ಹಣ ಪಡೆದು ಮಹಿಳೆಯರಿಗೆ ಶೂನ್ಯ ಬೆಲೆಯ ಉಚಿತ ಟಿಕೆಟ್​ ನೀಡಿದ KSRTC ನಿರ್ವಾಹಕ

ಕರ್ನಾಟಕದಲ್ಲಿ ಶಕ್ತಿ ಯೋಜನೆ ಜಾರಿಯಾಗಿ ವರ್ಷ ಕಳೆದಿದೆ. ಚಾಮರಾಜನಗರದ ಕೆಎಸ್​ಆರ್​ಟಿಸಿ ಬಸ್​ ನಿರ್ವಾಹಕ ಮಹಿಳೆಯರಿಂದ ಹಣ ಪಡೆದು, ಉಚಿತ ಟಿಕೆಟ್​ ನೀಡುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ವಿದ್ಯಾರ್ಥಿಗಳು ಚಾಮರಾಜನಗರ ಸಂಚಾರಿ ನಿಯಂತ್ರಕರಿಗೆ ದೂರು ಕೊಟ್ಟಿದ್ದಾರೆ.

ಹಣ ಪಡೆದು ಮಹಿಳೆಯರಿಗೆ ಶೂನ್ಯ ಬೆಲೆಯ ಉಚಿತ ಟಿಕೆಟ್​ ನೀಡಿದ KSRTC ನಿರ್ವಾಹಕ
ದೂರು ನೀಡಿದ ವಿದ್ಯಾರ್ಥಿ
Follow us
| Updated By: ವಿವೇಕ ಬಿರಾದಾರ

Updated on: Oct 27, 2024 | 12:58 PM

ಚಾಮರಾಜನಗರ, ಅಕ್ಟೋಬರ್​ 27: ಕರ್ನಾಟಕದಲ್ಲಿ ಶಕ್ತಿ ಯೋಜನೆ (Shakti Scheme) ಜಾರಿಯಾಗಿ ವರ್ಷ ಕಳೆದಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬಸ್​​ಗಳಲ್ಲಿ ಮಹಿಳೆಯರು ಉಚಿತವಾಗಿ ಸಂಚರಿಸುತ್ತಿದ್ದಾರೆ. ಬಸ್​ನಲ್ಲಿ ಮಹಿಳೆಯರಿಗೆ ಉಚಿತವಾಗಿ ಟಿಕೆಟ್​ ನೀಡುತ್ತಾರೆ. ಆದರೆ, ಚಾಮರಾಜನಗರದ ಕೆಎಸ್​ಆರ್​ಟಿಸಿ ಬಸ್​ ನಿರ್ವಾಹಕ ಮಹಿಳೆಯರಿಂದ ಹಣ ಪಡೆದು, ಉಚಿತ ಟಿಕೆಟ್​ ನೀಡುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ವಿದ್ಯಾರ್ಥಿಗಳು ಚಾಮರಾಜನಗರ ಸಂಚಾರಿ ನಿಯಂತ್ರಕರಿಗೆ ದೂರು ಕೊಟ್ಟಿದ್ದಾರೆ.

ಕೆಎಸ್ಆರ್​ಟಿಸಿ ಬಸ್​​ವೊಂದು ಶನಿವಾರ ಬೇಡರಪುರದಿಂದ ಚಾಮರಾಜನಗರಕ್ಕೆ ಹೊರಟಿತ್ತು. ಬಸ್​ ನಿರ್ವಾಹಕ ಮಹಿಳೆಯರಿಂದ ಹಣ ಪಡೆದು, ಶೂನ್ಯ ಬೆಲೆಯ ಉಚಿತ ಟಿಕೆಟ್ ನೀಡಿದ್ದಾನೆ. ಇದೇ ಬಸ್​ನಲ್ಲಿ ಸಂಚರಿಸುತ್ತಿದ್ದ ಕೆಲ ಇಂಜಿನಿಯರಿಂಗ್​ ವಿದ್ಯಾರ್ಥಿಗಳು ಈ ವಿಚಾರವಾಗಿ ನಿರ್ವಾಹಕನನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ನಿರ್ವಾಹಕ ಸಮರ್ಥನೆ ನೀಡಿದ್ದಾನೆ.

ಇದನ್ನೂ ಓದಿ: ಮಾದಪ್ಪನ ಭಕ್ತರಿಗೆ ಅರಣ್ಯ ಇಲಾಖೆ ಗುಡ್ ನ್ಯೂಸ್: ನಾಗಮಲೆ ಚಾರಣ ನಿಷೇಧ ತೆರವು

ಆದರೆ, ನಿರ್ವಾಹಕನ ನಡೆ ಖಂಡಿಸಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಚಾಮರಾಜನಗರ ಸಂಚಾರಿ ನಿಯಂತ್ರಕರಿಗೆ ದೂರು ನೀಡಿದ್ದಾನೆ. ನಿರ್ವಾಹಕನ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ. ಉಚಿತ ಟಿಕೆಟ್​ ಹೆಸರಿನಲ್ಲಿ ನಿರ್ವಾಹಕ ಹಣ ಹೊಡೆಯುತ್ತಿದ್ದಾನೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಡ್ರಮ್​ನಲ್ಲಿ ರಾಕೆಟ್ ಇಟ್ಟು ಪಟಾಕಿ ಸಿಡಿಸಿದ ಐಐಟಿ ವಿದ್ಯಾರ್ಥಿಗಳು
ಡ್ರಮ್​ನಲ್ಲಿ ರಾಕೆಟ್ ಇಟ್ಟು ಪಟಾಕಿ ಸಿಡಿಸಿದ ಐಐಟಿ ವಿದ್ಯಾರ್ಥಿಗಳು
ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಪಟಾಕಿ ಹೊಡೆಯುತ್ತಿದ್ದ ವ್ಯಕ್ತಿ ಸಾವು
ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಪಟಾಕಿ ಹೊಡೆಯುತ್ತಿದ್ದ ವ್ಯಕ್ತಿ ಸಾವು
ಚುನಾವಣೆಗೆ ಸಜ್ಜಾದ ಜಾರ್ಖಂಡ್​ನಲ್ಲಿ ಪ್ರಧಾನಿ ಮೋದಿ ಮೊದಲ ರ್ಯಾಲಿ
ಚುನಾವಣೆಗೆ ಸಜ್ಜಾದ ಜಾರ್ಖಂಡ್​ನಲ್ಲಿ ಪ್ರಧಾನಿ ಮೋದಿ ಮೊದಲ ರ್ಯಾಲಿ
ಲೋಕಾಯುಕ್ತ ನೋಟೀಸ್​​ನಿಂದ ಸಿಎಂ ಸಿದ್ದರಾಮಯ್ಯ ವಿಚಲಿತರಾದಂತೆ ಕಾಣುತ್ತಿದೆ!
ಲೋಕಾಯುಕ್ತ ನೋಟೀಸ್​​ನಿಂದ ಸಿಎಂ ಸಿದ್ದರಾಮಯ್ಯ ವಿಚಲಿತರಾದಂತೆ ಕಾಣುತ್ತಿದೆ!
ಜನರ ಕಷ್ಟ ಗೊತ್ತಿರುವ ಯೋಗೇಶ್ವರ್ ಚನ್ನಪಟ್ಟಣಕ್ಕೆ ರೆಡಿಮೇಡ್ ಗಂಡು: ಡಿಕೆಶಿ
ಜನರ ಕಷ್ಟ ಗೊತ್ತಿರುವ ಯೋಗೇಶ್ವರ್ ಚನ್ನಪಟ್ಟಣಕ್ಕೆ ರೆಡಿಮೇಡ್ ಗಂಡು: ಡಿಕೆಶಿ
ಆಗ್ರಾ ಬಳಿ ಮಿಗ್-29 ಫೈಟರ್ ಜೆಟ್ ಪತನ; ಪೈಲಟ್‌ಗಳು ಪಾರು
ಆಗ್ರಾ ಬಳಿ ಮಿಗ್-29 ಫೈಟರ್ ಜೆಟ್ ಪತನ; ಪೈಲಟ್‌ಗಳು ಪಾರು
ಆರತಿ ತಟ್ಟೆಗೆ ಹಾಕಲು ಮುಖಂಡನೊಬ್ಬ ಹಣ ನೀಡಿದರೂ ತೆಗೆದುಕೊಳ್ಳದ ನಿಖಿಲ್
ಆರತಿ ತಟ್ಟೆಗೆ ಹಾಕಲು ಮುಖಂಡನೊಬ್ಬ ಹಣ ನೀಡಿದರೂ ತೆಗೆದುಕೊಳ್ಳದ ನಿಖಿಲ್
ಹಾಸ್ಯದ ಪೆಟ್ಟೇ ದುಬಾರಿ ಆಯ್ತು; ಚೈತ್ರಾ-ಅನುಷಾ ಮಧ್ಯೆ ಘನಘೋರ ಫೈಟ್
ಹಾಸ್ಯದ ಪೆಟ್ಟೇ ದುಬಾರಿ ಆಯ್ತು; ಚೈತ್ರಾ-ಅನುಷಾ ಮಧ್ಯೆ ಘನಘೋರ ಫೈಟ್
ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದಾಗ ಒಂದು ಗುಂಪು ಅದ್ಯಾಕೆ ಗಲಾಟೆ ಮಾಡಿತೋ!
ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದಾಗ ಒಂದು ಗುಂಪು ಅದ್ಯಾಕೆ ಗಲಾಟೆ ಮಾಡಿತೋ!
ಟೀಂ ಇಂಡಿಯಾದ ಜಿಕೆ ಟೆಸ್ಟ್! ಯಾರು ಎಷ್ಟು ಬುದ್ಧಿವಂತರು ನೀವೇ ನೋಡಿ
ಟೀಂ ಇಂಡಿಯಾದ ಜಿಕೆ ಟೆಸ್ಟ್! ಯಾರು ಎಷ್ಟು ಬುದ್ಧಿವಂತರು ನೀವೇ ನೋಡಿ