ಸರ್ಕಾರಿ ಕಾಲೇಜಿಗೆ ರೋಬೋಟಿಕ್ ಪ್ರಯೋಗಾಲಯವನ್ನು ಕೊಡುಗೆಯಾಗಿ ನೀಡಿದ ಸಚಿವ ವಿ.ಸೋಮಣ್ಣ ಅಭಿಮಾನಿಗಳು

ಸರ್ಕಾರಿ ಕಾಲೇಜಿಗೆ ರೋಬೋಟಿಕ್ ಪ್ರಯೋಗಾಲಯವನ್ನು ಸಚಿವ ವಿ.ಸೋಮಣ್ಣ ಅಭಿಮಾನಿಗಳು ಕೊಡುಗೆಯಾಗಿ ನೀಡುವ ಮೂಲಕ ಸಚಿವರ ಹುಟ್ಟುಹಬ್ಬವನ್ನ ವಿಶಿಷ್ಟವಾಗಿ ಆಚರಿಸಿದ್ದಾರೆ. ಅಲ್ಲದೆ, ರಾಜ್ಯದಲ್ಲೇ ರೊಬೋಟಿಕ್ ಪ್ರಯೋಗಾಲಯ ಹೊಂದಿದ ಮೊದಲ ಸರ್ಕಾರಿ ಪದವಿ ಪೂರ್ವ ಕಾಲೇಜು ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

ಸರ್ಕಾರಿ ಕಾಲೇಜಿಗೆ ರೋಬೋಟಿಕ್ ಪ್ರಯೋಗಾಲಯವನ್ನು ಕೊಡುಗೆಯಾಗಿ ನೀಡಿದ ಸಚಿವ ವಿ.ಸೋಮಣ್ಣ ಅಭಿಮಾನಿಗಳು
ರೋಬೋಟ್ ಪ್ರಯೋಗಾಲಯ
Follow us
TV9 Web
| Updated By: Rakesh Nayak Manchi

Updated on:Jul 26, 2022 | 1:22 PM

ಚಾಮರಾಜನಗರ: ಸರ್ಕಾರಿ ಕಾಲೇಜಿಗೆ ರೋಬೋಟಿಕ್ ಪ್ರಯೋಗಾಲಯ (Robotic Laboratory)ವನ್ನು ಸಚಿವ ವಿ.ಸೋಮಣ್ಣ ಅಭಿಮಾನಿಗಳು ಕೊಡುಗೆಯಾಗಿ ನೀಡುವ ಮೂಲಕ ಸಚಿವರ ಹುಟ್ಟುಹಬ್ಬವನ್ನ ವಿಶಿಷ್ಟವಾಗಿ ಆಚರಿಸಿದ್ದಾರೆ. ದುಂದುವೆಚ್ಚಕ್ಕೆ ತಿಲಾಂಜಲಿ ಇಟ್ಟು ಜನೋಪಯೋಗಿ ಕಾರ್ಯಕ್ಕೆ ಮುಂದಾದ ಅಭಿಮಾನಿಗಳು ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರು ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ರೋಬೋಟಿಕ್ ಪ್ರಯೋಗಾಲಯವನ್ನು ಕೊಡುಗೆಯಾಗಿ ನೀಡಿದರು. ಆ ಮೂಲಕ ರಾಜ್ಯದಲ್ಲೇ ರೊಬೋಟಿಕ್ ಪ್ರಯೋಗಾಲಯ ಹೊಂದಿದ ಮೊದಲ ಸರ್ಕಾರಿ ಪದವಿ ಪೂರ್ವ ಕಾಲೇಜು ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

ಸಾಮಾನ್ಯವಾಗಿ ರಾಜಕೀಯ ವ್ಯಕ್ತಿಗಳ ಹುಟ್ಟುಹಬ್ಬವನ್ನು ಕೇಕ್ ಕಟ್ ಮಾಡಿ ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ. ಇಂತಹ ಆಚರಣೆಗೆ ದುಂದುವೆಚ್ಚಗಳು ನಡೆಯುವುದೇ ಹೆಚ್ಚು. ಇದರ ಹೊರತಾಗಿ ಧನಾತ್ಮಕವಾಗಿ ಚಿಂತನೆ ನಡೆಸಿದ ಸಚಿವ ಸೋಮಣ್ಣ ಅವರ ಅಭಿಮಾನಿಗಳು ಬೇಗೂರು ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ವಿಜ್ಞಾನ ಮತ್ತು ರೋಬೋಟಿಕ್ ಪ್ರಯೋಗಾಲಯವನ್ನು ಕೊಡುಗೆಯಾಗಿ ನೀಡಿದ್ದಾರೆ. ರೊಬೋಟಿಕ್ ಪ್ರಯೋಗಾಲಯ ಹೊಂದಿದ ರಾಜ್ಯದ ಮೊಲದ ಸರ್ಕಾರಿ ಪದವಿ ಪೂರ್ವ ಕಾಲೇಜು ಎಂಬ ಹಿರಿಮೆಗೆ ಪಾತ್ರವಾಗಿದೆ.

ಕೇಕ್ ಕಟ್ ಮಾಡುವುದಕ್ಕೆ, ಅದ್ದೂರಿ ಪಾರ್ಟಿ ಆಯೋಜನೆ ಮಾಡುವುದಕ್ಕೆ, ಬ್ಯಾನರ್, ಪ್ಲೆಕ್ಸ್, ಬಂಟಿಂಗ್ಸ್‌ಗಳಿಗೆ, ಅನಾವಶ್ಯಕ ದುಂದುವೆಚ್ಚಕ್ಕೆ ತಿಲಾಂಜಲಿ ಇಟ್ಟು ಜನೋಪಯೋಗಿ ಕಾರ್ಯಕ್ಕೆ ಮುಂದಾದ ಅಭಿಮಾನಿಗಳು ಕಳೆದ ವರ್ಷ ಹಂಗಳದ ಸರ್ಕಾರಿ ಶಾಲೆಗೆ ಡಿಜಿಟಲ್ ಲೈಬ್ರರಿ ನೀಡಿದ್ದರು.

ಯಧುವೀರ್ ಒಡೆಯರ್ ಅವರಿಂದ ಲೋಕಾರ್ಪಣೆ

ರೋಬೋಟಿಕ್ ಪ್ರಯೋಗಾಲಯವನ್ನು ಇಂದು ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಂದ ಲೋಕಾರ್ಪಣೆಗೊಳಿಸಿದರು. ಪ್ರೌಢಶಾಲಾ ಹಾಗೂ ಪಿಯುಸಿ ವಿದ್ಯಾರ್ಥಿಗಳ ಕ್ರಿಯಾಶೀಲ ಕಲಿಕೆಗೆ ಪೂರಕವಾಗಿರುವ ಈ ಪ್ರಯೋಗಾಲಯದಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಮುಖದಲ್ಲಿ ಸಂತಸ ಅರಳಿದಂತಾಗಿದೆ.

ವಿದ್ಯಾರ್ಥಿಗಳಿಗೆ ಅನುಕೂಲವಾದ ರೊಬೋಟ್ ಪ್ರಯೋಗಾಲಯ

ರೊಬೋಟ್ ಪ್ರಯೋಗಾಲಯದಿಂದಾಗಿ ವಿದ್ಯಾರ್ಥಿಗಳು ಯಾವುದೇ ಸಂಶಯಗಳನ್ನು ಸುಲಭವಾಗಿ ನಿವಾರಿಕೊಳ್ಳುವಂತಾಗಿದೆ.ಶಿಕ್ಷಕರ ನೆರವಿಲ್ಲದೆ ವಿದ್ಯಾರ್ಥಿಗಳೇ ನಾನಾ ರೀತಿಯ ಮಾಡೆಲ್​ಗಳನ್ನು ತಯಾರಿಸಲು, ಪ್ರಯೋಗಗಳನ್ನು ಮಾಡಲು ಅನುಕೂಲಕರವಾಗಿದೆ. ಯಾವುದೇ ಪ್ರಶ್ನೆಗಳಿದ್ದರೂ ಅದನ್ನು ವಿದ್ಯಾರ್ಥಿಗಳು ರೋಬೋಟ್​ನೊಂದಿಗೆ ಕೇಳಿ ಉತ್ತರ ಪಡೆದುಕೊಳ್ಳಬಹುದು. ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾದ ಪಠ್ಯಗಳ ಪ್ರೊಗ್ರಾಮಿಂಗ್‌ಗಳ ಅಳವಡಿಕೆ ಮಾಡಲಾಗಿದೆ.

Published On - 1:16 pm, Tue, 26 July 22

ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ