ಕ್ಯಾಬ್​ ಡ್ರೈವರ್​ ಜತೆ ಪ್ರೀತಿಯಲ್ಲಿ ಬಿದ್ದ ಯುವತಿ; ಪ್ರಿಯಕರನೊಂದಿಗೆ ಕಾರಿನಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ

| Updated By: Skanda

Updated on: Aug 14, 2021 | 8:35 AM

ಮಾಂಬಳ್ಳಿಯ ಕಾಂಚನಾ ಹಾಗೂ ಶ್ರೀನಿವಾಸ್ ಪರಸ್ಪರ ಪ್ರೀತಿಸುತ್ತಿದ್ದರು. ಯುವತಿ ಕಾಂಚನಾ ಜಿಲ್ಲಾಸ್ಪತ್ರೆಯಲ್ಲಿ ನರ್ಸ್ ಅಗಿ ಕೆಲಸ ಮಾಡುತ್ತಿದ್ದರು. ಯುವಕ ಶ್ರೀನಿವಾಸ್ ಕ್ಯಾಬ್​ ಓಡಿಸಿಕೊಂಡಿದ್ದು, ಜತೆಗೆ ವ್ಯವಸಾಯವನ್ನೂ ಮಾಡುತ್ತಿದ್ದರು.

ಕ್ಯಾಬ್​ ಡ್ರೈವರ್​ ಜತೆ ಪ್ರೀತಿಯಲ್ಲಿ ಬಿದ್ದ ಯುವತಿ; ಪ್ರಿಯಕರನೊಂದಿಗೆ ಕಾರಿನಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ
ಸುಟ್ಟು ಕರಕಲಾದ ಕಾರು
Follow us on

ಚಾಮರಾಜನಗರ: ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳಿಬ್ಬರು ಕಾರಿನಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ದುರ್ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕಿನ ಕಿನಕನಹಳ್ಳಿ ಬಳಿ ಪ್ರೇಮಿಗಳು ಸಜೀವ ದಹನವಾಗಿದ್ದಾರೆ. ಮಾಂಬಳ್ಳಿ ಗ್ರಾಮದ ಕಾಂಚನಾ (20) ಹಾಗೂ ಶ್ರೀನಿವಾಸ್ (23) ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ದುರ್ದೈವಿಗಳಾಗಿದ್ದು, ಮಾಂಬಳ್ಳಿ-ಕಿನಕಹಳ್ಳಿ ಗ್ರಾಮದ ರಸ್ತೆಯಲ್ಲಿ ಘಟನೆ ಸಂಭವಿಸಿದೆ.

ಮಾಂಬಳ್ಳಿಯ ಕಾಂಚನಾ ಹಾಗೂ ಶ್ರೀನಿವಾಸ್ ಪರಸ್ಪರ ಪ್ರೀತಿಸುತ್ತಿದ್ದರು. ಯುವತಿ ಕಾಂಚನಾ ಜಿಲ್ಲಾಸ್ಪತ್ರೆಯಲ್ಲಿ ನರ್ಸ್ ಅಗಿ ಕೆಲಸ ಮಾಡುತ್ತಿದ್ದರು. ಯುವಕ ಶ್ರೀನಿವಾಸ್ ಕ್ಯಾಬ್​ ಓಡಿಸಿಕೊಂಡಿದ್ದು, ಜತೆಗೆ ವ್ಯವಸಾಯವನ್ನೂ ಮಾಡುತ್ತಿದ್ದರು. ಆದರೆ, ಇಬ್ಬರೂ ಆತ್ಮಹತ್ಯೆಯ ದಾರಿ ತುಳಿಯಲು ಕಾರಣವೇನು ಎನ್ನುವ ಬಗ್ಗೆ ನಿಖರ ಮಾಹಿತಿ ಇಲ್ಲಿಯ ತನಕ ಲಭ್ಯವಾಗಿಲ್ಲ. ಯಳಂದೂರು ತಾಲ್ಲೂಕಿನ ಕಿನಕನಹಳ್ಳಿ ಸಮೀಪದ ಜಮೀನಿನ ಬಳಿ ಕಾರಿಗೆ ಬೆಂಕಿ ಹಚ್ಚಿಕೊಂಡು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮಾಂಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ವೀಕೆಂಡ್​ ಲಾಕ್​ಡೌನ್​ ಹಿನ್ನೆಲೆ ಚಾಮರಾಜನಗರ ಸ್ತಬ್ಧ
ಕೊರೊನಾ 3ನೇ ಅಲೆಯ ಆತಂಕ ಹಿನ್ನೆಲೆ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ವೀಕೆಂಡ್ ಲಾಕ್‌ಡೌನ್ ಘೋಷಿಸಲಾಗಿದೆ. ಇಂದು ಮತ್ತು ನಾಳೆ ಅಗತ್ಯ ವಸ್ತು ಮಾರಾಟಕ್ಕೆ ಮಾತ್ರ ಅವಕಾಶ ಇರಲಿದ್ದು, ಜಿಲ್ಲೆಯ ಪ್ರವಾಸಿ ತಾಣಗಳಿಗೆ ಜನರ ಭೇಟಿಗೆ ನಿರ್ಬಂಧ ವಿಧಿಸಲಾಗಿದೆ. ಮಲೆಮಹದೇಶ್ವರ ದೇಗುಲಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿದ್ದು, ಜಿಲ್ಲೆಯ ಭರಚುಕ್ಕಿ, ಹೊಗೆನಕಲ್ ಜಲಪಾತಗಳ ವೀಕ್ಷಣೆಗೂ ನಿರ್ಬಂಧ ಹೇರಲಾಗಿದೆ. ಮಧ್ಯಾಹ್ನ 2ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅನುಮತಿ ನೀಡಲಾಗಿದೆ. ಸಂಜೆ 6ರವರೆಗೆ ಹೊಟೇಲ್‌ಗಳಲ್ಲಿ ಪಾರ್ಸೆಲ್‌ಗೆ ಅವಕಾಶ ಇರಲಿದ್ದು, ಅನಗತ್ಯವಾಗಿ ಯಾರೂ ಮನೆಯಿಂದ ಹೊರಬರದಂತೆ ಸೂಚಿಸಲಾಗಿದೆ.

ಹಣ್ಣು, ತರಕಾರಿ, ಮಾಂಸ, ಮೀನು, ದಿನಸಿ ಅಂಗಡಿ, ವೈದ್ಯಕೀಯ ಸೇವೆ ತೆರೆಯಲು ಅವಕಾಶ ಇದೆ. ಮಧ್ಯಾಹ್ನ 2 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಇರಲಿದೆ. ಸಂಜೆ 6 ಗಂಟೆಯವರೆಗೆ ಹೊಟೇಲ್ ಗಳಲ್ಲಿ ಪಾರ್ಸಲ್ ಗೆ ಅವಕಾಶ ದೊರೆತಿದೆ. ಆದರೆ, ಅನಗತ್ಯವಾಗಿ ಓಡಾಡುವ ಸಾರ್ವಜನಿಕರಿಗೆ ದಂಡ ವಿಧಿಸಲು ನಿರ್ಧರಿಸಲಾಗಿದ್ದು, ಸುಖಾಸುಮ್ಮನೆ ಓಡಾಡಿದರೆ ದಂಡ ಖಂಡಿತ ಎನ್ನಲಾಗಿದೆ.

(Lovers committed suicide burn themselves inside the car in Chamarajanagar)

ಇದನ್ನೂ ಓದಿ:
Lockdown: ನಿಯಂತ್ರಣಕ್ಕೆ ಬಾರದ ಕೊರೊನಾ; ಬೆಂಗಳೂರಿಗೆ ಭಾಗಶಃ ಬೀಗ ಹಾಕಲು ಬಹುತೇಕ ತಯಾರಿ; ಇಂದು ಸಿಎಂ ಸಭೆ 

ಲಕ್ಷ ರೂ ಲಂಚ ಕೇಳಿದ ಪೊಲೀಸರು, ಯುವಕ ಆತ್ಮಹತ್ಯೆ: ಪೊಲೀಸ್​ ಕಾನ್ಸ್​​ಟೇಬಲ್, ಎಸ್​ಐ ಸಸ್ಪೆಂಡ್​