ವರದಕ್ಷಿಣೆ ಕಿರುಕುಳ ಗೃಹಿಣಿ ಸಾವು; ಆರೋಪಿ ಹೆಸರು ಕೈಬಿಟ್ಟಿದ್ದಕ್ಕೆ ವಿಷ ಸೇವಿಸುವುದಾಗಿ ಎಚ್ಚರಿಕೆ ಕೊಟ್ಟ ಪೋಷಕರು!

ಮಗಳ ಸಾವಿನ ನೋವಿನಲ್ಲಿರುವ ಪೋಷಕರು ಮಗಳ ಸಾವಿಗೆ ನ್ಯಾಯ ಬೇಕೆಂದು ಡಿವೈಎಸ್‌ಪಿ ಕಚೇರಿಯ ಮುಂದೆ ಧರಣಿ ಕೂತಿದ್ದಾರೆ. ಚಾಮರಾಜನಗರದ ಉಡಿಗಾಲದಲ್ಲಿ ಕಳೆದ ಡಿಸೆಂಬರ್‌ನಲ್ಲಿ ದಿವ್ಯಾ ಎಂಬ ಮಹಿಳೆ ವರದಕ್ಷಿಣೆ ಕಿರುಕುಳ ಹಿನ್ನೆಲೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ರು.

ವರದಕ್ಷಿಣೆ ಕಿರುಕುಳ ಗೃಹಿಣಿ ಸಾವು; ಆರೋಪಿ ಹೆಸರು ಕೈಬಿಟ್ಟಿದ್ದಕ್ಕೆ ವಿಷ ಸೇವಿಸುವುದಾಗಿ ಎಚ್ಚರಿಕೆ ಕೊಟ್ಟ ಪೋಷಕರು!
ವರದಕ್ಷಿಣೆ ಕಿರುಕುಳ ಗೃಹಿಣಿ ಸಾವು; ಆರೋಪಿ ಹೆಸರು ಕೈಬಿಟ್ಟಿದ್ದಕ್ಕೆ ವಿಷ ಸೇವಿಸುವುದಾಗಿ ಎಚ್ಚರಿಕೆ ಕೊಟ್ಟ ಪೋಷಕರು!
Edited By: ಆಯೇಷಾ ಬಾನು

Updated on: Mar 11, 2022 | 5:04 PM

ಚಾಮರಾಜನಗರ: ವರದಕ್ಷಿಣೆ ಕಿರುಕುಳದಿಂದ ಗೃಹಿಣಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದಲ್ಲಿ ಒಬ್ಬ ಆರೋಪಿಯ ಹೆಸರನ್ನು ಕೈಬಿಟ್ಟು ಚಾರ್ಜ್‌ಶೀಟ್ ಸಲ್ಲಿಸಿದ ಹಿನ್ನೆಲೆ ಗೃಹಿಣಿ ಪೋಷಕರು ಡಿವೈಎಸ್‌ಪಿ ಕಚೇರಿಯ ಮುಂದೆ ಧರಣಿ ನಡೆಸಿದ ಘಟನೆ ನಡೆದಿದೆ. ಪೋಷಕರು ಆರೋಪಿ ಹೆಸರನ್ನು ಚಾರ್ಜ್‌ಶೀಟ್‌ನಲ್ಲಿ ಸೇರಿಸಬೇಕೆಂದು ಒತ್ತಾಯಿಸಿದ್ದಾರೆ. ಆರೋಪಿ ಹೆಸರು ಸೇರಿಸದಿದ್ದರೆ ಇಲ್ಲೇ ವಿಷ ಕುಡಿದು ಸಾಯುತ್ತೇವೆಂದು ಬೆದರಿಕೆ ಹಾಕಿದ್ದಾರೆ.

ಮಗಳ ಸಾವಿನ ನೋವಿನಲ್ಲಿರುವ ಪೋಷಕರು ಮಗಳ ಸಾವಿಗೆ ನ್ಯಾಯ ಬೇಕೆಂದು ಡಿವೈಎಸ್‌ಪಿ ಕಚೇರಿಯ ಮುಂದೆ ಧರಣಿ ಕೂತಿದ್ದಾರೆ. ಚಾಮರಾಜನಗರದ ಉಡಿಗಾಲದಲ್ಲಿ ಕಳೆದ ಡಿಸೆಂಬರ್‌ನಲ್ಲಿ ದಿವ್ಯಾ ಎಂಬ ಮಹಿಳೆ ವರದಕ್ಷಿಣೆ ಕಿರುಕುಳ ಹಿನ್ನೆಲೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ರು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿತ್ತು. ಮೃತ ದಿವ್ಯಾಳ ಪತಿ, ಅತ್ತೆ, ಮಾವ, ಭಾವ, ವಾರಗಿತ್ತಿ ಮೇಲೆ ಪ್ರಕರಣ ದಾಖಲಿಸಿದ್ರು. ಆದ್ರೆ ಈಗ ಈ ಪ್ರಕರಣದಲ್ಲಿ ವಾರಗತ್ತಿ ರೇಖಾಳಿಗೆ ಯಾವುದೇ ಸಂಬಂಧವಿಲ್ಲ ಎಂದು ಪೋಲಿಸರು ಚಾರ್ಜ್ ಶೀಟ್ನಲ್ಲಿ ಹೆಸರು ಕೈ ಬಿಟ್ಟಿದ್ದಾರೆ. ಇದಕ್ಕೆ ಆಕ್ರೋಶಗೊಂಡ ದಿವ್ಯಾ ಪೋಷಕರು ರೇಖಾಳನ್ನು ಪ್ರಕರಣದಲ್ಲಿ ಸೇರಿಸಿ ಇಲ್ಲವೇ ನಾವು ವಿಷ ಕುಡಿಯುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಪೋಲಿಸರು ಪೋಷಕರನ್ನು ಸಮಾಧಾನಪಡಿಸಿದ್ದಾರೆ.

ಇದನ್ನೂ ಓದಿ: ದಾವಣಗೆರೆ: ದುರ್ಗಾಂಬಿಕಾದೇವಿ ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷೇಧಿಸಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶ

ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದಿದ್ದ ಅರ್ಚನಾ ಗೌತಮ್​ಗೆ ಒಲಿಯದ ಮತದಾರ; ನಟಿಗೆ ಲಭಿಸಿದ ಮತಗಳೆಷ್ಟು?

TV9 Web

TV9 Kannada

Read More
Loading...
Unable to load recommendations.
Follow Us