ರಾಜ್ಯದಲ್ಲಿ ಸಿಎಂ ಬದಲಾವಣೆ ಆಗೋದು ಫಿಕ್ಸ್: ಹೊಸ ಬಾಂಬ್​ ಸಿಡಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

| Updated By: ಗಂಗಾಧರ​ ಬ. ಸಾಬೋಜಿ

Updated on: Nov 06, 2023 | 2:54 PM

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ತಂಡದಿಂದ ಪ್ರವಾಸ ಇಂದು ಚಾಮರಾಜನಗರಕ್ಕೆ ಬಿಜೆಪಿ ಬರ ಅಧ್ಯಯನ ತಂಡ ಆಗಮಿಸಿದೆ. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಬಳಿಕ ಅಥವಾ ಅದರಳೊಗೆ ರಾಜ್ಯದಲ್ಲಿ ಸಿಎಂ ಬದಲಾವಣೆ ಆಗೋದು ಫಿಕ್ಸ್ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.

ರಾಜ್ಯದಲ್ಲಿ ಸಿಎಂ ಬದಲಾವಣೆ ಆಗೋದು ಫಿಕ್ಸ್: ಹೊಸ ಬಾಂಬ್​ ಸಿಡಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​
Follow us on

ಚಾಮರಾಜನಗರ, ನವೆಂಬರ್​​​​ 06: ಲೋಕಸಭಾ ಚುನಾವಣೆ ಬಳಿಕ ಅಥವಾ ಅದರಳೊಗೆ ರಾಜ್ಯದಲ್ಲಿ ಸಿಎಂ ಬದಲಾವಣೆ ಆಗೋದು ಫಿಕ್ಸ್ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಹೊಸ ಬಾಂಬ್ ಸಿಡಿಸಿದ್ದಾರೆ. ಚಾಮರಾಜನಗರ ಸೀಗೆಹಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯಗೆ ಖುರ್ಚಿ ಉಳಿಸಿಕೊಳ್ಳುವುದೇ ದೊಡ್ಡ ತಲೆನೋವಾಗಿದೆ. ಬೆಳಗ್ಗೆ ಎದ್ದರೆ ಪ್ರಧಾನಿ ಬೈಯ್ಯೋದೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್​ ಕೆಲಸವಾಗಿದೆ ಎಂದು ​ ಕಿಡಿಕಾರಿದ್ದಾರೆ.

ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಭೇಟಿಗೆ ಒಂದು ವಾರ ಕಾಯುತ್ತಾರೆ. ಅಂತಹದಲ್ಲಿ ಪ್ರಧಾನಿ ಮೋದಿ ಭೇಟಿಗೆ ಒಂದು ದಿನ ಕಾದರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಜಾತಿ ಗಣತಿ ಜಾರಿ ವಿಚಾರ: ವಿರೋಧಿಸುತ್ತಿರುವ ಒಕ್ಕಲಿಗ, ಲಿಂಗಾಯತರಿಗೆ ಸತೀಶ್ ಜಾರಕಿಹೊಳಿ ಭರವಸೆ

ರಾಜ್ಯದಲ್ಲಿ ಬರಗಾಲಕ್ಕೆ ಇರುವ ಹಣ ಉಪಯೋಗವಾಗುತ್ತಿಲ್ಲ. ಮೊದಲೇ ಸಮಯಾವಕಾಶ ಕೇಳಿ ಪ್ರಧಾನಿ ಭೇಟಿಗೂ ಹೋಗಬೇಕು. ಬರ ಪರಿಸ್ಥಿತಿ ಅಂಕಿ ಅಂಶವನ್ನು ಸರ್ಕಾರದ ಗಮನಕ್ಕೆ ತರಬೇಕಿದೆ ಎಂದು ಹೇಳಿದ್ದಾರೆ.

ಪರೋಕ್ಷವಾಗಿ ಜೈಲುಪಾಲಾಗ್ತಾರೆ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ತಿಹಾರ್ ಜೈಲಿಗೆ ಹೋಗುತ್ತಾರೆಂಬ ವಿಚಾರವಾಗಿ ಮಾತನಾಡಿದ ಅವರು, ಪರೋಕ್ಷವಾಗಿ ಜೈಲುಪಾಲಾಗ್ತಾರೆ ಎಂದಿದ್ದಾರೆ. ಈಗಾಗಲೇ ಡಿಕೆ ಶಿವಕುಮಾರ್​ ಲೀಗಲ್ ಸೆಲ್‌ನವರು ದೆಹಲಿಗೆ ಹೋಗಿ ಬೀಡುಬಿಟ್ಟಿದ್ದಾರೆ. ಅವರೆಲ್ಲಾ ಯಾವ ಫ್ಲೈಟ್‌ನಲ್ಲಿ ಹೋದರು ಎಂಬ ಬಗ್ಗೆ ಮಾಹಿತಿ ಕೇಳಿ ಎಂದಿದ್ದಾರೆ.

ಹಿಂದೂ ವಿರೋಧಿ ಹೇಳಿಕೆ ನೀಡಿದ್ರೆ ಸನ್ಮಾನ, ಪ್ರಶಸ್ತಿ ನೀಡ್ತಾರೆ ಎಂಬ ಆಸೆ ಕೆಲವರಿಗೆ

ಗಣಪತಿ ನಮ್ಮ ಸಂಸ್ಕೃತಿ ಅಲ್ಲಾ ಎಂಬ ಸಾಣೇಹಳ್ಳಿ ಶ್ರೀ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಹಿಂದೂ ವಿರೋಧಿ ಹೇಳಿಕೆ ನೀಡಿದರೆ ಸನ್ಮಾನ ಮಾಡುತ್ತಾರೆ, ಪ್ರಶಸ್ತಿ ನೀಡುತ್ತಾರೆ ಎಂಬ ಆಸೆ ಕೆಲವರಿಗೆ ಹುಟ್ಟಿದೆ. ಪ್ರಶಸ್ತಿ ತಮ್ಮ ತಿಂಗಳ ಖರ್ಚಿಗೆ ಹಣ ಸಿಗುತ್ತೆ ಎಂಬ ಆಸೆಗೆ ಕೆಲವರು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಒಕ್ಕಲಿಗ ವಿರೋದಿ ಹೇಳಿಕೆ ನೀಡಿದವರಿಗೆ ಸನ್ಮಾನ ಮಾಡಲಾಗಿದೆ ಎಂದು ವಾಗ್ದಾಳಿ ಮಾಡಿದ್ದಾರೆ.

ಸಿದ್ದರಾಮಯ್ಯರ ಕಾಲ್ಗುಣ ರಾಜ್ಯದಲ್ಲಿ ಬರಗಾಲ ಬಂದಿದೆ

ಸಿದ್ದರಾಮಯ್ಯರ ಕಾಲ್ಗುಣ ರಾಜ್ಯದಲ್ಲಿ ಬರಗಾಲ ಬಂದಿದೆ. ನಮ್ಮ ಪ್ರವಾಸ ಆರಂಭದ ಬಳಿಕ ಮಳೆಯಾಗಿದೆ. ಚಾಮರಾಜನಗರ, ಮೈಸೂರು ಭಾಗದಲ್ಲಿ ಮಳೆಯಾಗಿದೆ. ಬಾಳೆ ಕೂಡ ಇನ್ನೂ ಗೋನೆ ಕಚ್ಚಿಲ್ಲ. ಕಾಂಗ್ರೆಸ್ ನವರು ಬರಗಾಲದ ಬಗ್ಗೆ ಚರ್ಚೆ ಮಾಡ್ತಿಲ್ಲ. ಸಿಎಂ ಬದಲಾವಣೆ ಚರ್ಚೆ ಮಾಡುತ್ತಾ ಕೂತಿದ್ದಾರೆ. ಸಿಎಂ ಅಧಿಕಾರ ಉಳಿಸಿಕೊಳ್ಳಲೂ‌ ಚಿಂತಿಸುತ್ತಿದ್ದಾರೆ. ಇನ್ನೂ ಡಿಸಿಎಂ ರಾಮನಗರ ರಹೀಂ ನಗರ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದ್ದಾರೆ.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ತಂಡದಿಂದ ಪ್ರವಾಸ ಇಂದು ಚಾಮರಾಜನಗರಕ್ಕೆ ಬಿಜೆಪಿ ಬರ ಅಧ್ಯಯನ ತಂಡ ಆಗಮಿಸಿದೆ. ಚಾಮರಾಜನಗರ ತಾಲೂಕಿನ ಕೆರಹಳ್ಳಿ, ಮುಕ್ಕಡಹಳ್ಳಿ, ಮೂಡ್ನಾಕೂಡು, ಬೇಡರಪುರ ಗ್ರಾಮದಲ್ಲಿ ಬರ ಅಧ್ಯಯನ ಶಾಸಕ ಶ್ರೀವತ್ಸ, ಮಾಜಿ ಶಾಸಕರಾದ ನಿರಂಜನ್ ಕುಮಾರ್, ಎನ್ ಮಹೇಶ್ ಒಳಗೊಂಡ ತಂಡದಿಂದ ಬರ ಪರಿಶೀಲನೆ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.