AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ನು 6 ತಿಂಗಳು ನನ್ನ ಸರ್ಕಾರ ಇದ್ದಿದ್ದರೆ ನಿಮ್ಮೂರಿಗೆ ರಸ್ತೆ ಆಗುತ್ತಿತ್ತು -ರೋಡ್​ ಮಾಡಿಸಿ ಎಂದ ಮಹಿಳೆಗೆ HDK ಉತ್ತರ

ಇನ್ನು 6 ತಿಂಗಳು ನನ್ನ ಸರ್ಕಾರ ಇದ್ದಿದ್ದರೆ ನಿಮ್ಮೂರಿಗೆ ರಸ್ತೆ ಮುಗಿದು ಹೋಗುತ್ತಿತ್ತು ಎಂದು ಕುಮಾರಸ್ವಾಮಿ ಹೇಳಿದರು. ಆದರೆ, ಮುಂದಿನ ದಿನಗಳಲ್ಲಿ ರಸ್ತೆ ಮಾಡಿಸುವುದಾಗಿ ಕುಮಾರಸ್ವಾಮಿ ಭರವಸೆ ಕೊಟ್ಟರು.

ಇನ್ನು 6 ತಿಂಗಳು ನನ್ನ ಸರ್ಕಾರ ಇದ್ದಿದ್ದರೆ ನಿಮ್ಮೂರಿಗೆ ರಸ್ತೆ ಆಗುತ್ತಿತ್ತು -ರೋಡ್​ ಮಾಡಿಸಿ ಎಂದ ಮಹಿಳೆಗೆ HDK ಉತ್ತರ
‘ಇನ್ನು 6 ತಿಂಗಳು ನನ್ನ ಸರ್ಕಾರ ಇದ್ದಿದ್ದರೆ ನಿಮ್ಮೂರಿಗೆ ರಸ್ತೆ ಆಗುತ್ತಿತ್ತು’
KUSHAL V
|

Updated on: Jan 24, 2021 | 4:27 PM

Share

ಮಂಡ್ಯ: ನಾನು ಶ್ರೀಮಂತರ ಪರ ಅಲ್ಲ, ಬಡವರ ಪರ ಇರುವವನು ಎಂದು ಜಿಲ್ಲೆಯ ನಾಗಮಂಗಲ ತಾಲೂಕಿನ ಕಲ್ಲುದೇವನಹಳ್ಳಿಯಲ್ಲಿ ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಹೇಳಿದರು. ಗ್ರಾಮದಲ್ಲಿ ಮಹಿಳೆಯೊಬ್ಬಳು ನಮ್ಮೂರಿಗೆ ರಸ್ತೆ ಮಾಡಿಸಿಕೊಡಿ. ಒಮ್ಮೆ ನಮ್ಮಂಥ ಬಡವರನ್ನೂ ನೋಡಿ ಎಂದು ಮನವಿ ಮಾಡಿದ್ದಕ್ಕೆ ಕುಮಾರಸ್ವಾಮಿ ಹೀಗೆ ಪ್ರತಿಕ್ರಿಯಿಸಿದರು.

ಜೊತೆಗೆ, ಇನ್ನು 6 ತಿಂಗಳು ನನ್ನ ಸರ್ಕಾರ ಇದ್ದಿದ್ದರೆ ನಿಮ್ಮೂರಿಗೆ ರಸ್ತೆ ಮುಗಿದು ಹೋಗುತ್ತಿತ್ತು ಎಂದು ಕುಮಾರಸ್ವಾಮಿ ಹೇಳಿದರು. ಆದರೆ, ಮುಂದಿನ ದಿನಗಳಲ್ಲಿ ರಸ್ತೆ ಮಾಡಿಸುವುದಾಗಿ ಕುಮಾರಸ್ವಾಮಿ ಭರವಸೆ ಕೊಟ್ಟರು.

ಈ ನಡುವೆ, ನನ್ನ ಇಬ್ಬರು ಮಕ್ಕಳಿಗೆ ಉದ್ಯೋಗ ಕೊಡಿಸಿ ಎಂದು ಮತ್ತೊಬ್ಬ ಮಹಿಳೆ HDKಗೆ ಮನವಿ ಮಾಡಿದರು. ಮಾಜಿ ಮುಖ್ಯಮಂತ್ರಿಗಳ ಕಾರನ್ನು ಮಾರ್ಗಮಧ್ಯೆ ನಿಲ್ಲಿಸಿ ಅಹವಾಲು ಸಲ್ಲಿಸಿದ ಮಹಿಳೆಯ ಇಬ್ಬರು ಹೆಣ್ಣುಮಕ್ಕಳಿಗೆ ಉದ್ಯೋಗ ಕೊಡಿಸುವುದಾಗಿ ಕುಮಾರಸ್ವಾಮಿ ಭರವಸೆ ನೀಡಿದರು. ಇದಲ್ಲದೆ, ಬೆಂಗಳೂರಿನ ಜೆ.ಪಿ.ನಗರದ ತಮ್ಮ ಮನೆಗೆ ಬರುವಂತೆ ಹೇಳಿ ಇಬ್ಬರು ಹೆಣ್ಣುಮಕ್ಕಳನ್ನು ಭೇಟಿಯಾಗಿ ಒಳ್ಳೆಯ ಉದ್ಯೋಗ ಕೊಡಿಸ್ತೇನೆ ಎಂದು ಮಹಿಳೆಗೆ ಭರವಸೆ ಕೊಟ್ಟರು.

‘ನನ್ನ ಅವಧಿಯಲ್ಲಿ ಅಕ್ರಮ ಗಣಿಗಾರಿಕೆಗೆ ಅವಕಾಶ ನೀಡಿಲ್ಲ’ ಈ ಮಧ್ಯೆ, ನನ್ನ ಅವಧಿಯಲ್ಲಿ ಅಕ್ರಮ ಗಣಿಗಾರಿಕೆಗೆ ಅವಕಾಶ ನೀಡಿಲ್ಲ. ಈಗ ಅಕ್ರಮ ಗಣಿಗಾರಿಕೆಯ ಬಗ್ಗೆ ಮಾತನಾಡುತ್ತಿದ್ದಾರೆ. ಸಚಿವ ನಾರಾಯಣಗೌಡ ಅಕ್ರಮದ ಬಗ್ಗೆ ಮಾತಾಡ್ತಿದ್ದಾರೆ. 14 ತಿಂಗಳಿಂದ ಈ ಸಚಿವರು ಎಲ್ಲಿ ಹೋಗಿದ್ದರೆಂದು ಸಚಿವ ನಾರಾಯಣಗೌಡ ವಿರುದ್ಧ H.D.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಮಂಡ್ಯದಲ್ಲಿ ಶೇ.87ರಷ್ಟು ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ರಾಜ್ಯದಲ್ಲಿ ಅತಿಹೆಚ್ಚು ಅಕ್ರಮ ಗಣಿಗಾರಿಕೆ ಮಂಡ್ಯದಲ್ಲಿದೆ. NOC ನೀಡಲು 10 ಲಕ್ಷ ರೂ. ಫಿಕ್ಸ್ ಮಾಡಿಕೊಂಡಿದ್ದಾರೆ. ಈ 10 ಲಕ್ಷ ರೂಪಾಯಿ ಎಲ್ಲಿ ಹೋಗುತ್ತಿದೆ? ಇದರ ಬಗ್ಗೆ ಸತ್ಯ ಹೇಳಬೇಕೆಂದು ಕುಮಾರಸ್ವಾಮಿ ಆಗ್ರಹಿಸಿದರು.

ಮಂತ್ರಿಯಾಗಿ ಜಿಲ್ಲೆಯ ಆಸ್ತಿಯನ್ನು ಉಳಿಸಬೇಕು. ಈಗ ಹೇಳಿಕೆ ಕೊಟ್ಟು ರೇಟ್ ಜಾಸ್ತಿ ಮಾಡಿಕೊಳ್ಳುತ್ತಿದ್ದಾರೆ ಎಂದು ನಾಗಮಂಗಲದಲ್ಲಿ ಕುಮಾರಸ್ವಾಮಿ ಹೇಳಿದರು.

ಬಿಜೆಪಿ ಸರ್ಕಾರ ಹಾಸನ ಜಿಲ್ಲೆಯನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ -ಮಾಜಿ ಪ್ರಧಾನಿ H.D.ದೇವೇಗೌಡ