AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಮರಾಜನಗರ: ಒಂದು ಲಕ್ಷ ಕೋವಿಡ್ ಪರೀಕ್ಷೆ ಪೂರೈಸಿದ ಆರ್​ಟಿಪಿಸಿಆರ್ ಲ್ಯಾಬ್

ಆರಂಭದಲ್ಲಿ ಪ್ರತಿದಿನ 500 ಮಾದರಿ ಪರೀಕ್ಷೆಗಳಿಗಷ್ಟೇ ಸೀಮಿತವಾಗಿದ್ದ ಪ್ರಯೋಗಾಲಯ ಪ್ರಸ್ತುತ ಪ್ರತೀದಿನ 1 ಸಾವಿರಕ್ಕೂ ಹೆಚ್ಚು ಪರೀಕ್ಷೆ ನಡೆಸುವ ಸಾಮರ್ಥ್ಯ ಹೊಂದಿದೆ.

ಚಾಮರಾಜನಗರ: ಒಂದು ಲಕ್ಷ ಕೋವಿಡ್ ಪರೀಕ್ಷೆ ಪೂರೈಸಿದ ಆರ್​ಟಿಪಿಸಿಆರ್ ಲ್ಯಾಬ್
ಕೊವಿಡ್​ ಪರೀಕ್ಷೆ (ಪ್ರಾತಿನಿಧಿಕ ಚಿತ್ರ)
ರಾಜೇಶ್ ದುಗ್ಗುಮನೆ
| Edited By: |

Updated on: Dec 18, 2020 | 6:29 AM

Share

ಚಾಮರಾಜನಗರ: ಜಿಲ್ಲೆಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಡಿ ಕಾರ್ಯನಿರ್ವಹಿಸುತ್ತಿರುವ ಆರ್​ಟಿಪಿಸಿಆರ್ ಪ್ರಯೋಗಾಲಯವು ಈವರೆಗೆ 1 ಲಕ್ಷಕ್ಕೂ ಹೆಚ್ಚು ಕೋವಿಡ್-19 ಪರೀಕ್ಷೆಯನ್ನು ನಡೆಸಿ ಪ್ರಶಂಸೆಗೆ ಪಾತ್ರವಾಗಿದೆ.

ಆರಂಭದಲ್ಲಿ ಕೋವಿಡ್ ಶಂಕಿತರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗಾಗಿ ಮೈಸೂರಿಗೆ ಕಳುಹಿಸಿಕೊಡಲಾಗುತ್ತಿತ್ತು. ಜಿಲ್ಲೆಯಲ್ಲಿಯೇ ಪ್ರಯೋಗಾಲಯ ಸ್ಥಾಪಿಸಿ ತ್ವರಿತವಾಗಿ ಫಲಿತಾಂಶ ಪಡೆಯುವ ಉದ್ದೇಶದೊಂದಿಗೆ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕಳೆದ ಮೇ 6ರಂದು ಸುಸಜ್ಜಿತ ಆರ್.ಟಿ.ಪಿ.ಸಿ.ಆರ್ ಪ್ರಯೋಗಾಲಯ ಆರಂಭಿಸಿತ್ತು. ಮೇ ತಿಂಗಳಿನಿಂದ ಇಲ್ಲಿಯವರೆಗೆ 1,00,665 ಜನರ ಗಂಟಲು ದ್ರವ ಮಾದರಿ ಪರೀಕ್ಷೆ ಪೂರ್ಣಗೊಳಿಸಿದೆ.

ಆರಂಭದಲ್ಲಿ ಪ್ರತಿದಿನ 500 ಮಾದರಿ ಪರೀಕ್ಷೆಗಳಿಗಷ್ಟೇ ಸೀಮಿತವಾಗಿದ್ದ ಪ್ರಯೋಗಾಲಯ ಪ್ರಸ್ತುತ ಪ್ರತೀದಿನ 1 ಸಾವಿರಕ್ಕೂ ಹೆಚ್ಚು ಪರೀಕ್ಷೆ ನಡೆಸುವ ಸಾಮರ್ಥ್ಯ ಹೊಂದಿದೆ. ಕಾಲಕಾಲಕ್ಕೆ ನೀಡಲಾಗುತ್ತಿರುವ ನಿರ್ದೇಶನಗಳು ಹಾಗೂ ಗುರಿಗೆ ಅನುಗುಣವಾಗಿ ಪರೀಕ್ಷಾ ಸಂಖ್ಯೆಯನ್ನು ಹೆಚ್ಚಳ ಮಾಡುತ್ತಿದೆ.

ಅತ್ಯಂತ ಕಡಿಮೆ ಅವಧಿಯಲ್ಲಿ ಪರೀಕ್ಷಾ ಫಲಿತಾಂಶ ನೀಡುವ ಸಾಮರ್ಥ್ಯವನ್ನು ಪ್ರಯೋಗಾಲಯ ಹೊಂದಿದೆ. ಗಂಟಲು ದ್ರವ ಮಾದರಿ ಸ್ವೀಕರಿಸಿದ 24 ಗಂಟೆಯೊಳಗೆ ಫಲಿತಾಂಶ ವರದಿಯನ್ನು ಪ್ರಯೋಗಾಲಯ ನೀಡುತ್ತಿದೆ.

ಜಿಲ್ಲೆಯಲ್ಲಿ ಇಳಿಮುಖವಾದ ಕೊರೊನಾ ಸೋಂಕು ಆರಂಭದಿಂದಲೂ ಸತತವಾಗಿ ಕೋವಿಡ್ ಪರೀಕ್ಷೆಯನ್ನು ನಡೆಸಿಕೊಂಡು ಬರುತ್ತಿರುವ ಪ್ರಯೋಗಾಲಯ 24*7 ಅವಧಿಯೂ ಕಾರ್ಯನಿರ್ವಹಿಸುತ್ತಿರುವುದು ವಿಶೇಷ. ತ್ವರಿತ ಫಲಿತಾಂಶ ನೀಡುತ್ತಿರುವ ಕಾರಣದಿಂದಾಗಿ ಜಿಲ್ಲೆಯಲ್ಲಿ ಕೋವಿಡ್ ಹರಡುವಿಕೆಯ ಪ್ರಮಾಣ ಕಡಿಮೆಯಾಗಿದೆ. ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಲೂ ಸಹಕಾರಿಯಾಗಿದೆ.

ಈ ಪ್ರಯೋಗಾಲಯವು ಚಾಮರಾಜನಗರ ಜಿಲ್ಲೆಯ ಶಂಕಿತರ ಮಾದರಿ ಪರೀಕ್ಷೆಗಳನಷ್ಟೇ ನಡೆಸಿಲ್ಲ. ರಾಮನಗರ, ತುಮಕೂರು, ಗದಗ್, ಉತ್ತರಕನ್ನಡ, ದಾವಣಗೆರೆ ಜಿಲ್ಲೆಯಿಂದ ಬಂದ ಮಾದರಿಗಳ ಪರೀಕ್ಷೆಯನ್ನು ನಿಗದಿತ ಅವಧಿಯೊಳಗೆ ಕೈಗೊಂಡು ಫಲಿತಾಂಶ ವರದಿಯನ್ನು ಶೀಘ್ರವಾಗಿ ರವಾನಿಸುವ ಮೂಲಕ ತನ್ನ ಕಾರ್ಯ ಕ್ಷಮತೆಯನ್ನು ಸಾಬೀತು ಪಡಿಸಿದೆ.

ಪ್ರಯೋಗಾಲಯದಲ್ಲಿ ಮೈಕ್ರೊ ಬಯಾಲಜಿ ವಿಭಾಗದ ಮುಖ್ಯಸ್ಥರು, ಮೂವರು ಸಂಶೋಧನಾ ಸಿಬ್ಬಂದಿ, 8 ಮಂದಿ ಲ್ಯಾಬ್ ಟೆಕ್ನಿಷಿಯನ್, 7 ಮಂದಿ ಡಾಟಾಎಂಟ್ರಿ ಆಪರೇಟರ್, ಇತರೆ ಮಲ್ಟಿ ಟಾಸ್ಕಿಂಗ್ ಮೂವರು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಚಾಮರಾಜನಗರದಲ್ಲಿ ಅನಿಷ್ಟ ಪದ್ಧತಿ ಇನ್ನೂ ಜೀವಂತ, ಮಾತು ಕೇಳಲಿಲ್ಲ ಅಂತ ಕುಟುಂಬಕ್ಕೆ ಬಹಿಷ್ಕಾರ