BR Hills Bitter Honey: ಸಿಹಿ ಜೇನು ಅಷ್ಟೇ ಅಲ್ಲ; ಗಡಿ ಜಿಲ್ಲೆಯ ಆ ದಟ್ಟ ‘ಅಡವಿ’ಯಲ್ಲಿ ಕಹಿ ಜೇನು ಕೂಡ ಇದೆ, ರುಚಿ ನೋಡಿ ಕಹಿ ಜೇನು ಸಂಗ್ರಹಿಸುತ್ತಾರೆ!

| Updated By: ಸಾಧು ಶ್ರೀನಾಥ್​

Updated on: Jun 14, 2023 | 6:37 PM

ಎಲ್ಲರಿಗೂ ಸಿಹಿ ಜೇನಷ್ಟೇ ಗೊತ್ತು. ಆದ್ರೆ ಗಡಿ ಜಿಲ್ಲೆಯ ಆ ದಟ್ಟ ಅರಣ್ಯದೊಳಗೆ ಕಹಿ ಜೇನು ಕೂಡ ಇದೆ. ಈ ಜೇನಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದ್ದು ಜಿಲ್ಲೆಯಲ್ಲಿ ಕಹಿ ಜೇನುತುಪ್ಪಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಜೊತೆಗೆ ಗಿರಿಜನರು ಸಂಗ್ರಹಿಸುತ್ತಿರುವ ಜೇನು ತುಪ್ಪಕ್ಕೆ ಇನ್ನಿಲ್ಲದ ಬೇಡಿಕೆ ಇದೆಯಂತೆ. ಅದೆಲ್ಲಿ ಆ ಜೇನುತುಪ್ಪ ಸಿಗೋದು ಅಂತೀರಾ (Soliga honey - straight from the forests into sachets), ಈ ಸ್ಟೋರಿ ನೋಡಿ.

1 / 9

2 / 9
ಜೇನು ಅಂದ್ರೆ ಸಹಜವಾಗಿಯೇ ಅದು ಸಿಹಿಯಾಗಿರುತ್ತೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದ್ರೆ ಜೇನು ಸಿಹಿ ಅಷ್ಟೇ ಅಲ್ಲ; ಕಹಿಯಾಗಿಯೂ ಇರುತ್ತೆ ಅಂತಾರೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿ ಬಿಳಿಗಿರಿರಂಗನ ಬೆಟ್ಟದ ಗಿರಿಜನರು. ಹೌದು ಬಿಳಿಗಿರಿ ರಂಗನಾಥಸ್ವಾಮಿ ದಟ್ಟ ಅರಣ್ಯದೊಳಗಿರುವ ಬೇವು, ನೇರಳೆ, ಬೀಟೆ, ತಾರೆ ಹೂವಿನ ಮಕರಂದ ಹೀರಿ ಜೇನುನೊಣಗಳು ಉತ್ಪಾದನೆ ಮಾಡುವ ಜೇನುತುಪ್ಪ ಕಹಿಯಾಗಿರುತ್ತದೆ (BR Hills Bitter Honey).

3 / 9
ಕಾಡಿಗೆ ಜೇನು ಸಂಗ್ರಹಿಸಲು ಹೋಗುವ ಗಿರಿಜನರು ರುಚಿ ನೋಡಿ ಕಹಿ ಜೇನನ್ನು ಪ್ರತ್ಯೇಕವಾಗಿ ಸಂಗ್ರಹಿಸುತ್ತಾರೆ. ಹೀಗೆ ಸಂಗ್ರಹಿಸಿದ ಕಹಿ ಜೇನನ್ನು  ಬಿಳಿಗಿರಿರಂಗನ ನಾಥಸ್ವಾಮಿ ಸೋಲಿಗರ  ಸಂಸ್ಕರಣಾ ಸಂಘದಲ್ಲಿ ಸಂಸ್ಕರಿಸಿ, ಅಡವಿ ಬ್ರಾಂಡ್ ಅಡಿಯಲ್ಲಿ ಮಾರಾಟ ಮಾಡ್ತಿದ್ದಾರೆ.

4 / 9
ಇದರಿಂದ ಸೋಲಿಗರ ಆರ್ಥಿಕ ಸ್ಥಿತಿಯೂ ಕೂಡ ಸುಧಾರಣೆ ಆಗ್ತಿದೆ. ಇನ್ನು ಇಲ್ಲಿ ಸಂಸ್ಕರಿಸುವ ಕಹಿ ಜೀನು ಹಾಗೂ ಸಿಹಿ ಜೇನಿಗೆ ಕರ್ನಾಟಕ ಹಾಗೂ ಕೇರಳ ತಮಿಳುನಾಡು ಸೇರಿದಂತೆ ಹೆಚ್ಚಿನ ಕಡೆಗಳಲ್ಲಿ ಬೇಡಿಕೆ ಇದೆಯಂತೆ. ಸಂಗ್ರಹಿಸಿದ ಅಷ್ಟೂ ಜೇನು ಮಾರಾಟವಾಗುತ್ತಿದೆಯಂತೆ.

5 / 9
BR Hills Bitter Honey: ಸಿಹಿ ಜೇನು ಅಷ್ಟೇ ಅಲ್ಲ; ಗಡಿ ಜಿಲ್ಲೆಯ ಆ ದಟ್ಟ ‘ಅಡವಿ’ಯಲ್ಲಿ ಕಹಿ ಜೇನು ಕೂಡ ಇದೆ, ರುಚಿ ನೋಡಿ ಕಹಿ ಜೇನು ಸಂಗ್ರಹಿಸುತ್ತಾರೆ!

6 / 9
ಇಷ್ಟು ದಿನ ಕಾಡಿನಲ್ಲಿ ಸಂಗ್ರಹಿಸುತ್ತಿದ ಎಲ್ಲಾ ಜೇನನ್ನು ಒಟ್ಟಿಗೆ ಸಂಸ್ಕರಣೆ ಮಾಡಲಾಗುತ್ತಿತ್ತು. ಇದೀಗ ಕಹಿ ಜೇನನ್ನೇ ಪ್ರತ್ಯೇಕ ಸಂಗ್ರಹಿಸಿ ಸಂಸ್ಕರಣೆ ಮಾಡಲಾಗುತ್ತಿದೆ. ಕಹಿ ಜೇನು ಹೆಚ್ಚು ಔಷದೀಯ ಗುಣವುಳ್ಳದ್ದಾಗಿದೆ. ಇದರಿಂದ ಬೇಡಿಕೆಯೂ ಹಚ್ಚಿದೆ.

7 / 9
ಅಲ್ಲದೆ ಬಿಳಿಗಿರಿ ರಂಗನಾಥಸ್ವಾಮಿ ಸ್ವಾಮಿ ಅರಣ್ಯದಲ್ಲಿ ಸಿಗುವ ಜೇನುತುಪ್ಪದಲ್ಲಿ ಆಯುರ್ವೇದಿಕ್ ಔಷಧಿಗಳ ಗುಣಗಳಿವೆ. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತೆ. ಅದರಿಂದ ನಾವು ನಿರಂತರವಾಗಿ ಉಪಯೋಗಿಸುತ್ತೇವೆ. ಮಕ್ಕಳಿಗೆ ಸಣ್ಣ ಪುಟ್ಟ ಕೆಮ್ಮು ನೆಗಡಿಗಳಂತಹ ಲಕ್ಷಣಗಳು ಕಂಡು ಬಂದರೆ ಈ ಜೇನು ಅದಕ್ಕೆ ಒಳ್ಳೆಯದು. ಜತೆಗೆ ಮಧುಮೇಹಿಗಳಿಗೆ ಇದು ಹೇಳಿ ಮಾಡಿಸಿದಂತಿದೆ ಎನ್ನುತ್ತಾರೆ ಜನ.

8 / 9
ಆಯುರ್ವೇದದಲ್ಲಿ ಜೇನು ತುಪ್ಪಕ್ಕೆ ಹೆಚ್ಚಿನ ಮಹತ್ವವಿತ್ತು.  ಇದೀಗ ಕಹಿ ಜೇನಿನಲ್ಲಿ ಹೆಚ್ಚು ಔಷಧೀಯ ಗುಣಗಳಿದ್ದು ಬೇಡಿಕೆ ಹೆಚ್ಚಿದೆ. ಇದೇ ಮಾದರಿಯಲ್ಲಿ ಮತ್ತಷ್ಟು ಅರಣ್ಯ ಪ್ರದೇಶಗಳಲ್ಲಿ ಜೇನು ಸಂಗ್ರಹಿಸಿದ್ರೆ ಆರೋಗ್ಯಕ್ಕೂ ಅನುಕೂಲವಾಗಲಿದೆ.

9 / 9