AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಮರಾಜನಗರದ 36 ದೇಗುಲ ಪೈಕಿ 1 ಉಳಿಸಿಕೊಂಡ ಜಿಲ್ಲಾಡಳಿತ; ಮೈಸೂರು, ಬೆಂಗಳೂರಿನಲ್ಲಿ ವಿವಾದ ಹೆಚ್ಚಿಸುತ್ತಿದೆ ತೆರವು ಕಾರ್ಯ

2011ರಲ್ಲಿಯೇ 35 ದೇವಾಲಯಗಳನ್ನು ತೆರವು ಮಾಡಲಾಗಿದೆ. ಆದರೆ ಜಿಲ್ಲಾಡಳಿತ ಚಾಮರಾಜನಗರದ ಖಾಸಗಿ ಬಸ್ ನಿಲ್ದಾಣ ಬಳಿಯ ವೀರಾಂಜನೇಯ ಸ್ವಾಮಿ ದೇಗುಲ ಮಾತ್ರ ಬಾಕಿ ಉಳಿಸಿಕೊಂಡಿದೆ. ಈ ದೇಗುಲ ತೆರವುಗೊಳಿಸುವುದರ ಸಾಧಕ ಬಾಧಕಗಳ ಪರಿಶೀಲನೆ ನಡೆಸುತ್ತಿದೆ.

ಚಾಮರಾಜನಗರದ 36 ದೇಗುಲ ಪೈಕಿ 1 ಉಳಿಸಿಕೊಂಡ ಜಿಲ್ಲಾಡಳಿತ; ಮೈಸೂರು, ಬೆಂಗಳೂರಿನಲ್ಲಿ ವಿವಾದ ಹೆಚ್ಚಿಸುತ್ತಿದೆ ತೆರವು ಕಾರ್ಯ
ಚಾಮರಾಜನಗರದ 36 ದೇಗುಲಗಳ ಪೈಕಿ ಒಂದನ್ನು ಉಳಿಸಿಕೊಂಡ ಜಿಲ್ಲಾಡಳಿತ
TV9 Web
| Updated By: ಸಾಧು ಶ್ರೀನಾಥ್​|

Updated on:Sep 14, 2021 | 9:25 AM

Share

ಚಾಮರಾಜನಗರ: ಅನಧಿಕೃತ ದೇಗುಲಗಳ ತೆರವು ಬಗ್ಗೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯಲ್ಲೂ ಒಟ್ಟು 36 ದೇಗುಲಗಳನ್ನು ಗುರುತಿಸಿದ್ದು 36 ದೇವಸ್ಥಾನಗಳ ಪೈಕಿ 35 ದೇವಸ್ಥಾನಗಳನ್ನು ತೆರವುಗೊಳಿಸಲಾಗಿದೆ.

2011ರಲ್ಲಿಯೇ 35 ದೇವಾಲಯಗಳನ್ನು ತೆರವು ಮಾಡಲಾಗಿದೆ. ಆದರೆ ಜಿಲ್ಲಾಡಳಿತ ಚಾಮರಾಜನಗರದ ಖಾಸಗಿ ಬಸ್ ನಿಲ್ದಾಣ ಬಳಿಯ ವೀರಾಂಜನೇಯ ಸ್ವಾಮಿ ದೇಗುಲ ಮಾತ್ರ ಬಾಕಿ ಉಳಿಸಿಕೊಂಡಿದೆ. ಈ ದೇಗುಲ ತೆರವುಗೊಳಿಸುವುದರ ಸಾಧಕ ಬಾಧಕಗಳ ಪರಿಶೀಲನೆ ನಡೆಸುತ್ತಿದೆ. ಜಿಲ್ಲಾಧಿಕಾರಿಗಳಿಂದ ನ್ಯಾಯಾಲಯದಲ್ಲಿ ರಿಯಾಯಿತಿ ಕೇಳಿ ದೇಗುಲ ತೆರವುಗೊಳಿಸಿಲ್ಲ. ಗುರುತು ಮಾಡಿದ 36 ದೇವಾಲಯಗಳ ಪೈಕಿ ಎಲ್ಲವೂ ಹಿಂದೂ ದೇವಾಲಯಗಳೇ ಆಗಿವೆ. ಈ ಬಗ್ಗೆ ಟಿವಿ9ಗೆ ಚಾಮರಾಜನಗರ ಅಪರ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ದೇವಸ್ಥಾನಗಳೇ ಏಕೆ ಟಾರ್ಗೆಟ್? ಇನ್ನು ಬೆಂಗಳೂರಿನಲ್ಲೂ 2009 ರ ನಂತರ 277 ಅನಧಿಕೃತವಾಗಿ ಧಾರ್ಮಿಕ ಕೇಂದ್ರಗಳು ನಿರ್ಮಾಣವಾಗಿವೆ. ಈ ಅನಧಿಕೃತ ದೇವಸ್ಥಾನಗಳು, ಸಾರ್ವಜನಿಕ ಸ್ಥಳ, ಪಾರ್ಕ್ ಹಾಗೂ ಫುತ್ ಪಾತ್ ಜಾಗದಲ್ಲಿ ನಿರ್ಮಾಣ ಆಗಿದ್ದು ಇವುಗಳನ್ನ ತೆರವು ಮಾಡಲು ಬಿಬಿಎಂಪಿ ಮುಂದಾಗಿದೆ. ಬೆಂಗಳೂರಿನಲ್ಲಿ ಅನಧಿಕೃತ ದೇವಾಲಯಗಳನ್ನ ಗುರುತು ಮಾಡಿರುವ ಬಿಬಿಎಂಪಿ ಒಂದೊಂದೆ ದೇವಾಲಯಗಳನ್ನ ತೆರವು ಮಾಡ್ತಿದೆ. ಆದ್ರೆ, ಈ ತೆರವು ಕಾರ್ಯಾಚರಣೆ ಮಧ್ಯದಲ್ಲಿ ಒಂದು ವಿವಾದ ಹುಟ್ಕೊಂಡಿದೆ. ಹಿಂದೂ ಪರ ಸಂಘಟನೆಗಳು ಬಿಬಿಎಂಪಿ ಮತ್ತು ಸರ್ಕಾರದ ವಿರುದ್ಧ ಕೆಂಡಕಾರುತ್ತಿವೆ. ಕೇವಲ ಹಿಂದೂ ದೇವಾಲಯಗಳನ್ನಷ್ಟೇ ತೆರವು ಮಾಡುತ್ತಿದ್ದು, ಅನ್ಯ ಧರ್ಮದ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನ ತೆರವು ಮಾಡ್ತಿಲ್ಲ ಅಂತಾ ಆರೋಪಿಸಿವೆ.

ಬೆಂಗಳೂರಿನಲ್ಲಿ ಬಿಬಿಎಂಪಿ ದೇವಸ್ಥಾನಗಳ ಪಟ್ಟಿ ಮಾಡಿದೆ. ರಸ್ತೆ, ಫುಟ್ ಪಾತ್, ಪಾರ್ಕ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ದೇವಸ್ಥಾನ, ಮಸೀದಿ, ಚರ್ಚ್ ಗಳನ್ನ ನಿರ್ಮಾಣ ಮಾಡಿರುವ ಬಗ್ಗೆ ಪಟ್ಟಿ ಮಾಡಿದ್ದು. ಎರಡು ಸಾವಿರಕ್ಕೂ ಅಧಿಕ ಅನಧಿಕೃತ ಧಾರ್ಮಿಕ ಕಟ್ಟಡಗಳು ಇರೋದು ಪತ್ತೆಯಾಗಿದೆ. ಇದರಲ್ಲಿ ಒಂದು ಸಾವಿರ ಹಿಂದೂ ದೇವಾಲಯಗಳಿವೆ. ಬಿಬಿಎಂಪಿ ಈಗಾಗಲೇ ಅನಧಿಕೃತ ಅಂತಾ ಗುರುತಿಸಿರುವ ಹಿಂದೂ ದೇವಾಲಯಗಳನ್ನ ಒಂದೊಂದಾಗಿಯೇ ತೆರವು ಮಾಡ್ತಿದೆ. ಆದ್ರೆ, ದೇವಾಲಯಗಳನ್ನ ತೆರವು ಮಾಡ್ತಿರೋ ಅಧಿಕಾರಿಗಳು ಅನಧಿಕೃತ ವಾಗಿರುವ ಅನ್ಯ ಧರ್ಮದ ಮಸೀದಿ ಮತ್ತು ಚರ್ಚ್ ಗಳನ್ನ ತೆರವು ಮಾಡ್ತಿಲ್ವಂತೆ. ಈ ಬಗ್ಗೆ ಹಿಂದೂಪರ ಸಂಘಟನೆಗಳು ತೀವ್ರವಾಗಿ ವಿರೋಧಿಸುತ್ತಿವೆ.

ಇತ್ತ ಬಿಬಿಎಂಪಿ ಅಧಿಕಾರಿಗಳು ಅನ್ಯ ಧರ್ಮದ ಧಾರ್ಮಿಕ ಕಟ್ಟಡಗಳನ್ನ ತೆರವು ಮಾಡಲು ಹೋದಾಗಲೆಲ್ಲ ಒಂದಲ್ಲ ಒಂದು ಗಲಾಟೆ ಆಗ್ತಿವೆ. ಜೊತೆಗೆ ಅಧಿಕಾರಿಗಳು ಭಯ ಕೂಡಾ, ಹೀಗಾಗಿ ಎಲ್ಲಿ ಸಾಧ್ಯವೋ ಅಲ್ಲಿ ತೆರವು ಕಾರ್ಯಾಚರಣೆ ಮಾಡಲಾಗ್ತಿದೆ. ಬಿಬಿಎಂಪಿ ಆಯುಕ್ತರು ಹೇಳುವ ಪ್ರಕಾರ ತಮ್ಮ ಅಧಿಕಾರಿಗಳು ದೇವಸ್ಥಾನಗಳ ತೆರವು ಕಾರ್ಯಾಚರಣೆ ಮಾಡುತ್ತಿದ್ದಾರಂತೆ.

ಇದನ್ನೂ ಓದಿ: ಅನಧಿಕೃತ ಧಾರ್ಮಿಕ ಕಟ್ಟಡ ತೆರವು ವಿವಾದ: ಸುಪ್ರೀಂಕೋರ್ಟ್ ಆದೇಶದಲ್ಲೇನಿದೆ?

Published On - 8:52 am, Tue, 14 September 21