ಯಾವುದೇ ಸಂಭಾವನೆ ಪಡೆಯದೆ ಕೃಷಿ ಇಲಾಖೆ ರಾಯಭಾರಿಯಾಗಲಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್

| Updated By: ganapathi bhat

Updated on: Apr 06, 2022 | 8:44 PM

ರೈತ ಪರ ಕಾರ್ಯಕ್ರಮಗಳಲ್ಲಿ ಸರ್ಕಾರದ ಮುಖವಾಗಲಿರುವ ದರ್ಶನ್​, ಶೀಘ್ರದಲ್ಲೇ ಒಂದು ದಿನವನ್ನು ರೈತರೊಂದಿಗೆ ಕಳೆಯಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಯಾವುದೇ ಸಂಭಾವನೆ ಪಡೆಯದೆ ಕೃಷಿ ಇಲಾಖೆ ರಾಯಭಾರಿಯಾಗಲಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್
ದರ್ಶನ್ ಹಾಗೂ ಬಿ.ಸಿ. ಪಾಟೀಲ್
Follow us on

ಬೆಂಗಳೂರು: ಈಗಾಗಲೇ ಸಾಕಷ್ಟು ಕೃಷಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಕನ್ನಡದ ಖ್ಯಾತ ಚಲನಚಿತ್ರ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್, ಕೃಷಿ ಇಲಾಖೆ ರಾಯಭಾರಿಯಾಗಿ ಕಾರ್ಯ ಆರಂಭಿಸಲಿದ್ದಾರೆ. ಯಾವುದೇ ಸಂಭಾವನೆ ಪಡೆಯದೆ ಕೃಷಿ ಇಲಾಖೆಯ ರಾಯಭಾರಿಯಾಗಿ ದರ್ಶನ್ ಕೆಲಸ ಶುರುಮಾಡಲಿದ್ದಾರೆ.

ದರ್ಶನ್ ಕೃಷಿ ಇಲಾಖೆಯ ರಾಯಭಾರಿ ಹುದ್ದೆಯನ್ನು ಅಲಂಕರಿಸಿದ ಹಿನ್ನೆಲೆಯಲ್ಲಿ, ರಾಜ್ಯ ಕೃಷಿ ಸಚಿವ ಬಿ.ಸಿ.ಪಾಟೀಲ್ ದರ್ಶನ್ ಭೇಟಿ ಮಾಡಿದ್ದಾರೆ. ಮೈಸೂರಿನ ದರ್ಶನ್ ಫಾರ್ಮ್ ಹೌಸ್​ನಲ್ಲಿ ಭೇಟಿಯಾದ ಬಿ.ಸಿ. ಪಾಟೀಲ್, ಕೃಷಿ ಇಲಾಖೆ ರಾಯಭಾರಿ ಯೋಜನೆಯ ಬಗ್ಗೆ ಚರ್ಚೆ ನಡೆಸಿದ್ದಾರೆ. ರೈತ ಪರ ಕಾರ್ಯಕ್ರಮಗಳಲ್ಲಿ ಸರ್ಕಾರದ ಮುಖವಾಗಲಿರುವ ದರ್ಶನ್​, ಶೀಘ್ರದಲ್ಲೇ ಒಂದು ದಿನವನ್ನು ರೈತರೊಂದಿಗೆ ಕಳೆಯಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.




ಕಿಚ್ಚು ಹಾಯಿಸಿ ಸಂಭ್ರಮದ ಸಂಕ್ರಾಂತಿ ಆಚರಣೆ; ನಟ ದರ್ಶನ್ ಫಾರ್ಮ್​ಹೌಸ್​ನಲ್ಲಿ ಸಂಕ್ರಾಂತಿ ಸಂಭ್ರಮ

Published On - 5:40 pm, Sun, 24 January 21