Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಬದಲಾಗುತ್ತಾ ಜಿಲ್ಲೆಯ ಹೆಸರು: ಬಸವೇಶ್ವರ ಅಥವಾ ಬಸವ ಜಿಲ್ಲೆಯಾಗುತ್ತಾ ವಿಜಯಪುರ?

ಬಿಜಾಪುರದಿಂದ ವಿಜಯಪುರ ಜಿಲ್ಲೆಯೆಂದು ಮರುನಾಮಕರಣ ಆದಂತ ಜಿಲ್ಲೆಯ ಹೆಸರು ಮತ್ತೇ ಬದಲಾಗುತ್ತಾ? ಎಂಬ ಪ್ರಶ್ನೆ ಇದೀಗಾ ಮೂಡಿದೆ. ಕಾರಣ ಸರ್ಕಾರ ವಿಜಯಪುರ ಜಿಲ್ಲೆಗೆ ಬಸವೇಶ್ವರ ಜಿಲ್ಲೆ ಅಥವಾ ಬಸವ ಜಿಲ್ಲೆ ಎಂದು ಮರು ನಾಮಕರಣ ಮಾಡಲು ಚಿಂತನೆ ಮಾಡಿದೆ. ಈ ವಿಚಾರವಾಗಿ ಜಿಲ್ಲೆಯ ಸಂಘ ಸಂಸ್ಥೆಗಳ, ಹೋರಾಟಗಾರರ, ಇತಿಹಾಸಕಾರರ, ಸಂಶೋಧಕರ, ಗಣ್ಯ ವ್ಯಕ್ತಿಗಳ ಹಾಗೂ ಸಾರ್ವನಿಕರಿಂದ ಅಭಿಪ್ರಾಯ ಸಂಗ್ರಹಣೆಗೆ ಮುಂದಾಗಿದೆ.

ಮತ್ತೆ ಬದಲಾಗುತ್ತಾ ಜಿಲ್ಲೆಯ ಹೆಸರು: ಬಸವೇಶ್ವರ ಅಥವಾ ಬಸವ ಜಿಲ್ಲೆಯಾಗುತ್ತಾ ವಿಜಯಪುರ?
ವಿಜಯಪುರ ಜಿಲ್ಲೆ (ಸಂಗ್ರಹ ಚಿತ್ರ)
Follow us
ಅಶೋಕ ಯಡಳ್ಳಿ, ವಿಜಯಪುರ
| Updated By: ಗಂಗಾಧರ​ ಬ. ಸಾಬೋಜಿ

Updated on: Oct 25, 2023 | 9:16 PM

ವಿಜಯಪುರ, ಅಕ್ಟೋಬರ್​​ 25: ಬಿಜ್ಜನಹಳ್ಳಿ, ಬಿಜ್ಜಪುರ, ಬಿಜಾಪುರ ಎಂದು ಕರೆಯಲ್ಪಡುತ್ತಿದ್ದ ಜಿಲ್ಲೆಯೇ ವಿಜಯಪುರ (Vijayapura) . ಸರ್ಕಾರಿ ದಾಖಲಾತಿಗಳಲ್ಲಿ ಬಿಜಾಪುರ ಎಂದು ದಾಖಲಾಗಿದ್ದ ಹೆಸರನ್ನು ಸರ್ಕಾರ 2014 ರಲ್ಲಿ ವಿಜಯಪುರ ಎಂದು ಮರು ನಾಮಕರಣಗೊಂಡಿತು. ಆದಿಲ್ ಶಾಹಿಗಳಾಡಳಿತ ಅವಧಿಯಲ್ಲಿ ಬಿಜಾಪುರ ಎಂದು ಕರೆಯಲ್ಪಡುತ್ತಿದ್ದ ಸಾಮ್ರಾಜ್ಯ ಸ್ವಾತಂತ್ರ್ಯ ನಂತರವೂ ಬಿಜಾಪುರ ಎಂದೆ ಕರೆಯಲಾಗುತ್ತಿತ್ತು. ಕೆಲ ಸಂಶೋಧಕರರಿಂದ, ಇತಿಹಾಸಕಾರರು ಹಾಗೂ ಹೋರಾಟಗಾರರ ಹೋರಾಟ ಹಾಗೂ ಬೇಡಿಕೆಯ ಫಲವಾಗಿ ಬಿಜಾಪುರ ಜಿಲ್ಲೆಗೆ ವಿಜಯಪುರ ಜಿಲ್ಲೆ ಎಂದು ಮರುನಾಮಕರಣ ಮಾಡಲಾಗಿದೆ.

ಬಿಜಾಪುರದಿಂದ ವಿಜಯಪುರ ಜಿಲ್ಲೆಯೆಂದು ಮರುನಾಮಕರಣ ಆದಂತ ಜಿಲ್ಲೆಯ ಹೆಸರು ಮತ್ತೇ ಬದಲಾಗುತ್ತಾ? ಎಂಬ ಪ್ರಶ್ನೆ ಇದೀಗಾ ಮೂಡಿದೆ. ಕಾರಣ ಸರ್ಕಾರ ವಿಜಯಪುರ ಜಿಲ್ಲೆಗೆ ಬಸವೇಶ್ವರ ಜಿಲ್ಲೆ ಅಥವಾ ಬಸವ ಜಿಲ್ಲೆ ಎಂದು ಮರು ನಾಮಕರಣ ಮಾಡಲು ಚಿಂತನೆ ಮಾಡಿದೆ. ಈ ವಿಚಾರವಾಗಿ ಜಿಲ್ಲೆಯ ಸಂಘ ಸಂಸ್ಥೆಗಳ, ಹೋರಾಟಗಾರರ, ಇತಿಹಾಸಕಾರರ, ಸಂಶೋಧಕರ, ಗಣ್ಯ ವ್ಯಕ್ತಿಗಳ ಹಾಗೂ ಸಾರ್ವನಿಕರಿಂದ ಅಭಿಪ್ರಾಯ ಸಂಗ್ರಹಣೆಗೆ ಮುಂದಾಗಿದೆ. ಮುಂದಿನ 15 ದಿನಗಳ ಕಾಲಾವಕಾಶ ಅಭಿಪ್ರಾಯ ಸಲ್ಲಿಕೆಗೆ ಅವಕಾಶ ನೀಡಿದೆ.

ವಿಜಯಪುರ ಜಿಲ್ಲೆಯನ್ನು ಬಸವೇಶ್ವರ ಜಿಲ್ಲೆ, ಬಸವ ಜಿಲ್ಲೆ ಎಂದು ನಾಮಕರಣ ಮಾಡುವ ಕುರಿತು ಸಂಘ ಸಂಸ್ಥೆಗಳ, ಹೋರಾಟಗಾರರ, ಇತಿಹಾಸಕಾರರ, ಸಂಶೋಧಕರ, ಗಣ್ಯ ವ್ಯಕ್ತಿಗಳ ಹಾಗೂ ಸಾರ್ವನಿಕರು ತಮ್ಮ ಪರ ವಿರೋಧ ಅಭಿಪ್ರಾಯವನ್ನು ಲಿಖಿತ ರೂಪದಲ್ಲಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಸಲ್ಲಿಕೆ ಮಾಡಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ವಿಜಯಪುರದಲ್ಲಿ ಕಾವೇರಿದ ಮಹಾನಗರ ಪಾಲಿಕೆ ಮೇಯರ್‌, ಉಪಮೇಯರ್‌ ಚುನಾವಣೆ: ಬಿಜೆಪಿ ಕಾಂಗ್ರೆಸ್ ತೀವ್ರ ಸೆಣಸಾಟ

ಜಿಲ್ಲೆಯ ಹೆಸರನ್ನು ಮತ್ತೆ ಬದಲಾವಣೆ ಮಾಡುವ ವಿಚಾರದಲ್ಲಿ ಸರ್ಕಾರಕ್ಕೆ ಸಂಘ ಸಂಸ್ಥೆಗಳ, ಹೋರಾಟಗಾರರ, ಇತಿಹಾಸಕಾರರ, ಸಂಶೋಧಕರ, ಗಣ್ಯ ವ್ಯಕ್ತಿಗಳ ಹಾಗೂ ಸಾರ್ವನಿಕರ ಅಭಿಪ್ರಾಯಗಳು ಸಲ್ಲಿಕೆಯಾದ ಬಳಿಕ ಎಲ್ಲರ ಅಭಿಪ್ರಾಯಗಳನ್ನು ಸರ್ಕಾರ ಪರಿಶೀಲನೆ ಮಾಡಲಿದೆ. ಬಳಿಕ ವಿಜಯಪುರ ಜಿಲ್ಲೆಯ ಹೆಸರನ್ನು ಬಸವವೇಶ್ವರ ಜಿಲ್ಲೆ ಅಥವಾ ಬಸವ ಜಿಲ್ಲೆ ಎಂದು ಮರು ನಾಮಕರಣ ಮಾಡುವ ಕುರಿತು ಮುಂದಿನ ತೀರ್ಮಾಣ ತೆಗೆದುಕೊಳ್ಳುತ್ತದೆ.

12 ನೇ ಶತಮಾನದಲ್ಲಿ ಮಹಾಮಾನವೀಯತೆಯನ್ನು ಸಾರಿದ ವಿಶ್ವ ಗುರು ಬಸವಣ್ಣನವರ ಹೆಸರನ್ನು ಮತ್ತಷ್ಟು ಅಜರಾಮರ ಮಾಡಲು ಅವರು ಮಾಡಿದ ಸಮಾನತೆಯ ಹೋರಾಟವನ್ನು ಮುಂದಿನ ಪೀಳಿಗೆಗೆ ತಿಳಿಸಲು ಜಿಲ್ಲೆಯ ಹೆಸರು ಬದಲಾವಣೆ ಮಾಡಿ ಬಸವೇಶ್ವರ ಜಿಲ್ಲೆ ಅಥವಾ ಬಸವ ಜಿಲ್ಲೆಯೆಂದು ಮರು ನಾಮಕರಣ ಮಾಡಲು ಸರ್ಕಾರ ಮೊದಲ ಹೆಜ್ಜೆ ಇಟ್ಟಿದೆ. ಆದರೆ ಮರು ನಾಮಕರಣವನ್ನು ಸದ್ಯವೇ ತುರ್ತಾಗಿ ಮಾಡುತ್ತಿಲ್ಲಾ. ಕಾನೂನಾತ್ಮಕ ನಿಯಮಗಳ ಮೂಲಕವೇ ಸರ್ಕಾರ ಮುಂದಿನ ತೀರ್ಮಾಣವನ್ನು ತೆಗೆದುಕೊಳ್ಳಲಿದೆ.

ಸದ್ಯ ಜಿಲ್ಲೆಯಲ್ಲಿ ಜಿಲ್ಲಾ ಹೆಸರು ಬದಲಾವಣೆ ಕುರಿತು ಚರ್ಚೆ ನಡೆಯುತ್ತಿದೆ. ಹೆಸರು ಬದಲಾವಣೆ ವಿಚಾರದಲ್ಲಿ ಪರ ವಿರೋಧಗಳೂ ಸಹ ಕೇಳಿ ಬರುತ್ತಿವೆ. ಇತ್ತೀಚೆಗಷ್ಟೇ ಜಿಲ್ಲೆಯ ಹೆಸರು ಬದಲಾವಣೆಯಾಗಿದೆ. ಮತ್ತೇ ಯಾಕೆ ಜಿಲ್ಲೆಯ ಹೆಸರು ಬದಲಾವಣೆ ಮಾಡುವುದು ಎಂದು ಕೆಲವರು ಚರ್ಚೆ ಮಾಡಿದ್ದಾರೆ. ಕೆಲವರು ವಚನಗಳ ಮೂಲಕ ಸಮಾನತೆಯನ್ನು ಸಾರಿದ, ವಿಶ್ವಗುರು ಬಸವೇಶ್ವರರ ಜನ್ಮ ಭೂಮಿ ವಿಜಯಪುರ. ಹಾಗಾಗಿ ಬಸವಣ್ಣನವರ ಹೆಸರನ್ನು ಜಿಲ್ಲೆಗೆ ಇಡೋದು ಸೂಕ್ತ ಎಂದಿದ್ದಾರೆ. ಅಂತಿಮವಾಗಿ ಸರ್ಕಾರವೇ ಈ ವಿಚಾರದಲ್ಲಿ ತೀರ್ಮಾಣ ತೆಗೆದುಕೊಳ್ಳಲಿದೆ.

ಇದನ್ನೂ ಓದಿ: ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡದೆ ಕೈ ಎತ್ತಿದ ರಾಜ್ಯ ಸರ್ಕಾರ, ವಿಜಯಪುರದಲ್ಲಿ ವೆಲೋಡ್ರಮ್ ನಿರ್ಮಾಣ ಸ್ಥಗಿತಗೊಳಿಸಿದ ಗುತ್ತಿಗೆ ಸಂಸ್ಥೆ

ಜಿಲ್ಲಾ ಉಸ್ತುವಾರಿ ಹಾಗೂ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಪ್ರತಿಕ್ರಿಯಿಸಿದ್ದು, ವಿಜಯಪುರ ಜಿಲ್ಲೆಯ ಹೆಸರನ್ನು ಬಸವೇಶ್ವರ ಜಿಲ್ಲೆ ಅಥವಾ ಬಸವ ಜಿಲ್ಲೆ ಎಂದು ಮರುನಾಮಕರಣ ಮಾಡುವ ಪ್ರಸ್ತಾಪ ಬಂದಿದೆ. ಈ ಕುರಿತು ನಾನು ಮುಖ್ಯಮಂತ್ರಿಗಳ ಬಳಿ ಚರ್ಚೆ ಮಾಡುತ್ತೇನೆ ಎಂದಿದ್ದಾರೆ.

ವಿಜಯಪುರ ಜಿಲ್ಲೆಗೆ ಮಹಾನ್ ವ್ಯಕ್ತಿ ಬಸವಣ್ಣನವರ ಹೆಸರು ಇಡಬೇಕೆಂಬ ನಿಟ್ಟಿನಲ್ಲಿ ಬಸವೇಶ್ವರ ಜಿಲ್ಲೆ – ಬಸವ ಜಿಲ್ಲೆ ಎಂದು ಮರು ನಾಮಕರಣ ಮಾಡಲು ಸರ್ಕಾರ ಅಭಿಪ್ರಾಯ ಸಂಗ್ರಣೆಗೆ ಮುಂದಾಗಿದೆ. ಸಂಘ ಸಂಸ್ಥೆಗಳು, ಸಾರ್ವಜನಿಕರು 2020 ರಿಂದ ಮನವಿ ಸಲ್ಲಿಕೆ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಈ ವಿಚಾರದಲ್ಲಿ ಸರ್ಕಾರ ಜಿಲ್ಲಾಡಳಿತದಿಂದ ಅಭಿಪ್ರಾಯ ಕೇಳಿದೆ.

ಯಾವುದೇ ಗ್ರಾಮ, ಪಟ್ಟಣಮ ನಗರದ ಹೆಸರು ಬದಲಾವಣೆ ಮಾಡಲು ಬೇಡಿಕೆ ಬಂದರೆ ಅಭಿಪ್ರಾಯ ಸಂಗ್ರಹಣೆ ಮಾಡುವುದು ಶಿಫಾರಸ್ಸು ಕೇಳುವುದು ವಾಡಿಕೆ. ಕಾರಣ ನಾವು ಈ ವಿಚಾರದಲ್ಲಿ ಜನರ ಅಭಿಪ್ರಾಯ ಕೇಳಿದ್ದೇವೆ. ಅದೇ ರೀತಿ ವಿಜಯಪುರ ರೇಲ್ವೇ ನಿಲ್ದಾಣಕ್ಕೆ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಹೆಸರು ಇಡಲು ಬೇಡಿಕೆ ಬಂದಿದೆ. ಈ ನಿಟ್ಟಿನಲ್ಲಿಯೂ ಸಹ ಸರ್ಕಾರ ಜನಾಭಿಪ್ರಾಯ ಸಂಗ್ರಣೆಗೆ ಸೂಚಿಸಿದ್ದು ಜನರ ಅಭಿಪ್ರಾಯ ಸಂಗ್ರಹಿಸಿ ಸರ್ಕಾರಕ್ಕೆ ಸಲ್ಲಿಕೆ ಮಾಡುತ್ತೇವೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳ ಜಿಲ್ಲಾ ಉಸ್ತುವಾರಿ ಸಚಿವರ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತದೆ. ಅಂತಿಮ ನಿರ್ಧಾರ ಸರ್ಕಾರ ತೆಗೆದುಕೊಳ್ಳುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ