ಚಾಮರಾಜನಗರ: ತಾಲೂಕಿನ ಮೇಗಲಹುಂಡಿ ಫ್ರೌಢಶಾಲೆ ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ಉತ್ತಮ ಫಲಿತಾಂಶ ಹಾಗೂ ಕ್ರೀಡಾ ಚಟುವಟಿಕೆಗಳಿಂದ ಒಳ್ಳೆಯ ಹೆಸರು ಗಳಿಸಿರುವ ಶಾಲೆ. ಆದರೀಗಾ ಶಿಕ್ಷಕರ ಒಳ ಜಗಳದಿಂದ ಶಾಲೆಗೆ ಕೆಟ್ಟ ಹೆಸರು ಬರುವಂತಾಗಿದೆ. ಶಾಲೆಗೆ ಕಳೆದೊಂದು ವಾರದಿಂದ ಮಕ್ಕಳ ಹಾಜರಾತಿ ಕಡಿಮೆಯಾಗಿದೆ. ಈ ವೇಳೆ ಶಾಲಾ ಮಕ್ಕಳ ಹಾಜರಾತಿ ಕಡಿಮೆಯಾಗಲು ಕಾರಣ ಏನು ಅಂತಾ ನೋಡಿದಾಗ ಶಾಲೆಯ ಮಕ್ಕಳಿಗೆ ಜ್ವರ ಕೆಮ್ಮು ಕಾಣಿಸಿಕೊಂಡಿದೆಯಂತೆ. ಇದಕ್ಕೆ ಶಾಲೆಯಲ್ಲಿ ಮಕ್ಕಳು ಬೊಂಡ ತಿಂದಿದ್ದರಿಂದಲೇ ಮಕ್ಕಳಿಗೆ ಜ್ವರ ಬಂದಿದೆ ಎಂದು ಶಾಲೆಯ ಹಿಂದಿ ಶಿಕ್ಷಕ ದುಂಡುಮಹದೇವ ದೂರಿದ್ದಾರಂತೆ. ಹೌದು ಇದೇ ತಿಂಗಳು 8 ರಂದು ಶಾಲೆಯಲ್ಲಿ ಗಣಿತ ಹಬ್ಬ ಆಚರಣೆ ಮಾಡಲಾಗಿತ್ತಂತೆ. ಈ ವೇಳೆ ಶಾಲೆಯಲ್ಲಿ ಮಕ್ಕಳಿಗೆ ಶಾಲೆ ಮುಖ್ಯಶಿಕ್ಷಕ ಬೊಂಡ ಮಾಡಿಸಿದ್ದರಂತೆ. ಇದರಿಂದ ಮಕ್ಕಳಿಗೆ ಹೀಗಾಗಿದೆ ಎನ್ನುವ ಮೂಲಕ ಮುಖ್ಯ ಶಿಕ್ಷಕರ ದೂರಿದ್ದಾರೆ.
ಇದರಿಂದಾಗಿ ಇದೀಗ ಇಡೀ ಶಾಲೆ ಮಕ್ಕಳಿಗೆ ರಜೆ ಘೋಷಣೆ ಮಾಡಿದ್ದಾರೆ. ಆದ್ರೆ ಅದೇ ಕ್ಯಾಂಪಸ್ನಲ್ಲಿ ಇರುವ ಪ್ರೈಮರಿ ಶಾಲೆಯ ಮಕ್ಕಳಿಗೆ ಏಕೆ ಅನಾರೋಗ್ಯ ತಪ್ಪಿಲ್ಲ ಅನ್ನೋ ಪ್ರಶ್ನೆ ಸಹ ಮೂಡಿದೆ. ಈ ಬಗ್ಗೆ ಶಾಲೆ ಮುಖ್ಯಶಿಕ್ಷಕರನ್ನ ಕೇಳಿದ್ರೆ ಅವರು ಹೇಳುವ ಉತ್ತರ ಬೇರೆಯದ್ದಾಗಿದೆ. ಕಳೆದ ಎರಡು ವರ್ಷದಿಂದ ನನಗೆ ಶಾಲೆಯ ಚಾರ್ಜ್ ಅನ್ನು ದುಂಡುಮಹದೇವ್ ಕೊಟ್ಟಿಲ್ಲ. ಈ ಬಗ್ಗೆ ಕೇಳಿದಾಗಿನಿಂದ ಶಾಲೆಯಲ್ಲಿ ನನ್ನ ಬಗ್ಗೆ ಒಂದಿಲ್ಲೊಂದು ಆರೋಪ ಮಾಡುತ್ತಿದ್ದಾರೆ. ನಾನು ಕಾನೂನು ಪ್ರಕಾರ ಕೆಲಸ ಮಾಡುತ್ತಿದ್ದೇನೆ ಇದರಿಂದ ನನ್ನ ಮೇಲೆ ದೂರಿದ್ದಾರೆ ಅನ್ನುತ್ತಿದ್ದಾರೆ.
ಇದನ್ನೂ ಓದಿ:ಮಂಡ್ಯ: ಅಂಧಕಾರದಲ್ಲಿ ಮುಳುಗಿದ ಸರ್ಕಾರಿ ಶಾಲೆ, ವಿದ್ಯುತ್ ಬಿಲ್ ಬಾಕಿ ಹಿನ್ನೆಲೆ ಕರೆಂಟ್ ಕಟ್ ಮಾಡಿದ ಕೆಇಬಿ ಇಲಾಖೆ
ಇನ್ನು ಈ ಬಗ್ಗೆ ಗ್ರಾಮಸ್ಥರು ಕೂಡ ಬೇಸರಪಟ್ಟು ಕೊಳ್ಳುತ್ತಿದ್ದಾರೆ. ಈ ಶಾಲೆಗೆ ಒಳ್ಳೆಯ ಹೆಸರಿದೆ. ಆದ್ರೆ ಶಾಲೆಯ ಇಬ್ಬರು ಶಿಕ್ಷಕರಿಂದ ಶಾಲೆಗೆ ಕೆಟ್ಟ ಹೆಸರು ತರುತ್ತಿದ್ದಾರೆ. ಮಕ್ಕಳು ಯಾವುದೋ ಜಾತ್ರೆಗೆ ಹೋಗಿ ಅಲ್ಲಿ ಊಟ ಮಾಡಿ ಜ್ವರ ಬಂದಿರಬಹುದು. ಅದರಲ್ಲು ಶಾಲೆಯ 20 ಮಕ್ಕಳಿಗೆ ಮಾತ್ರ ಬಂದಿದೆ. ಇದರಿಂದ ಇಡೀ ಶಾಲೆ ಬಂದ್ ಮಾಡಿಸಿದ್ದಾರೆ. ಪರೀಕ್ಷೆ ಸಮಯದಲ್ಲಿ ಈ ರೀತಿ ಮಾಡುವುದರಿಂದ ಮಕ್ಕಳ ಮೇಲೆ ಪರಿಣಾಮ ಬೀರುತ್ತೆ. ಇದರಿಂದ ಇಬ್ಬರು ಶಿಕ್ಷಕರನ್ನ ವರ್ಗಾವಣೆ ಮಾಡಬೇಕು ಅಂತ ಗ್ರಾಮಸ್ಥರು ಶಿಕ್ಷಕರ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಒಟ್ಟಾರೆ ಇಬ್ಬರು ಶಿಕ್ಷಕರ ಆರೋಪ ಪ್ರತ್ಯಾರೋಪದಿಂದ ಕಳೆದ ಮೂರು ದಿನದಿಂದ ಶಾಲೆ ರಜೆ ಘೋಷಣೆ ಮಾಡಲಾಗಿದೆ. ಆದಷ್ಟು ಬೇಗ ಹಿರಿಯ ಅಧಿಕಾರಿಗಳು ಮಧ್ಯಪ್ರವೇಶ ಮಾಡಿ ಗೊಂದಲಕ್ಕೆ ತೆರ ಎಳೆಯಬೇಕಾಗಿದೆ.
ವರದಿ: ದಿಲೀಪ್ ಚೌಡಹಳ್ಳಿ ಟಿವಿ9 ಚಾಮರಾಜನಗರ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ