ಗಡಿನಾಡು ಚಾಮರಾಜನಗರ ಜನತೆಗೆ ಶುರುವಾಯ್ತು ಡೆಂಘಿ ಟೆನ್ಷನ್! ಒಂದೇ ತಿಂಗಳಲ್ಲಿ ದಾಖಲಾಯ್ತು ಬರೋಬ್ಬರಿ 50 ಕ್ಕೂ ಹೆಚ್ಚು ಪಾಸಿಟಿವ್ ಕೇಸ್​

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 27, 2023 | 7:19 AM

ಮಾರಕ ಡೆಂಘಿ ಖಾಯಿಲೆಗೆ ಗಡಿನಾಡು ಚಾಮರಾಜನಗರ ಜಿಲ್ಲೆಯ ಜನತೆ ಬೆಚ್ಚಿ ಬಿದ್ದಿದ್ದಾರೆ. ವೈರಲ್ ಫೀವರ್ ನಂತಹ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು. ಆರೋಗ್ಯ ಇಲಾಖಾ ಸಿಬ್ಬಂದಿ ಫೀಲ್ಡ್​ಗೆ ಇಳಿದು ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

ಗಡಿನಾಡು ಚಾಮರಾಜನಗರ ಜನತೆಗೆ ಶುರುವಾಯ್ತು ಡೆಂಘಿ ಟೆನ್ಷನ್! ಒಂದೇ ತಿಂಗಳಲ್ಲಿ ದಾಖಲಾಯ್ತು ಬರೋಬ್ಬರಿ 50 ಕ್ಕೂ ಹೆಚ್ಚು ಪಾಸಿಟಿವ್ ಕೇಸ್​
ಚಾಮರಾಜನಗರ
Follow us on

ಚಾಮರಾಜನಗರ, ಜು.27: ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿರುವ ಅರೋಗ್ಯ ಇಲಾಖಾ(Health Department)  ಸಿಬ್ಬಂದಿಗಳು, ಪ್ರತಿಯೊಂದು ಗಲ್ಲಿ ಗಲ್ಲಿ ತಿರುಗಿ ಸರ್ವೆ ನಡೆಸುತ್ತಿರುವ ದಾದಿಯರು. ಈ ಎಲ್ಲಾ ದೃಶ್ಯಗಳು ಕಣ್ಣಿಗೆ ಬಿದ್ದಿದ್ದು ಚಾಮರಾಜನಗರ (Chamarajanagar) ದಲ್ಲಿ. ಹೌದು ದಿನದಿಂದ ದಿನಕ್ಕೆ ನಗರದಲ್ಲಿ ಡೆಂಘಿ(Dengue)ಪ್ರಕರಣ ಹೆಚ್ಚಾದ ಹಿನ್ನಲೆ ಆರೋಗ್ಯ ಇಲಾಖಾ ಸಿಬ್ಬಂದಿ ಖುದ್ದು ಫೀಲ್ಡ್​ಗೆ ಇಳಿದಿದ್ದಾರೆ. ನಗರದ ಪ್ರತಿಯೊಂದು ಸ್ಥಳಕ್ಕೂ ತೆರಳಿ ಸ್ವಚ್ಚತೆ ಕುರಿತು ಅರಿವು ಮೂಡಿಸುವ ಕೆಲಸಕ್ಕೆ ಮುಂದಾಗಿದ್ದು, ಮನೆ ಮುಂದೆ ಬಿಸಾಡಿರುವ ಟೈಯರ್, ಹಳೆ ಪಾತ್ರೆ, ಹೂ ಕುಂಡಗಳನ್ನ ಶುಚಿಗೊಳಿಸುವಂತೆ ನಗರದ ಜನತೆಗೆ ಅರಿವು ಮೂಡಿಸುತ್ತಿದ್ದಾರೆ.

ಒಂದೇ ತಿಂಗಳಲ್ಲಿ ಬರೋಬ್ಬರಿ 50 ಪಾಸಿಟಿವ್ ಕೇಸ್​

ಇದೀಗ ಮಾನ್ಸೂನ್ ಮಳೆಯ ಕಾರಣ ಮನೆ ಮುಂದೆ ಬಿಸಾಡಿರುವ ಸ್ಥಳಗಳಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗುತ್ತಿವೆ. ಈಡಿಸ್ ಸೊಳ್ಳೆ ಕಚ್ಚುವಿಕೆಯಿಂದ ಕಾಲರಾ, ಮಲೇರಿಯಾ, ಡೆಂಘಿಯಂತಹ ಪ್ರಕರಣಗಳು ದಿನ ನಿತ್ಯ ರಿಪೋರ್ಟ್ ಆಗುತ್ತಲೇ ಇದ್ದು, ಇನ್ನು ಕಳೆದ ಒಂದು ತಿಂಗಳಿನಲ್ಲೇ ಬರೋಬ್ಬರಿ 50 ಪಾಸಿಟಿವ್ ಕೇಸ್ ರಿಜಿಸ್ಟರ್ ಆಗಿದೆ. ಇದರಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿಗೆ ಹೊಸತೊಂದು ತಲೆ ನೋವು ಎದುರಾಗಿದೆ. ಇನ್ನು ಆಸ್ಪತ್ರೆಗೆ ದಾಖಲಾಗುತ್ತಿರುವ ರೋಗಿಗಳ ಪೈಕಿ ಶೇಕಡ 15 ರಿಂದ 20 ಪರ್ಸೆಂಟ್ ವೈರಲ್ ಫೀವರ್ ಪ್ರಕರಣಗಳು ಹೆಚ್ಚಾಗಿವೆ ಎಂದು ಚಿಮ್ಸ್ ವೈದ್ಯ ಡಾ.ಕೃಷ್ಣಪ್ರಸಾದ್ ಹೇಳಿದ್ದಾರೆ.

ಇದನ್ನೂ ಓದಿ:Fertility Testing: ನಿಗದಿತ ಆರೋಗ್ಯ ತಪಾಸಣೆ ಭಾಗವಾಗಿ ಫಲವತ್ತತೆ ಪರೀಕ್ಷೆ ಏಕೆ ಮಾಡಿಸಬೇಕು?

ಅದೇನೆ ಹೇಳಿ ಸದ್ಯ ಫೀಲ್ಡಿಗಿಳಿದಿರುವ ಆರೋಗ್ಯ ಇಲಾಖಾ ಸಿಬ್ಬಂದಿ, ವೈರಲ್ ಫೀವರ್ ಗುಣ ಲಕ್ಷಣವಿರುವ ಮಾಹಿತಿ ಕಲೆ ಹಾಕಿ ಸ್ಥಳದಲ್ಲೆ ಕೆಲ ಮಾತ್ರೆಗಳನ್ನ ನೀಡುತ್ತಿದ್ದಾರೆ. ಇನ್ನು ಡೆಂಘಿಯಿಂದ ಸೂಕ್ತ ಚಿಕಿತ್ಸೆ ಪಡೆಯಲು ಈಗಾಗಲೇ ಜಿಲ್ಲಾಧಿಕಾರಿ ಶಿಲ್ಪಾನಾಗ್ ಸೂಚಿಸಿದ್ದು. ವೈರಲ್ ಫೀವರ್ ರೋಗಿಗಳಿಗಾಗಿಯೇ ವಿಶೇಷ ವಾರ್ಡ್​ಗಳನ್ನ ಆಸ್ಪತ್ರೆಗಳಲ್ಲಿ ಮೀಸಲಿಡಲಾಗಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ