ದಿವಾನ್ ಮಿರ್ಜಾ ಇಸ್ಮಾಯಿಲ್ ಭೇಟಿ ಕೊಟ್ಟಿದ್ದ ಸರ್ಕಾರಿ ಶಾಲೆಯನ್ನ ತೆರವುಗೊಳಿಸಿ ಸ್ನಾನಗೃಹ ನಿರ್ಮಾಣಕ್ಕೆ ಚಿಂತನೆ!
ಚಾಮರಾಜನಗರದ ಈ ಶಾಲೆಯ ಇತಿಹಾಸ ನೋಡುವುದಾದ್ರೆ ಮೈಸೂರು ಸಂಸ್ಥಾನದ ಸರ್ ಮಿರ್ಜಾ ಇಸ್ಮಾಯಿಲ್ ಕೂಡ ಈ ಶಾಲೆಗೆ ಭೇಟಿ ನೀಡಿದ್ದರು. ಅನೇಕ ಸಾಹಿತಿಗಳು ಚಿಂತಕರು ಈ ಪೇಟೆ ಶಾಲೆಯಲ್ಲಿ ಕಲಿತು ಸಮಾಜಕ್ಕೆ ಕೊಡುಗೆಯನ್ನ ನೀಡಿದ್ದಾರೆ. ಇಂತಹ ಪುರಾತನ ಶಾಲೆಯನ್ನ ಕೆಡವಿ ಶೌಚಾಲಯ ಹಾಗೂ ಸ್ನಾನ ಗೃಹ ನಿರ್ಮಾಣ ಮಾಡುವುದು ಎಷ್ಟು ಸರಿ - ಸಾಹಿತಿ ಜಿ.ಎಸ್. ಶಿವರುದ್ರಪ್ಪ ಪುತ್ರ ಜಯದೇವ್ ಡಿಸಿ ಗೆ ಬರೆದ ಪತ್ರ
ಅದು 118 ವರ್ಷಗಳ ಇತಿಹಾಸವುಳ್ಳ ಪುರಾತನ ಸರ್ಕಾರಿ ಶಾಲೆ. ಆ ಶಾಲೆಗೆ ಮೈಸೂರಿನ ದಿವಾನರಾದ ಸರ್ ಮಿರ್ಜಾ ಇಸ್ಮಾಯಿಲ್ ಕೂಡ ಭೇಟಿ ಕೊಟ್ಟು ಪ್ರಸಂಶೆ ವ್ಯಕ್ತಪಡಿಸಿದ್ದರು. ಇಂತ ಈ ಶಾಲೆಯನ್ನ ನಗರ ಸಭೆ ತೆರವುಗೊಳಿಸಲು ಮುಂದಾಗಿದೆ. ಅಷ್ಟಕ್ಕೂ ಈ ನಿರ್ಧಾರಕ್ಕೆ ನಗರಸಭೆ (Chamarajanagar city municipal council) ಬರಲು ಕಾರಣವಾದರೂ ಏನು ಅಂತೀರಾ? ಈ ಸ್ಟೋರಿ ನೋಡಿ. ಸಸರ್ಕಾರಿ ಶಾಲೆ ಉಳಿಸಿ ಸರ್ಕಾರಿ ಶಾಲೆ ಬೆಳೆಸಿ ಅನ್ನೋ ಮಾತು ಬರಿ ಬಾಯ್ಮಾತಿಗೆ ಮಾತ್ರ ಸೀಮಿತವಾಗಿದೆ. ಈಗಾಗ್ಲೆ ಗಡಿ ನಾಡು ಚಾಮರಾಜನಗರದಲ್ಲಿ ಶೂನ್ಯ ದಾಖಲಾತಿ ಹಿನ್ನೆಲೆ 14 ಶಾಲೆಗಳಿಗೆ ಬೀಗ ಹಾಕಲಾಗಿದೆ. ಸರ್ಕಾರಿ ಶಾಲೆಗಳು ಅಳಿವಿನ ಅಂಚಿಗೆ ಬಂದು ತಲುಪಿದೆ. ಇಂತಹ ಸ್ಥಿತಿ ಇರುವಾಗ್ಲೆ ಜಿಲ್ಲಾಡಳಿತ ದೊಡ್ಡ ಯಡವಟ್ಟಿಗೆ ಮುಂದಾಗಿದೆ. 118 ವರ್ಷ ಇತಿಹಾಸವುಳ್ಳ ಸರ್ಕಾರಿ ಶಾಲೆಯನ್ನ ತೆರವುಗೊಳಿಸಿ (school building) ಆ ಸ್ಥಳದಲ್ಲಿ ಸ್ನಾನ ಗೃಹ ಹಾಗೂ ಶೌಚಾಲಯ ( bathroom and toilets) ನಿರ್ಮಾಣ ಮಾಡಲು ಮುಂದಾಗಿದೆ. ಈ ವಿಚಾರಕ್ಕೆ ಈಗ ಚಾಮರಾಜನಗರದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದ್ದು ಸಾಹಿತಿಗಳು ಹಾಗೂ ಚಿಂತಕರು ಜಿಲ್ಲಾಡಳಿತಕ್ಕೆ ಪತ್ರ ಬರೆಯುವ ಮೂಲಕ ಎಚ್ಚರಿಕೆಯನ್ನ ನೀಡಿದ್ದಾರೆ.
ಇನ್ನು ಈ ಶಾಲೆಯ ಇತಿಹಾಸ ನೋಡುವುದಾದ್ರೆ ಮೈಸೂರು ಸಂಸ್ಥಾನದ ಸರ್ ಮಿರ್ಜಾ ಇಸ್ಮಾಯಿಲ್ ಕೂಡ ಈ ಶಾಲೆಗೆ ಭೇಟಿ ನೀಡಿದ್ದರು. ಅನೇಕ ಸಾಹಿತಿಗಳು ಚಿಂತಕರು ಈ ಪೇಟೆ ಶಾಲೆಯಲ್ಲಿ ಕಲಿತು ಸಮಾಜಕ್ಕೆ ಕೊಡುಗೆಯನ್ನ ನೀಡಿದ್ದಾರೆ. ಈ ಶಾಲೆಯಲ್ಲಿ ವ್ಯಾಸಾಂಗ ಮಾಡಿದವರು ಉನ್ನತ ಸ್ಥಾನಮಾನ ಅಲಂಕರಿಸಿದ ಉದಾಹರಣೆಗಳು ಸಹ ಇವೆ. ಇಂತಹ ಪುರಾತನ ಹಾಗೂ ಇತಿಹಾಸವುಳ್ಳ ಶಾಲೆಯನ್ನ ಕೆಡವಿ ಶೌಚಾಲಯ ಹಾಗೂ ಸ್ನಾನ ಗೃಹ ನಿರ್ಮಾಣ ಮಾಡುವುದು ಎಷ್ಟು ಸರಿ ಎನ್ನುವುದು ಸಾಹಿತಿ ಜಿ.ಎಸ್. ಶಿವರುದ್ರಪ್ಪ ಪುತ್ರ ಜಯದೇವ್ ಸಹ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗ – ಸೂಕ್ತ ಶಾಲಾ ಕಟ್ಟಡ ಇಲ್ಲದೆ ವಿದ್ಯಾರ್ಥಿಗಳ ಪರದಾಟ; ಬಯಲಲ್ಲೇ ಪಾಠ ಕೇಳುವ ದುಸ್ಥಿತಿ
ನಗರ ಸಭೆ ಆಯುಕ್ತರ ಹೇಳಿಕೆ ಪ್ರಕಾರ ಶಾಲೆ ಹಳೆಯದಾಗಿದೆ. ನಗರದ ಮುಖ್ಯ ಭಾಗದಲ್ಲಿ ಶಾಲೆಯಿದೆ, ಪಕ್ಕದಲ್ಲೇ ಸರ್ಕಾರಿ ಆಸ್ಪತ್ರೆ ಸಹ ಇದೆ, ಸ್ನಾನ ಗೃಹ ಹಾಗೂ ಶೌಚಾಲಯ ಈ ಸ್ಥಳದಲ್ಲಿ ನಿರ್ಮಾಣವಾದ್ರೆ ಜನತೆಗೆ ಅನುಕೂಲ ಆಗುತ್ತೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಈ ಜಾಗ ಹೊರತುಪಡಿಸಿ ಇನ್ನು ಮೂರು ಸ್ಥಳಗಳನ್ನ ಗುರುತಿಸಿದ್ದು ಮುಂದಿನ ದಿನಗಳಲ್ಲಿ ಸೂಕ್ತ ಜಾಗದಲ್ಲಿ ಶೌಚಾಲಯ ಹಾಗೂ ಸ್ನಾನದ ಗೃಹ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ