ಸಂತ್ರಸ್ತೆ ತನಿಖೆಗೆ ಸಹಕಾರ ನೀಡುತ್ತಿಲ್ಲ, ಆಕೆಯನ್ನು ಭೇಟಿ ಮಾಡದಂತೆ ಪೋಷಕರು ಪತ್ರ ನೀಡಿದ್ದಾರೆ -ಎಸ್.ಟಿ.ಸೋಮಶೇಖರ್
ಈ ಬಗ್ಗೆ ಮಾತನಾಡಿದ ಸೋಮಶೇಖರ್, ಸಂತ್ರಸ್ತೆ ಸಹಕಾರ ನೀಡುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಅವರು ನಮಗೆ ಸಹಕಾರ ನೀಡಬೇಕಾಗುತ್ತದೆ. ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಯುತ್ತಿದೆ. ಯಾರನ್ನೂ ಭೇಟಿಯಾಗಲ್ಲ ಎಂದು ಪೋಷಕರು ಹೇಳಿದ್ದಾರೆ. ಸಂತ್ರಸ್ತೆ ಯಾರನ್ನೂ ಭೇಟಿಯಾಗಲ್ಲವೆಂದು ಪೋಷಕರು ಪತ್ರ ನೀಡಿದ್ದಾರೆ. ಆದರೆ ಆರೋಪಿಗಳ ಪತ್ತೆಗೆ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಯುತ್ತಿದೆ ಎಂದರು.
ಚಾಮರಾಜನಗರ: ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ರೇಪ್ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತೆ ಸಹಕಾರ ನೀಡುತ್ತಿಲ್ಲವೆಂದು ಪೊಲೀಸರು ಹೇಳಿದ್ದಾರೆ. ಸಂತ್ರಸ್ತೆ ಪೊಲೀಸರ ತನಿಖೆಗೆ ಸಹಕಾರ ನೀಡಬೇಕಾಗುತ್ತದೆ ಎಂದು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರಿನಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಸೋಮಶೇಖರ್, ಸಂತ್ರಸ್ತೆ ಸಹಕಾರ ನೀಡುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಅವರು ನಮಗೆ ಸಹಕಾರ ನೀಡಬೇಕಾಗುತ್ತದೆ. ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಯುತ್ತಿದೆ. ಯಾರನ್ನೂ ಭೇಟಿಯಾಗಲ್ಲ ಎಂದು ಪೋಷಕರು ಹೇಳಿದ್ದಾರೆ. ಸಂತ್ರಸ್ತೆ ಯಾರನ್ನೂ ಭೇಟಿಯಾಗಲ್ಲವೆಂದು ಪೋಷಕರು ಪತ್ರ ನೀಡಿದ್ದಾರೆ. ಆದರೆ ಆರೋಪಿಗಳ ಪತ್ತೆಗೆ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಯುತ್ತಿದೆ ಎಂದರು.
ಮುಖ್ಯಮಂತ್ರಿಗಳು ಎಡಿಜಿಪಿ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ತನಿಖೆ ನಡೆಸುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಪ್ರಕರಣವನ್ನ ಗಂಭೀರವಾಗಿ ತನಿಖೆ ಮಾಡಲಾಗುತ್ತಿದೆ. ಸಂತ್ರಸ್ತೆಯನ್ನ ಇಲ್ಲಿಯವರೆಗೆ ಯಾರು ಭೇಟಿ ಮಾಡಿಲ್ಲ. ಭೇಟಿ ಮಾಡದಂತೆ ಆಕೆಯ ಪೋಷಕರು ಪತ್ರ ನೀಡಿದ್ದಾರೆ. ಆದ್ರೆ ಆರೋಪಿಗಳ ಪತ್ತೆಗೆ ನಾನಾ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದರು.
ಬೇರೆ ರಾಜ್ಯಕ್ಕೆ ಪರಾರಿಯಾದ್ರಾ ಗ್ಯಾಂಗ್ ರೇಪಿಸ್ಟ್ಗಳು? ಇಂಥದ್ದೊಂದು ಬಲವಾದ ಅನುಮಾನ ಈಗ ಪೊಲೀಸರನ್ನ ಕಾಡುತ್ತಿದೆ. ಪೊಲೀಸರು ಈಗಾಗಲೇ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಿದ್ದಾರೆ. ಅಕ್ಕಪಕ್ಕದ ಸ್ಥಳಗಳಲ್ಲೂ ಜಾಲಾಡಿದ್ದಾರೆ. ಅಂಗಡಿಗಳ ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿದ್ದಾರೆ. ಆದ್ರೂ ಯಾವುದೇ ಸುಳಿವು ಸಿಕ್ಕಿಲ್ಲ. ಹೀಗಾಗಿ ಘಟನೆ ನಂತರ ಆರೋಪಿಗಳೆಲ್ಲ ಬೇರೆ ರಾಜ್ಯಕ್ಕೆ ಪರಾರಿಯಾಗಿದ್ದಾರೆ ಅನ್ನೋ ಅನುಮಾನ ಪೊಲೀಸರಿಗೆ ಶುರವಾಗಿದೆ.
ಬಿಯರ್ ಬಾಟಲ್ಗಳ ಮೂಲಕ ಸಿಗಲಿದ್ಯಾ ಸುಳಿವು? ಘಟನೆ ನಡೆದ ಸ್ಥಳದಲ್ಲಿ ಬಿಯರ್ ಬಾಟಲಿಗಳು ಪತ್ತೆಯಾಗಿದ್ವು. ಹೀಗಾಗಿ ಈ ಬಾಟಲ್‌ಗಳನ್ನು ಸಂಗ್ರಹಿಸಿದ ಪೊಲೀಸರು ಅದರ ಮೇಲಿದ್ದ ಲೇಬಲ್ ಆಧರಿಸಿ ಬಿಯರ್ ಬಾಟಲ್ಗಳನ್ನು ಎಲ್ಲಿ ಖರೀದಿ ಮಾಡಿರಬಹುದು ಅನ್ನೋ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮೈಸೂರಿನ ಮೂಲೆ ಮೂಲೆಯ ಬಾರ್ಗಳಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಇದರ ಮಾಹಿತಿ ಸಿಕ್ಕರೇ ಬಿಯರ್ ಬಾಟಲಿಗಳಿಂದಲೇ ಸುಳಿವು ಸಿಗಬಹುದು ಅಂತಾ ಪೊಲೀಸರು ತಿಳಿದಿದ್ದಾರೆ.
ಪರಭಾಷೆ ಮಾತನಾಡ್ತಿದ್ರಂತೆ ಗ್ಯಾಂಗ್ ರೇಪ್ ಆರೋಪಿಗಳು ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಮಹತ್ವದ ಮಾಹಿತಿಯೊಂದು ಸಿಕ್ಕಿದೆ. ಆರೋಪಿಗಳು ಕೃತ್ಯವೆಸಗುವ ಸಮಯದಲ್ಲಿ ತಮಿಳಿನಲ್ಲಿ ಮಾತನಾಡ್ತಿದ್ರು ಅನ್ನೋ ವಿಷಯ ಗೊತ್ತಾಗಿದೆ. ಸದ್ಯಕ್ಕೆ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರಿಗೆ ಹಿನ್ನಡೆಯಾಗಿದೆ. ಘಟನೆ ನಡೆದು ಇಷ್ಟು ದಿನವಾದ್ರೂ ಆರೋಪಿಗಳನ್ನ ಬಂಧಿಸೋದಿರಲಿ.. ಅವರ ಸುಳಿವು ಕೂಡ ಪೊಲೀಸರಿಗೆ ಸಿಕ್ಕಿಲ್ಲ. ಹೀಗಾಗಿ ಅಪರಾಧ ಎಸಗಿದ ಬಳಿಕ.. ಆರೋಪಿಗಳು ಪರರಾಜ್ಯಕ್ಕೆ ಪರಾರಿಯಾಗಿದ್ದಾರೆ. ಇದೇ ಕಾರಣಕ್ಕೆ ಪೊಲೀಸರಿಗೆ ಯಾವುದೇ ಸುಳಿವು ಸಿಗ್ತಿಲ್ಲ ಅನ್ನೋ ಚರ್ಚೆ ಆರಂಭವಾಗಿದೆ. ಇದರ ಬೆನ್ನಲ್ಲೇ ಘಟನಾ ಸ್ಥಳದ ಆಸುಪಾಸಿನಲ್ಲಿರೋ ಹೊರರಾಜ್ಯದ ಜನರ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.
ಇದನ್ನೂ ಓದಿ: ಆ ಹುಡುಗಿ ಅಷ್ಟೊತ್ತಿಗೆ ಅಲ್ಲಿಗೆ ಏಕೆ ಹೋಗಿದ್ದಳೋ -ಮೈಸೂರು ಗ್ಯಾಂಗ್ ರೇಪ್ ಬಗ್ಗೆ ಮಂಜುಳಾ ಮಾನಸ ಉಡಾಫೆ ಮಾತು
Published On - 12:32 pm, Fri, 27 August 21