Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಮರಾಜನಗರ: 1800ಕ್ಕೂ ಹೆಚ್ಚು ಬುಡಕಟ್ಟು ಕುಟುಂಬಗಳಿಗೆ ಶೀಘ್ರದಲ್ಲೇ ವಿದ್ಯುತ್ ಸಂಪರ್ಕ

ಚಾಮರಾಜನಗರ ಜಿಲ್ಲೆಯ ಕಾಡಂಚಿನ 1800ಕ್ಕೂ ಹೆಚ್ಚು ಬುಡಕಟ್ಟು ಕುಟುಂಬಗಳು ಶೀಘ್ರದಲ್ಲೇ ಶಾಶ್ವತ ವಿದ್ಯುತ್ ಸಂಪರ್ಕ ಹೊಂದಲಿವೆ. ಭೂಗತ ವಿದ್ಯುತ್​ ಕೇಬಲ್​ ಅಳವಡಿಕೆ ಕಾಮಗಾರಿ 15 ದಿನಗಳಲ್ಲಿ ಆರಂಭವಾಗಲಿದ್ದು, ನಾಲ್ಕು ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಶಾಶ್ವತ ವಿದ್ಯುತ್ ಸಂಪರ್ಕದಿಂದ ಆದಿವಾಸಿಗಳ ಜೀವನಮಟ್ಟ ಸುಧಾರಿಸಲಿದೆ.

ಚಾಮರಾಜನಗರ: 1800ಕ್ಕೂ ಹೆಚ್ಚು ಬುಡಕಟ್ಟು ಕುಟುಂಬಗಳಿಗೆ ಶೀಘ್ರದಲ್ಲೇ ವಿದ್ಯುತ್ ಸಂಪರ್ಕ
ಸಾಂದರ್ಭಿಕ ಚಿತ್ರ
Follow us
ವಿವೇಕ ಬಿರಾದಾರ
|

Updated on: Oct 28, 2024 | 8:59 AM

ಚಾಮರಾಜನಗರ, ಅಕ್ಟೋಬರ್​ 28: ಚಾಮರಾಜನಗರ (Chamrajnagar) ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ವಾಸವಾಗಿರುವ 1,800ಕ್ಕೂ ಹೆಚ್ಚು ಬುಡಕಟ್ಟು ಕುಟುಂಬಗಳು ಶೀಘ್ರದಲ್ಲೇ ಶಾಶ್ವತ​ ವಿದ್ಯುತ್ ಸಂಪರ್ಕ​​ ಹೊಂದಲಿವೆ. ಈ ಕುಟುಂಬಗಳಿಗೆ ವಿದ್ಯುತ್​ ಸಂಪರ್ಕ ಕಲ್ಪಿಸಲು 42 ಕೋಟಿ ರೂ. ವೆಚ್ಚದಲ್ಲಿ ಭೂಗತ (ಯುಜಿ) ಕೇಬಲ್​ ಅಳವಡಿಕೆ ಕಾಮಗಾರಿ ಆರಂಭವಾಗಲಿದೆ.

ಜಿಲ್ಲಾಡಳಿತ ಮತ್ತು ಸೆಸ್ಕ್​ನಿಂದ 15 ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದ್ದು, ನಾಲ್ಕು ತಿಂಗಳೊಳಗೆ ಪೂರ್ಣಗೊಳ್ಳಲಿದೆ. ಅಂದುಕೊಂಡಂತೆ ಕಾಮಗಾರಿ ಪೂರ್ಣಗೊಂಡರೆ ಮೊದಲ ಬಾರಿಗೆ ಆದಿವಾಸಿಗಳ ಹಾಡಿಗೆ ವಿದ್ಯುತ್ ಸಂಪರ್ಕ ದೊರೆತಂತಾಗುತ್ತದೆ. ವಿದ್ಯುತ್​ ಕಂಬಗಳ ಮೂಲಕ ಹಾಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಜಿಲ್ಲಾಡಳಿತದ ಪ್ರಸ್ತಾವಕ್ಕೆ ಅರಣ್ಯ ಇಲಾಖೆ ತಡೆಯೊಡ್ಡಿದೆ.

ಕಾಡಿನೊಳಗೆ ವಿದ್ಯುತ್ ಕಂಬಗಳು ಬಂದರೆ ವಿದ್ಯುತ್​ ಅವಘಡ ಸಂಭವಿಸುವ ಸಾಧ್ಯತೆ ಇರುತ್ತದೆ. ಇದರಿಂದ ಪ್ರಾಣಿಗಳು ಮತ್ತು ಅರಣ್ಯಕ್ಕೆ ಹಾನಿಯಾಗಬಹುದು ಎಂದು ಪ್ರಸ್ತಾವ ತಿರಸ್ಕರಿಸಾಗಿದೆ. ಈ ಕಾರಣದಿಂದ ಜಿಲ್ಲಾಡಳಿತ ಮತ್ತು ಸೆಸ್ಕ್​ ಯುಜಿ ಕೇಬಲ್​ ಅಳವಡಿಸಲು ನಿರ್ಧರಿಸಿದೆ.

ಈ ಹಿಂದೆ ಸೋಲಾರ್ ಉಪಕರಣಗಳ ಮೂಲಕ ವಿದ್ಯುತ್​​ ಸಂಪರ್ಕ ನೀಡುವ ಪ್ರಯತ್ನಗಳು ನಡೆದಿದ್ದವು. ಆದರೆ ಅವು ನಿರ್ವಹಣೆಯು ಕೊರತೆಯಿಂದ ಯಶಸ್ಸು ದೊರೆಯಲಿಲ್ಲ. ಇದೀಗ, ಯುಜಿ ಕೇಬಲ್​ ಅಳವಡಿಕೆಯಿಂದ ವಿದ್ಯುತ್​ ಸಂಪರ್ಕ ದೊರೆತರೆ ಆದಿವಾಸಿಗಳ ಜೀವನಮಟ್ಟ ಸುಧಾರಿಸಲಿದೆ ಎಂದು​ ಚಾಮರಾಜನಗರದ ಉಪ ಆಯುಕ್ತೆ ಶಿಲ್ಪಾ ನಾಗ್ ಹೇಳಿದರು.

ಇದನ್ನೂ ಓದಿ: ಪ್ರಥಮ ಬಾರಿಗೆ ಚಾಮರಾಜನಗರಕ್ಕೆ ರಸಗೊಬ್ಬರ ಹೊತ್ತು ತಂದ ಗೂಡ್ಸ್ ರೈಲಿಗೆ ಪೂಜೆ

ಜಿಲ್ಲಾಡಳಿತ ಮತ್ತು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಮೈಸೂರು (CESC) ಅನುಷ್ಠಾನಕ್ಕೆ ಮುಂದಾಗಿದ್ದು, ಅರಣ್ಯ ಇಲಾಖೆಯಿಂದ ಅನುಮತಿ ಕೋರಿ ಆರು ತಿಂಗಳ ಹಿಂದೆಯೇ ಯೋಜನೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು.

ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ಕಾಮಗಾರಿ ಚುರುಕುಗೊಂಡಿದ್ದು, ಮುಂದಿನ 15 ದಿನಗಳಲ್ಲಿ ಕೇಬಲ್ ಅಳವಡಿಕೆ ಕಾರ್ಯ ಆರಂಭಗೊಂಡು ನಾಲ್ಕು ತಿಂಗಳೊಳಗೆ ಪೂರ್ಣಗೊಳ್ಳಲಿದೆ ಎಂದು ಶಿಲ್ಪಾ ತಿಳಿಸಿದರು.

ಸೆಸ್ಕ್​​ ವ್ಯವಸ್ಥಾಪಕ ನಿರ್ದೇಶಕಿ ಜಿ ಶೀಲಾ ಮಾತನಾಡಿ, ಕಂಬಗಳ ಮೂಲಕ ಕೇಬಲ್ ಅಳವಡಿಕೆಗೆ ಅರಣ್ಯ ಇಲಾಖೆ ಅನುಮೋದನೆ ನೀಡಿಲ್ಲ. ಆದ್ದರಿಂದ ವಿದ್ಯುತ್ ಅಪಘಾತಗಳನ್ನು ತಡೆಯಲು ಭೂಗತ ಕೇಬಲ್‌ ಏಕೈಕ ಮಾರ್ಗವಾಗಿದೆ. ಇತ್ತೀಚೆಗೆ, ನಾನು ವಿದ್ಯುತ್ ಸಚಿವಾಲಯದ ಕಾರ್ಯದರ್ಶಿಯನ್ನು ಭೇಟಿ ಮಾಡಿದ್ದೇನೆ, ಅವರು ಈ ಯೋಜನೆಗೆ ಹಣ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಪುನೀತ್ ರಾಜ್​ಕುಮಾರ್ ಬಗ್ಗೆ ಅರ್ಧಗಂಟೆ ಮಾತನಾಡಿದ ರಶ್ಮಿಕಾ ಮಂದಣ್ಣ
ಪುನೀತ್ ರಾಜ್​ಕುಮಾರ್ ಬಗ್ಗೆ ಅರ್ಧಗಂಟೆ ಮಾತನಾಡಿದ ರಶ್ಮಿಕಾ ಮಂದಣ್ಣ
ಪತಿಯೊಂದಿಗೆ ಜಗಳವಾಡಿ ವಿದ್ಯುತ್ ಟವರ್ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಪತ್ನಿ
ಪತಿಯೊಂದಿಗೆ ಜಗಳವಾಡಿ ವಿದ್ಯುತ್ ಟವರ್ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಪತ್ನಿ
ಶಿವಪುರಿಯ ಮಾತಟಿಲಾ ಡ್ಯಾಂನಲ್ಲಿ ಮುಳುಗಿದ ದೋಣಿ; 7 ಜನ ಸಾವನ್ನಪ್ಪಿರುವ ಶಂಕೆ
ಶಿವಪುರಿಯ ಮಾತಟಿಲಾ ಡ್ಯಾಂನಲ್ಲಿ ಮುಳುಗಿದ ದೋಣಿ; 7 ಜನ ಸಾವನ್ನಪ್ಪಿರುವ ಶಂಕೆ
ಚಂದನ್ ಶೆಟ್ಟಿ ಜೊತೆ ಮದುವೆ ಗಾಸಿಪ್, ಸ್ಪಷ್ಟನೆ ಕೊಟ್ಟ ಸಂಜನಾ
ಚಂದನ್ ಶೆಟ್ಟಿ ಜೊತೆ ಮದುವೆ ಗಾಸಿಪ್, ಸ್ಪಷ್ಟನೆ ಕೊಟ್ಟ ಸಂಜನಾ
ಕುಮಾರಸ್ವಾಮಿ ನನ್ನನ್ನು ಬಯ್ಯದೆ ಬೇರೆ ಯಾರನ್ನು ಬಯ್ಯಲು ಸಾಧ್ಯ? ಶಿವಕುಮಾರ್
ಕುಮಾರಸ್ವಾಮಿ ನನ್ನನ್ನು ಬಯ್ಯದೆ ಬೇರೆ ಯಾರನ್ನು ಬಯ್ಯಲು ಸಾಧ್ಯ? ಶಿವಕುಮಾರ್
ಜಾರ್ಖಂಡ್‌ನ ದಿಯೋಘರ್‌ನಲ್ಲಿ ಇಂಡಿಯನ್ ಆಯಿಲ್ ಸ್ಥಾವರದಲ್ಲಿ ಬೆಂಕಿ ಅವಘಡ
ಜಾರ್ಖಂಡ್‌ನ ದಿಯೋಘರ್‌ನಲ್ಲಿ ಇಂಡಿಯನ್ ಆಯಿಲ್ ಸ್ಥಾವರದಲ್ಲಿ ಬೆಂಕಿ ಅವಘಡ
ಕರ್ನಾಟಕ ಮೊದಲು ತಮಿಳುನಾಡು ಚರ್ಚೆ ಮಾಡಬೇಕಾದ ಅವಶ್ಯಕತೆ ಸ್ಪಷ್ಟವಾಗುತ್ತಿದೆ
ಕರ್ನಾಟಕ ಮೊದಲು ತಮಿಳುನಾಡು ಚರ್ಚೆ ಮಾಡಬೇಕಾದ ಅವಶ್ಯಕತೆ ಸ್ಪಷ್ಟವಾಗುತ್ತಿದೆ
ಶಿವಲಿಂಗೇಗೌಡರು ಕೋಪದಿಂದ ಕುದಿಯುತ್ತಿದ್ದರೆ ಸಭಾಧ್ಯಕ್ಷರಿಗೆ ನಗು!
ಶಿವಲಿಂಗೇಗೌಡರು ಕೋಪದಿಂದ ಕುದಿಯುತ್ತಿದ್ದರೆ ಸಭಾಧ್ಯಕ್ಷರಿಗೆ ನಗು!
ಕಂದಾಯ ಮತ್ತು ಸರ್ವೇ ಇಲಾಖೆ ಅಧಿಕಾರಿಗಳಿಂದ ಮಾರ್ಕಿಂಗ್ ಕೆಲಸ ಶುರುವಾಗಿದೆ
ಕಂದಾಯ ಮತ್ತು ಸರ್ವೇ ಇಲಾಖೆ ಅಧಿಕಾರಿಗಳಿಂದ ಮಾರ್ಕಿಂಗ್ ಕೆಲಸ ಶುರುವಾಗಿದೆ
ತೆರವು ಕಾರ್ಯಾಚರಣೆ ಆರಂಭಿಸುವ ಮೊದಲು ನೋಟೀಸ್ ನೀಡಿಲ್ಲ: ಕುಮಾರಸ್ವಾಮಿ
ತೆರವು ಕಾರ್ಯಾಚರಣೆ ಆರಂಭಿಸುವ ಮೊದಲು ನೋಟೀಸ್ ನೀಡಿಲ್ಲ: ಕುಮಾರಸ್ವಾಮಿ