ಚಾಮರಾಜನಗರ ರಸ್ತೆ ಕಾಮಗಾರಿ ಆರಂಭವಾಗಿ 5 ವರ್ಷವೇ ಕಳೆದರೂ ಇನ್ನೂ ಕಂಪ್ಲೀಟ್ ಆಗಿಲ್ಲ, ವಾಹನ ಸವಾರರಿಗೆ ತ್ರಿಶಂಕು

| Updated By: ಸಾಧು ಶ್ರೀನಾಥ್​

Updated on: Feb 06, 2024 | 5:18 PM

ರಸ್ತೆ ತುಂಬಾ ಹರಡಿರುವ ಜಲ್ಲಿ ಕಲ್ಲುಗಳು.. ಕುಂಟುತ್ತಾ ಸಾಗುತ್ತಿರುವ ರಸ್ತೆ ಕಾಮಗಾರಿ.. ಜೀವ ಪಣಕಿಟ್ಟು ಸಂಚರಿಸುತ್ತಿರುವ ವಾಹನ ಸವಾರರು. ಈ ಎಲ್ಲಾ ದೃಶ್ಯ ಕಣ್ಣಿಗೆ ಬಿದ್ದಿದ್ದು ಚಾಮರಾಜನಗರದ ಅಂಬೇಡ್ಕರ್ ಭವನದ ಪಕ್ಕದಲ್ಲೇ ಇರೋ ರಸ್ತೆಯಲ್ಲಿ. ಹೌದು ಸಿಮೆಂಟ್ ರಸ್ತೆ ಮಾಡುವ ಕಾಮಗಾರಿಗೆ ಐದು ವರ್ಷಗಳ ಹಿಂದೆಯೇ ಚಾಲನೆ ಸಿಕ್ಕಿತ್ತು. ಆದರೆ ಇನ್ನಾದರೂ...

ಚಾಮರಾಜನಗರ ರಸ್ತೆ ಕಾಮಗಾರಿ ಆರಂಭವಾಗಿ 5 ವರ್ಷವೇ ಕಳೆದರೂ ಇನ್ನೂ ಕಂಪ್ಲೀಟ್ ಆಗಿಲ್ಲ, ವಾಹನ ಸವಾರರಿಗೆ ತ್ರಿಶಂಕು
ಚಾಮರಾಜನಗರ ರಸ್ತೆ ಕಾಮಗಾರಿ ಆರಂಭವಾಗಿ 5 ವರ್ಷವೇ ಕಳೆದರೂ ಇನ್ನೂ ಕಂಪ್ಲೀಟ್ ಆಗಿಲ್ಲ,
Follow us on

ಅಂದು ಚಾಮರಾಜನಗರದ ಪ್ರತಿಷ್ಠಿತ ರಸ್ತೆಯ ಕಾಮಗಾರಿಗೆ 5 ಕೋಟಿ ವೆಚ್ಚದಲ್ಲಿ ಸಿಮೆಂಟ್ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಆದ್ರೆ ರಸ್ತೆ ಕಾಮಗಾರಿ ಆರಂಭವಾಗಿ ಐದು ವರ್ಷಗಳೇ ಕಳೆದರೂ ಇನ್ನೂ ಕಂಪ್ಲೀಟ್ ಆಗಿಲ್ಲ. ಗುತ್ತಿಗೆದಾರನ ಕಳ್ಳಾಟಕ್ಕೆ ಪ್ರತಿನಿತ್ಯ ವಾಹನ ಸವಾರರು ಹಿಡಿ ಶಾಪ ಹಾಕುತ್ತಾ ಸಂಚರಿಸುತ್ತಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ನಿಮ್ಮ ಮುಂದೆ.

ಅದು ಚಾಮರಾಜನಗರದ ಅಂಬೇಡ್ಕರ್ ಭವನದ ಪಕ್ಕದಲ್ಲೇ ಇರೋ ರಸ್ತೆಯ ದುಃಸ್ಥಿತಿ . ಹೌದು ಸಿಮೆಂಟ್ ರಸ್ತೆ ಮಾಡುವ ಕಾಮಗಾರಿಗೆ ಐದು ವರ್ಷಗಳ ಹಿಂದೆಯೇ ಚಾಲನೆ ಸಿಕ್ಕಿತ್ತು. ಕಳೆದ ಭಾರಿ ಲೋಕಸಭಾ ಚುನಾವಣೆಗೂ ಮುನ್ನವೆ ಶಂಕುಸ್ಥಾಪನೆ ಹಾಗೂ ಗುದ್ದಲಿ ಪೂಜೆ ಮಾಡಲಾಗಿತ್ತು. ಆದ್ರೆ ಈಗ ಮತ್ತೊಮ್ಮೆ ಲೋಕಕಭಾ ಚುನಾವಣೆಯ ದಿನಾಂಕ ಘೋಷಣೆಗೆ ದಿನಗಣನೆ ಶುರುವಾಗಿದೆ. ಆದರೆ ಇನ್ನೂ ಕೂಡ ಕಾಮಗಾರಿ ಪೂರ್ಣಗೊಂಡೇ ಇಲ್ಲ. ಇದರಿಂದ ವಾಹನ ಸವಾರರು ಪ್ರತಿ ನಿತ್ಯ ನರಕ ಅನುಭವಿಸಬೇಕಾದ ಪರಿಸ್ಥಿತಿ ಎದುರಾಗಿದೆ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ ಶ್ರೀನಿವಾಸ್ ಗೌಡ.

ಕಾಂಕ್ರಿಟ್ ರಸ್ತೆ ಮಾಡುವುದಾಗಿ 5 ಕೋಟಿ ರೂಪಾಯಿಗೂ ಅಧಿಕ ವೆಚ್ಚದ ಕಾಮಗಾರಿಗೆ ಚಾಲನೆ ಸಿಕ್ಕಿದ್ದರೂ ಇನ್ನು ಸಹ ಗುತ್ತಿಗೆದಾರ ಕಾಮಗಾರಿ ಕಂಪ್ಲೀಟ್ ಮಾಡಿಲ್ಲ. ಕೇಳಿದರೆ ಬಿಲ್ ಸ್ಯಾಂಕ್ಷನ್ ಆಗಿಲ್ಲ, ಕೋರ್ಟ್ ನಲ್ಲಿ ದಾವೆ ಇದೆ ಎಂಬ ಸಬೂಬು ಮಾತುಗಳನ್ನ ಆಡುತ್ತಾನೆ. 500 ಮೀಟರ್ ರಸ್ತೆ ಕಾಮಗಾರಿ ಮಾಡೋಕೆ ಐದು ವರ್ಷ ತೆಗೆದುಕೊಂಡ್ರೆ ಹೇಗೆ ಎಂಬ ಪ್ರಶ್ನೆಗಳನ್ನ ಜನಸಾಮಾನ್ಯರು ಮುಂದಿಡುತ್ತಿದ್ದಾರೆ. ಅಷ್ಟೇ ಅಲ್ಲದೆ ವಾಹನ ಸವಾರರು ಸಂಚರಿಸುವ ಮಾರ್ಗದಲ್ಲಿ ದಪ್ಪ ದಪ್ಪ ಜಲ್ಲಿ ಹಾಕಿದ್ದು ಈ ಜಲ್ಲಿಗಳ ಮೇಲೆ ಬೈಕ್ ಓಡಿಸಲಾಗದೆ ವಾಹನ ಸವಾರರು ಬಿದ್ದು ಪೆಟ್ಟು ಮಾಡಿಕೊಳ್ಳುವ ಪ್ರಸಂಗಗಳು ಸಾಮಾನ್ಯವಾಗಿವೆ ಎನ್ನುತಾರೆ ಸಾಮಾಜಿಕ ಹೋರಾಟಗಾರ ಶ್ರೀನಿವಾಸ್ ಗೌಡ. ಅದೇನೆ ಹೇಳಿ ಒಂದು ರಸ್ತೆಯ ಕಾಮಗಾರಿ ಮುಗಿಸಲು ಐದು ವರ್ಷಗಳೇ ತೆಗೆದು ಕೊಂಡಿದ್ದರೂ ಅದಿನ್ನೂ ಪೂರ್ಣಗೊಳ್ಳದೆ ಇರುವುದು ನಿಜಕ್ಕೂ ದುರಂತವೇ ಸರಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ