ದೇವರೆ ‘ಮೂರ್ತಿ’ ಬಿಟ್ಟು ನನ್ನ ಕುತ್ತಿಗೆಗೆ ಬೇರೆ ಯಾರೂ ತಾಳಿ ಕಟ್ಟಬಾರಾದು, ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ವಿಚಿತ್ರ ಹರಕೆ ಪತ್ರ

| Updated By: ರಮೇಶ್ ಬಿ. ಜವಳಗೇರಾ

Updated on: Dec 30, 2022 | 2:46 PM

ದೇವರೇ ನನ್ನ ಮೂರ್ತಿ ಬಿಟ್ಟು ನನ್ನ ಕುತ್ತಿಗೆಗೆ ಬೇರೆ ಯಾರೂ ತಾಳಿ ಕಟ್ಟಬಾರಾದು ಎಂದು ಪ್ರೇಮಿಯೊಬ್ಬಳು ದೇವರಿಕೆ ಹರಕೆ ಕಟ್ಟಿಕೊಂಡು ಹುಂಡಿಗೆ ಚೀಟಿಯನ್ನು ಹಾಕಿರುವುದು ಬೆಳಕಿಗೆ ಬಂದಿದೆ.

ದೇವರೆ ಮೂರ್ತಿ ಬಿಟ್ಟು ನನ್ನ ಕುತ್ತಿಗೆಗೆ ಬೇರೆ ಯಾರೂ ತಾಳಿ ಕಟ್ಟಬಾರಾದು, ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ವಿಚಿತ್ರ ಹರಕೆ ಪತ್ರ
ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಸಿಕ್ಕ ಚೀಟಿ
Follow us on

ಚಾಮರಾಜನಗರ: ಭಕ್ತರು ಇತ್ತೀಚಿಗೆ ದೇವರ ಕಾಣಿಕೆ ಹುಂಡಿಗಳಲ್ಲಿ (Temple Hundi)   ಚಿತ್ರ ವಿಚಿತ್ರವಾದ ಬೇಡಿಕೆಗಳನ್ನು ಹೊತ್ತ ಕಾಗದದ ಪತ್ರಗಳನ್ನು ಹಾಕಿ ಮನವಿ ಮಾಡಿಕೊಳ್ಳುವುದು ಸಮಾನ್ಯವಾಗಿದೆ. ಈ ನಡುವೆ ಚಾಮರಾಜನಗರ( Chamarajanagar) ಜಿಲ್ಲೆಯಲ್ಲಿ ಭಕ್ತರೊಬ್ಬರು ಕಾಣಿಕೆ ಹುಂಡಿಯಲ್ಲಿ ಹಾಕಿರುವ ಬೇಡಿಕೆ ಪತ್ರ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ದೇವರೆ ನನಗೆ ಹೆಣ್ಣನ್ನು ಕರುಣಿಸು ಎಂದು ಬರೆದಿದ್ದ ಪತ್ರ ಮೊನ್ನೆ ಚಾಮರಾಜನಗರದ ಚಾಮರಾಜೇಶ್ವರನ ಹುಂಡಿಯಲ್ಲಿ ಸಿಕ್ಕಿತ್ತು. ಇದೀಗ ದೇವರೇ ನನ್ನ ಮೂರ್ತಿ ಬಿಟ್ಟು ನನ್ನ ಕುತ್ತಿಗೆಗೆ ಬೇರೆ ಯಾರೂ ತಾಳಿ ಕಟ್ಟಬಾರಾದು ಎಂದು ಪ್ರೇಮಿಯೊಬ್ಬಳು ದೇವರಿಕೆ ಹರಕೆ ಕಟ್ಟಿಕೊಂಡು ಹುಂಡಿಗೆ ಚೀಟಿಯನ್ನು ಹಾಕಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಶಿವನೇ ನನಗೆ ಹುಡುಗಿ ಕರುಣಿಸು… ದೇವರಿಗೆ ಪತ್ರ ಬರೆದು ಹುಂಡಿಗೆ ಹಾಕಿರುವ ಭೂಪ

ಚಾಮರಾಜನಗರ ತಾಲೂಕಿನ ಮುಕ್ಕಡಹಳ್ಳಿ ಮಾಯಮ್ಮದೇವಮ್ಮ ದೇವಸ್ಥಾನದ ಹುಂಡಿಲ್ಲಿ ಮತ್ತೊಂದು ರೀತಿಯ ಪತ್ರ ಸಿಕ್ಕಿದ್ದು, ನನ್ನ “ಮೂರ್ತಿ” ಬಿಟ್ಟು ನನ್ನ ಕುತ್ತಿಗೆಗೆ ಬೇರೆ ಯಾರೂ ತಾಳಿ ಕಟ್ಟಬಾರಾದು ಎಂದು ಎಂದು ಚೀಟಿ ಬರೆದು ಕಾಣಿಕೆ ಹುಂಡಿಗೆ ಹಾಕಿದ್ದಾರೆ.

ಹುಡುಗಿ ಕರುಣಿಸು ಎಂದು ದೇವರಿಗೆ ಪತ್ರ ಬರೆದಿದ್ದ ಭೂಪ

ಚಾಮರಾಜೇಶ್ವರ ದೇವಾಲಯದ ಹುಂಡಿ ಎಣಿಕೆ ಕಾರ್ಯ ನಡೆಸುವಾಗ ಹಣದ ಜೊತೆ ಎರಡು ಪತ್ರಗಳು ಪತ್ತೆಯಾಗಿದ್ದವು. ರಾಜೇಂದ್ರ ಉಪ್ಪಾರ ಬೀದಿ ಎಂದು ಬರೆದಿರುವ ಪತ್ರದಲ್ಲಿ ದೇವರೇ ನನಗೆ ಹುಡುಗಿಯನ್ನು ಕರುಣಿಸು ಎಂದು ಬರೆಯಲಾಗಿದೆ. ಅಷ್ಟೇ ಅಲ್ಲದೆ, ದೇವರ ರಾಜ್ಯವು ಸಮೀಪಿಸಿದೆ ಎಂಬ ಒಕ್ಕಣೆಯುಳ್ಳ ಮತ್ತೊಂದು ಪತ್ರವೂ ಪತ್ತೆಯಾಗಿದೆ. ಮನುಷ್ಯ ದೇವರಿಗೆ ಅವಿಧೇಯನಾಗಿ ನಡೆದುಕೊಂಡು ದೇವರ ಪ್ರೀತಿ ಕಳೆದುಕೊಂಡ ಎಂದು ಬರೆದ ಪತ್ರ ಹುಂಡಿಯಲ್ಲಿ ಪತ್ತೆಯಾಗಿತ್ತು.

ಮಗ ರಾತ್ರಿ ಹೊತ್ತು ನಿದ್ದೆ ಮಾಡುವಂತೆ ಮಾಡಪ್ಪ

ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿರುವ ಕಳಸೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪರಿವಾರ ದೇವರುಗಳ ಕಾಣಿಕೆ ಹುಂಡಿ ಎಣಿಕೆ ಕಾರ್ಯ ವೇಳೆ ಮಗನ ಇಡೀ ಬದುಕನ್ನೇ ಬದಲಿಸಪ್ಪಾ ಎಂದು ಪತ್ರ ಬರೆದು ಕಾಣಿಕೆ ಹುಂಡಿಗೆ ಹಾಕಿರುವ ಪತ್ರ ವೈರಲ್‌ ಆಗಿತ್ತು,

ಲಕ್ಷ್ಮಣ, ಅಶ್ವಿನಿ ನಕ್ಷತ್ರ ಮೇಷ ರಾಶಿ ಈತನಿಗೆ ಬೇಗ ಕೆಲಸ ಸಿಗುವಂತೆ ಮಾಡು ತಂದೆ, ಆತನ ನೆಚ್ಚಿನ ಕೆಲಸ ಸಿಗಲಿ, ಮತ್ತು ಆತನ ಕುಡಿತದ ಚಟ ಬಿಡಿಸು, ಅದರ ಮೇಲೆ ಮನಸ್ಸು ಬರದಂತೆ ಮಾಡು ತಂದೆ. ಕೋಪ ಹೋಗಲಾಡಿಸು, ಚಂಚಲ ಸ್ವಭಾವ ಹೋಗಲಾಡಿಸು. ರಾತ್ರಿ ಹೊತ್ತು ನಿದ್ದೆ ಬರುವಂತೆ ಮಾಡು, ಭಯ ನಿವಾರಣೆ ಮಾಡಪ್ಪ, ಅವನ ಮನಸ್ಸಿಗೆ ಸುಖ, ಶಾಂತಿ ನೆಮ್ಮದಿ ನೀಡಪ್ಪ. ಸಂಸಾರದಲ್ಲಿ ಜವಾಬ್ದಾರಿ ಕೊಡಪ್ಪ, ಹೆಂಡತಿ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಮಾಡು,ಹೀಗೆ ತನ್ನ ಕೌಟಂಬಿಕ ಸಮಸ್ಯೆಗಳನ್ನು ಬರೆದು ಹುಂಡಿಗೆ ಹಾಕಿ ಭಕ್ತರೊಬ್ಬರು ದೇವರಿಗೆ ಮನವಿ ಸಲ್ಲಿಸಿದ್ದರು.

ಮೊದಲೆಲ್ಲ ತಮ್ಮ ಇಷ್ಟಾರ್ಥಗಳನ್ನು ಕರುಣಿಸು ಎಂದು ದೇವರಿಗೆ ಕಾಣಿಕೆ ಹಾಕುವುದನ್ನು ನೋಡಿದ್ದೇವೆ. ತೀರ ಅಪರೂಪವೆಂಬಂತೆ ಇತ್ತೀಚೆಗೆ ಕಾಣಿಕೆ ಹಾಕುವ ಹುಂಡಿಯಲ್ಲಿ ಕೆಲವೊಂದು ವಿಚಿತ್ರ ಪತ್ರಗಳನ್ನು ದೇವರ ಹುಂಡಿಯಲ್ಲಿ ಪತ್ತೆಯಾಗುತ್ತಿರುವುದು ವಿಪರ್ಯಾಸ.

ಇನ್ನಷ್ಟು ಚಾಮರಾಜನಗರ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 2:44 pm, Fri, 30 December 22