Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಸೆಂಬರ್ ಬಳಿಕ ಸರ್ಕಾರೀ ನೌಕರರಿಗೆ ಸಂಬಳ ನೀಡಲು ಸಹ ಸರ್ಕಾರದ ಬಳಿ ಹಣವಿರಲ್ಲ: ಬಸನಗೌಡ ಪಾಟೀಲ್ ಯತ್ನಾಳ್

ಡಿಸೆಂಬರ್ ಬಳಿಕ ಸರ್ಕಾರೀ ನೌಕರರಿಗೆ ಸಂಬಳ ನೀಡಲು ಸಹ ಸರ್ಕಾರದ ಬಳಿ ಹಣವಿರಲ್ಲ: ಬಸನಗೌಡ ಪಾಟೀಲ್ ಯತ್ನಾಳ್

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 06, 2023 | 4:05 PM

ಮುಖ್ಯಮಂತ್ರಿ ಸಿದ್ದರಾಮ್ಯಯನವರಿಗೆ ತಮ್ಮ ಕುರ್ಚಿ ಉಳಿಸಿಕೊಳ್ಳುವ ಜೊತೆಗೆ ಗ್ಯಾರಂಟಿ ಯೋಜನೆಗಳಿಗೆ ಹಣ ಕ್ರೋಢೀಕರಿಸುವುದು ದೊಡ್ಡ ಚಿಂತೆಯಾಗಿದೆ; ಹಾಗಾಗೇ, ಅವರು ಏನೆನೋ ಮಾತಾಡುತ್ತಿದ್ದಾರೆ ಎಂದ ಯತ್ನಾಳ್ ರಾಜ್ಯದಲ್ಲಿ ಮುಖ್ಯಮಂತ್ರಿಯ ಬದಲಾವಣೆ ಯಾವಾಗ ಬೇಕಾದರೂ ಆಗಬಹುದು ಅಂತ ಮುಗಳ್ನಗುತ್ತಾ ಹೇಳಿದರು.

ಚಾಮರಾಜನಗರದ: ಲೋಕ ಸಭಾ ಚುನಾವಣೆಗೆ (post Lok Sabha polls) ಮೊದಲು ರಾಜ್ಯ ಸರ್ಕಾರ ದಿವಾಳಿಯೇಳಲಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಹೇಳಿದರು. ಚಾಮರಾಜನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಯತ್ನಾಳ್, ಡಿಸೆಂಬರ್ ನಂತರ ಸರ್ಕಾರೀ ನೌಕರರಿಗೆ (government servants) ಸಂಬಳ ನೀಡಲು ರಾಜ್ಯದ ಬೊಕ್ಕಸದಲ್ಲಿ ಹಣ ಇರೋದಿಲ್ಲ, ಇದ್ದಬದ್ದ ಹಣವನ್ನೇ ಸಿದ್ದರಾಮಯ್ಯ ಸರ್ಕಾರ ಗ್ಯಾರಂಟಿ ಯೋಜೆನೆಗಳಿಗೆ ಸುರಿದಿದೆ, ಗ್ಯಾರಂಟಿಗಳನ್ನು ಸಹ ಪೂರ್ಣ ಪ್ರಮಾಣದಲ್ಲಿ ಈಡೇರಿಸಲು ಅವರಿಗೆ ಸಾಧ್ಯವಾಗಿಲ್ಲ ಎಂದು ಹೇಳಿದರು. ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಎರಡು ತಿಂಗಳಿಂದ ಸಂಬಳ ನೀಡಿಲ್ಲ ಹಾಗಾಗಿ ಮುಂಬರುವ ತಿಂಗಳುಗಳಲ್ಲಿ ಕರ್ನಾಟಕ ಸರ್ಕಾರ, ಪಂಜಾಬ್ ಮತ್ತ ದೆಹಲಿ ಸರ್ಕಾರಗಳ ಹಾಗೆ ದಿವಾಳಿಯಾಗಲಿದೆ ಎಂದು ಶಾಸಕ ಹೇಳಿದರು. ಮುಖ್ಯಮಂತ್ರಿ ಸಿದ್ದರಾಮ್ಯಯನವರಿಗೆ ತಮ್ಮ ಕುರ್ಚಿ ಉಳಿಸಿಕೊಳ್ಳುವ ಜೊತೆಗೆ ಗ್ಯಾರಂಟಿ ಯೋಜನೆಗಳಿಗೆ ಹಣ ಕ್ರೋಢೀಕರಿಸುವುದು ದೊಡ್ಡ ಚಿಂತೆಯಾಗಿದೆ; ಹಾಗಾಗೇ, ಅವರು ಏನೆನೋ ಮಾತಾಡುತ್ತಿದ್ದಾರೆ ಎಂದ ಯತ್ನಾಳ್ ರಾಜ್ಯದಲ್ಲಿ ಮುಖ್ಯಮಂತ್ರಿಯ ಬದಲಾವಣೆ ಯಾವಾಗ ಬೇಕಾದರೂ ಆಗಬಹುದು ಅಂತ ಮುಗಳ್ನಗುತ್ತಾ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ