ಚಾಮರಾಜನಗರ: ಸಾಮಾಜಿಕ ಬಹಿಷ್ಕಾರ ಬೆದರಿಕೆಗೆ ಮನನೊಂದ ವ್ಯಕ್ತಿ ಆತ್ಮಹತ್ಯೆಗೆ ಶರಣು
ಮುದ್ದನಾಯಕ ಮಗಳನ್ನು ಅದೇ ಗ್ರಾಮದ ಮಹೇಶ್ ಎಂಬುವವರು ಮದುವೆಯಾಗಿದ್ದರು. ಮಹೇಶ್ ಮತ್ತು ಮುದ್ದನಾಯಕ ಕುಟುಂಬಗಳ ಮಧ್ಯೆ ಗಲಾಟೆ ನಡೆದಿತ್ತು.
ಚಾಮರಾಜನಗರ: ಸಾಮಾಜಿಕ ಬಹಿಷ್ಕಾರ ಹಾಕುವಂತೆ ಬೆದರಿಕೆ ಹಾಕಿದ ಹಿನ್ನೆಲೆ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ಮುದ್ದನಾಯಕ(55) ಎಂಬುವವರು ನೇಣು ಬಿಗಿದುಕೊಂಡಿದ್ದಾರೆ. ಸ್ವಜಾತಿಯವರೇ ಸಾಮಾಜಿಕ ಬಹಿಷ್ಕಾರ ಹಾಕುವುದಾಗಿ ಬೆದರಿಕೆ ಹಾಕಿದ್ದು, ಮನನೊಂದು ವ್ಯಕ್ತಿ ಗ್ರಾಮದ ಹೊರವಲಯದ ಜಮೀನಿನಲ್ಲಿ ನೇಣಿಗೆ ಕೊರಳು ಒಡ್ಡಿದ್ದಾರೆ. ಈ ಪ್ರಕರಣ ಗುಂಡ್ಲುಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕೌಟುಂಬಿಕ ಕಲಹ ಮುದ್ದನಾಯಕ ಮಗಳನ್ನು ಅದೇ ಗ್ರಾಮದ ಮಹೇಶ್ ಎಂಬುವವರು ಮದುವೆಯಾಗಿದ್ದರು. ಮಹೇಶ್ ಮತ್ತು ಮುದ್ದನಾಯಕ ಕುಟುಂಬಗಳ ಮಧ್ಯೆ ಗಲಾಟೆ ನಡೆದಿತ್ತು. ಕೆಲ ವರ್ಷಗಳ ನಂತರ ಕೌಟುಂಬಿಕ ಕಲಹ ಶುರುವಾಗಿತ್ತು. ಗ್ರಾಮದ ಮುಖಂಡರ ಸಮ್ಮುಖದಲ್ಲಿ ನ್ಯಾಯ ಪಂಚಾಯಿತಿ ನಡೆದಿತ್ತು. ಪಂಚಾಯಿತಿಯಲ್ಲಿ ಮಹೇಶ್ ಪರವಾಗಿಯೇ ಇತ್ತು. ತಮ್ಮ ಮಾತು ಮೀರಬಾರದು ಎಂದು ಸಹ ಆದೇಶಿಸಿದ್ದರು. ಪೊಲೀಸ್ ಠಾಣೆಗೆ ಹೋದರೆ ಒಂದು ಲಕ್ಷ ರೂ. ದಂಡ ಮತ್ತು ಸಾಮಾಜಿಕ ಬಹಿಷ್ಕಾರ ಹಾಕುವುದಾಗಿ ಎಚ್ಚರಿಕೆ ನೀಡಿದ್ದರು.
ಇದಾದ ಬಳಿಕ ಮುದ್ದನಾಯಕ ಮನೆ ಮುಂದೆ ಮಹೇಶ್ ಯಜಮಾನ ಶೇಖರ್ ಇಬ್ಬರು ಮಕ್ಕಳು ಹೋಗಿ ಗಲಾಟೆ ಮಾಡಿದ್ದಾರೆ. ಹೀಗಾಗಿ ಮನನೊಂದು ಮುದ್ದನಾಯಕ ನೇಣಿಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ
ಕೊಲೆಯಾದ ರೌಡಿ ಆನಂದನಿಗೆ ಏರಿಯಾಗೆ ವೆಲ್ ಕಂ ಹೇಗಿತ್ತು ಗೊತ್ತಾ? ಅವನ ಹವಾ ನೋಡಿದ್ರೆ ಶಾಕ್ ಆಗ್ತೀರಾ
ಸಮೀರ್ ವಾಂಖೆಡೆ ಸಹೋದರಿಯ ಖಾಸಗಿ ಫೋಟೋ ಲೀಕ್ ಮಾಡುವುದಾಗಿ ಬೆದರಿಕೆ; ನವಾಬ್ ಮಲಿಕ್ ಮೇಲೆ ಆರೋಪ