ಮಲೆ ಮಹದೇಶ್ವರ ಬೆಟ್ಟದಲ್ಲಿ ಮೆಟ್ಟಿಲು ನಿರ್ಮಾಣ ಕಾಮಗಾರಿ ಸ್ಥಗಿತ: ಪಾದಯಾತ್ರೆ ಮೂಲಕ ನಡೆದು ಬರುವ ಭಕ್ತರಿಗೆ ಶಾಕ್

| Updated By: Ganapathi Sharma

Updated on: Oct 25, 2023 | 10:10 PM

ಅಂದಾಜು 25 ಕೋಟಿ ರೂಪಾಯಿ ವೆಚ್ಚದಲ್ಲಿ ಮೆಟ್ಟಿಲುಗಳ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ತಾಳ ಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದವರೆಗೂ 7 ಕಿ.ಮೀ ಮೆಟ್ಟಿಲು ನಿರ್ಮಾಣಕ್ಕೆ ಕಾಮಗಾರಿ ಆರಂಭವಾಗಿತ್ತು. ಆದ್ರೆ ಇದೀಗಾ ಏಕಾಏಕಿ ಮೆಟ್ಟಿಲು ನಿರ್ಮಾಣ ಕಾಮಗಾರಿ ಸ್ಟಾಪ್ ಆಗಿದೆ.

ಮಲೆ ಮಹದೇಶ್ವರ ಬೆಟ್ಟದಲ್ಲಿ ಮೆಟ್ಟಿಲು ನಿರ್ಮಾಣ ಕಾಮಗಾರಿ ಸ್ಥಗಿತ: ಪಾದಯಾತ್ರೆ ಮೂಲಕ ನಡೆದು ಬರುವ ಭಕ್ತರಿಗೆ ಶಾಕ್
ಮಲೆ ಮಹದೇಶ್ವರ ದೇವಾಲಯ
Follow us on

ಚಾಮರಾಜನಗರ, ಅಕ್ಟೋಬರ್ 25: 77 ಮಲೆಯ ಒಡೆಯ ಮಲೆ ಮಹದೇಶ್ವರನ (Male Mahadeshwara Hills) ದರ್ಶನಕ್ಕೆ ಭಕ್ತರು ಗುಂಪು ಗುಂಪಾಗಿ ನಡೆದು ಹೋಗ್ತಾರೆ. ಹರಕೆ ಹೊತ್ತು ನಡೆದು ಹೋಗುವ ಭಕ್ತರೇ ಸಂಖ್ಯೆಯೇ ಹೆಚ್ಚು. ಅದರಲ್ಲೂ ದಟ್ಟ ಕಾನನದ ನಡುವೆ ಕಲ್ಲು, ಮುಳ್ಳು ಚುಚ್ಚುವ ನೋವಿನ ನಡುವೆಯೂ ದರ್ಶನಕ್ಕೆ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸ್ತಿದ್ದಾರೆ. ಇದನ್ನೆಲ್ಲಾ ಅರಿತ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರ ಭಕ್ತರಿಗೆ ಹೊಸದಾಗಿ ಮೆಟ್ಟಿಲು ನಿರ್ಮಿಸುವ ಕೆಲಸಕ್ಕೆ ಮುಂದಾಗಿತ್ತು. ಇದೀಗ ಏಕಾಏಕಿ ಮೆಟ್ಟಿಲು ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದೆ.

ಹೌದು, ಅದು ರಾಜ್ಯದ ದೇಗುಲಗಳ್ಳಲ್ಲೇ ಅತಿ ಹೆಚ್ಚು ಆದಾಯ ಬರುವ ಎರಡನೇ ದೇವಾಲಯ. ಅದು ಬೇರಾವುದೂ ಅಲ್ಲ, ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿರುವ ಮಲೆ ಮಹದೇಶ್ವರ ದೇವಾಲಯ. ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಭಕ್ತರು ಭೇಟಿ ನೀಡಿ‌ ಮಾದಪ್ಪನ ದರ್ಶನ ಪಡೆದು ಧನ್ಯರಾಗುತ್ತಾರೆ. ಅದರಲ್ಲೂ ದೀಪಾವಳಿ, ಶಿವರಾತ್ರಿ ಹಬ್ಬದ ವೇಳೆಯಲ್ಲಿ ಲಕ್ಷಾಂತರ ಭಕ್ತರು ದರ್ಶನಕ್ಕೆ ಆಗಮಿಸ್ತಾರೆ. ಈ ಸಮಯದಲ್ಲಿ ಭಕ್ತರು ಹರಕೆ ಮಾಡಿಕೊಂಡು ಮಂಡ್ಯ,ಮೈಸೂರು, ರಾಮನಗರ ಸೇರಿದಂತೆ ಹಲವು ಜಿಲ್ಲೆಗಳಿಂದ ಮಲೆ ಮಹದೇಶ್ವರ ದೇವಸ್ಥಾನಕ್ಕೆ ದಟ್ಟ ಕಾಡಿನ ನಡುವೆ ಕಾಲ್ನಡಿಗೆಯಲ್ಲಿ ಸಾಗುತ್ತಾರೆ. ಕಾಡಿನ ನಡುವೆ ಕೆಲವು ಕಡೆ ದುರ್ಗಮ ಹಾದಿಗಳಿವೆ. ಈ ಹಾದಿಯಲ್ಲಿ ಭಕ್ತರು ನಡೆಯಲು ಸಾಕಷ್ಟು ಪ್ರಯಾಸ ಪಡುತ್ತಿದ್ರು.‌ ಇದನ್ನೆಲ್ಲಾ ಗಮನಿಸಿದ ಮಲೆ ಮಹದೇಶ್ವರ ಪ್ರಾಧಿಕಾರದವರು ಕಾಡಿನ ನಡುವೆ ದುರ್ಗಮ ಹಾದಿ ಇರುವ ಕಡೆ ಮೆಟ್ಟಿಲುಗಳನ್ನು ನಿರ್ಮಾಣ ಮಾಡೋ ಕೆಲಸಕ್ಕೆ ಮುಂದಾಗಿತ್ತು. ಅಂದಾಜು 25 ಕೋಟಿ ರೂಪಾಯಿ ವೆಚ್ಚದಲ್ಲಿ ಮೆಟ್ಟಿಲುಗಳ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ತಾಳ ಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದವರೆಗೂ 7 ಕಿ.ಮೀ ಮೆಟ್ಟಿಲು ನಿರ್ಮಾಣಕ್ಕೆ ಕಾಮಗಾರಿ ಆರಂಭವಾಗಿತ್ತು. ಆದ್ರೆ ಇದೀಗಾ ಏಕಾಏಕಿ ಮೆಟ್ಟಿಲು ನಿರ್ಮಾಣ ಕಾಮಗಾರಿ ಸ್ಟಾಪ್ ಆಗಿದೆ.

ಇದನ್ನೂ ಓದಿ: ಮತ್ತೆ ಬದಲಾಗುತ್ತಾ ಜಿಲ್ಲೆಯ ಹೆಸರು: ಬಸವೇಶ್ವರ ಅಥವಾ ಬಸವ ಜಿಲ್ಲೆಯಾಗುತ್ತಾ ವಿಜಯಪುರ?

ಮೆಟ್ಟಿಲು ನಿರ್ಮಾಣ ಕಾಮಗಾರಿ ಬಗ್ಗೆ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿಯವರನ್ನು ಪ್ರಶ್ನಸಿದ್ರೆ, ಶೇ 60 ರಷ್ಟು ಕಾಮಗಾರಿ ಮುಗಿದಿದೆ. ಆದ್ರೆ ಸದ್ಯ ಮೆಟ್ಟಿಲು ಕಾಮಗಾರಿ ನಿಂತು ಹೋಗಿದೆ. ಗುತ್ತಿಗೆ ಪಡೆದಿದ್ದ ವ್ಯಕ್ತಿ ಕೆಲಸ ನಿಲ್ಲಿಸಿದ್ದಾನೆ. ಸಿಎಂ ಸಿದ್ದರಾಮಯ್ಯ ಗಮನಕ್ಕೂ ಕೂಡ ಬಂದಿದೆ. ಇದೀಗ ಮತ್ತೆ ಟೆಂಡರ್ ಕರೆದು ಬೇರೊಬ್ಬ ಗುತ್ತಿಗೆದಾರನಿಗೆ ಕಾಮಗಾರಿ ಕೆಲಸ ವಹಿಸ್ತೇವೆ ಅಂತಾ ಉತ್ತರಿಸ್ತಾರೆ. ಶೀಘ್ರವೇ ಕೆಲಸ ಮುಗಿಸಲು ಕ್ರಮ ವಹಿಸ್ತೇವೆ ಅಂತಾರೆ ಅಧಿಕಾರಿಗಳು.

ಒಟ್ಟಿನಲ್ಲಿ ಶಿವರಾತ್ರಿ, ದೀಪಾವಳಿ ವೇಳೆ ಮಲೆ ಮಾದಪ್ಪನ ದರ್ಶನಕ್ಕೆ ನಡೆದು ಭಕ್ತ ಸಾಗರವೇ ಬರುತ್ತೆ.ಈ ಬಾರಿಯಾದರೂ ಮೆಟ್ಟಿಲುಗಳ ಮೇಲೆ ನಡೆಯುವ ಭಕ್ತರ ಆಸೆಗೆ ಪ್ರಾಧಿಕಾರ ತಣ್ಣೀರು ಎರಚಿದೆ. ಈ ಬಾರಿಯೂ ಕಲ್ಲುಮುಳ್ಳುಗಳ ನಡುವೆ ಏಳು ಮಲೆ ಒಡೆಯನ ದರ್ಶನ ಪಡೆಯುವ ಸ್ಥಿತಿ ಬಂದಿದೆ.ಇನ್ನಾದ್ರೂ ಪ್ರಾಧಿಕಾರ ಭಕ್ತರ ಸಂಕಷ್ಟಕ್ಕೆ ಧಾವಿಸುತ್ತಾ, ಕಾಮಗಾರಿ ಬೇಗ ಆರಂಬಿಸಿ ಮುಗಿಸುತ್ತಾ ಅನ್ನೋದನ್ನು ಕಾದುನೋಡಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ