ಚಾಮರಾಜನಗರ: ಶವ ಸಂಸ್ಕಾರಕ್ಕೆ ತೆರಳಿದ್ದ ವೇಳೆ ಹೆಜ್ಜೇನು ದಾಳಿ: ಓರ್ವ ವ್ಯಕ್ತಿ ಸಾವು, 10 ಜನರಿಗೆ ಗಾಯ

| Updated By: ಗಂಗಾಧರ​ ಬ. ಸಾಬೋಜಿ

Updated on: Sep 18, 2023 | 2:10 PM

ಮೃತ ಮಹಿಳೆಯ ಶವಸಂಸ್ಕಾರಕ್ಕೆ ನೆಂಟರು ಹೋಗಿದ್ದು, ಪಾರ್ಥೀವ ಶರೀರಕ್ಕೆ ಪೂಜೆ ಸಲ್ಲಿಸಿ ಅಗ್ನಿ ಸ್ಪರ್ಶ ಮಾಡುತ್ತಿದ್ದಂತೆ ಮರದ ಮೇಲಿದ್ದ ಹೆಜ್ಜೇನು ದಾಳಿ ಮಾಡಿದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, 10 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿರುವಂತಹ ಘಟನೆ ಜಿಲ್ಲೆಯ ಹನೂರು ತಾಲೂಕಿನ ಕೊಂಗರಹಳ್ಳಿಯಲ್ಲಿ ನಡೆದಿದೆ.

ಚಾಮರಾಜನಗರ: ಶವ ಸಂಸ್ಕಾರಕ್ಕೆ ತೆರಳಿದ್ದ ವೇಳೆ ಹೆಜ್ಜೇನು ದಾಳಿ: ಓರ್ವ ವ್ಯಕ್ತಿ ಸಾವು, 10 ಜನರಿಗೆ ಗಾಯ
ಮೃತ ಚಿನ್ನಪ್ಪ
Follow us on

ಚಾಮರಾಜನಗರ, ಸೆಪ್ಟೆಂಬರ್​ 18: ಶವ ಸಂಸ್ಕಾರಕ್ಕೆ ತೆರಳಿದ್ದ ವೇಳೆ ಹೆಜ್ಜೇನು ದಾಳಿ (Bee attack)  ಮಾಡಿದ ಪರಿಣಾಮ ಓರ್ವನ ಸಾವನ್ನಪ್ಪಿದ್ದು, 10 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿರುವಂತಹ ಘಟನೆ ಜಿಲ್ಲೆಯ ಹನೂರು ತಾಲೂಕಿನ ಕೊಂಗರಹಳ್ಳಿಯಲ್ಲಿ ನಡೆದಿದೆ. ಚಿನ್ನಪ್ಪ (60) ಹೆಜ್ಜೇನು ದಾಳಿಗೆ ಬಲಿಯಾದ ವ್ಯಕ್ತಿ. ಗಾಯಗೊಂಡ 10 ಮಂದಿ ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಮೃತ ಮಹಿಳೆಯ ಶವಸಂಸ್ಕಾರಕ್ಕೆ ನೆಂಟರು ಹೋಗಿದ್ದು, ಪಾರ್ಥೀವ ಶರೀರಕ್ಕೆ ಪೂಜೆ ಸಲ್ಲಿಸಿ ಅಗ್ನಿ ಸ್ಪರ್ಶ ಮಾಡುತ್ತಿದ್ದಂತೆ ಮರದ ಮೇಲಿದ್ದ ಹೆಜ್ಜೇನು ದಾಳಿ ಮಾಡಿವೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗ ಮಧ್ಯೆ ಚಿನ್ನಪ್ಪ ಮೃತಪಟ್ಟಿದ್ದಾರೆ.

ಬಿಜೆಪಿ ಮೇಲೆ ಹೆಜ್ಜೇನು ಅಟ್ಯಾಕ್​..! 

ಕೋಲಾರ: ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ರಾಜ್ಯ ಕಾಂಗ್ರೆಸ್​​ ಸರ್ಕಾರದ ವಿರುದ್ಧ ಬಿಜೆಪಿ ಮುಖಂಡರು ಪ್ರತಿಭಟನೆ ಮಾಡಿದ್ದರು. ಕಾಂಗ್ರೆಸ್​ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ಹೊರಹಾಕುತ್ತಿದ್ದ ಇದೇ ವೇಳೆ ಹೆಜ್ಜೇನು ಗೂಡುಗಳಲ್ಲಿನ ಕೆಲವು ಜೇನುನೊಣಗಳು ಎದ್ದು ಪ್ರತಿಭಟನೆ ನಡೆಯುತ್ತಿದ್ದ ಜನರ ಕಡೆ ನುಗ್ಗಿದ್ದವು. ಮೊದಲು ಒಬ್ಬ ಬಿಜೆಪಿ ಕಾರ್ಯಕರ್ತನಿಗೆ ಮುತ್ತಿಕೊಂಡಿದ್ದವು.

ಇದನ್ನೂ ಓದಿ: ಚಿಂತಾಮಣಿ: ಚಾರಣಕ್ಕೆ ಬಂದಿದ್ದ 30ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ: ಆಸ್ಪತ್ರೆಗೆ ದಾಖಲು

ಏನಾಯ್ತು ನೋಡುವಷ್ಟರಲ್ಲಿ ಪ್ರತಿಭಟನೆ ಮಾಡುತ್ತಿದ್ದ ನೂರಾರು ಜನರ ಮೇಲೆ ಒಂದೊಂದಾಗಿ ಜೇನು ನೊಣಗಳು ದಾಳಿ ಮಾಡಲು ಶುರುಮಾಡಿದ್ದವು. ಈ ವೇಳೆ ಅಲ್ಲಿದ್ದ ಸಂಸದ ಮುನಿಸ್ವಾಮಿ ಹಾಗೂ ಬಿಜೆಪಿ
ಜಿಲ್ಲಾಧ್ಯಕ್ಷ ವೇಣುಗೋಪಾಸ್ ಸೇರಿದಂತೆ ಹಲವು ಜನ ಬಿಜೆಪಿ ಮುಖಂಡರು, ಕಾರ್ಯಕರ್ತರು ಚೆಲ್ಲಾಪಿಲ್ಲಿಯಾಗಿ ಓಡಿದ್ದರು.

ಇದನ್ನೂ ಓದಿ: ಅಕ್ರಮವಾಗಿ ಇ ಸಿಗರೇಟ್​​​ಗಳ ಸಾಗಾಟ: ಇಬ್ಬರು ಪ್ರಯಾಣಿಕರನ್ನು ವಶಕ್ಕೆ ಪಡೆದ ಕಸ್ಟಮ್ಸ್ ಅಧಿಕಾರಿಗಳು

ಕೆಲವರು ಹೆದ್ದಾರಿ ಕಡೆಗೆ ಓಡಿದರೆ ಮತ್ತೆ ಕೆಲವರು ಕರ್ಚೀಫ್​, ಟವಲ್​ನಲ್ಲಿ ಮುಖ ಮುಚ್ಚಿಕೊಂಡು ಓಡಿಹೋಗಿದ್ದರು. ಕೆಲವರು ತಕ್ಷಣ ಓಡಿ ಹೋಗಿ ಕಾರ್​ಗಳಲ್ಲಿ ಸೇರಿಕೊಂಡರು. ಈ ವೇಳೆ ಸಂಸದ ಮುನಿಸ್ವಾಮಿ ಸೇರಿ ಸುಮಾರು 20ಕ್ಕೂ ಹೆಚ್ಚು ಜನರ ಮೇಲೆ ಹೆಜ್ಜೇನು ದಾಳಿ ಮಾಡಿದ್ದವು.

ಹೆಜ್ಜೇನು ದಾಳಿಗೆ ಕುದುರೆಗಳು ಬಲಿ

ತುಮಕೂರು: ಜಿಲ್ಲೆಯ ಕುಣಿಗಲ್ ಪಟ್ಟಣದ ಸ್ಟಡ್ ಫಾರಂನಲ್ಲಿ ವಂಶಾಭಿವೃದ್ಧಿ ಎಂದು 2 ಕೋಟಿ ರೂ, ತಂದಿದ್ದ 2 ಕುದುರೆಗಳು ಹೆಜ್ಜೇನು ದಾಳಿಗೆ ಬಲಿಯಾಗಿತ್ತು. ವಂಶಾಭಿವೃದ್ಧಿಗೆ ಬಳಸುತ್ತಿದ್ದ ಅಮೆರಿಕ ಮೂಲದ ಏರ್ ಸಪೋರ್ಟ್ 15 ಹಾಗೂ ಐರ್ಲೆಂಡ್ ಮೂಲದ ಸನಸ್ ಪರ್ ಅಕ್ಷಮ್ 10 ಎಂಬ ಹೆಸರಿನ ಕುದುರೆಗಳು ಸಾವನ್ನಪ್ಪಿದ್ದವು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.