಾಟ್‌ಫಾರ್ಮ್‌ನಲ್ಲಿರುವ ಎಲ್ಲ ಡೇಟಾಸೆಟ್‌ಗಳನ್ನು ಡೌನ್‌ಲೋಡ್ ಮಾಡಬಹುದು ಮತ್ತು ಮುಕ್ತವಾಗಿ ವಿಲೀನಗೊಳಿಸಬಹುದು.

ಹೆಚ್ಚಿನ ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: 12 ರಾಜ್ಯಗಳ ಒತ್ತಾಯದಿಂದ ಹೊಸ ಲಸಿಕೆ ಖರೀದಿ ನೀತಿ ಜಾರಿ: ನೀತಿ ಆಯೋಗ ಸದಸ್ಯ ವಿ.ಕೆ.ಪೌಲ್

ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್