AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೈಕ್​​ ಟ್ಯಾಕ್ಸಿ: ಹೈಕೋರ್ಟ್​​ ಆದೇಶದ ವಿರುದ್ಧ ಸುಪ್ರೀಂಗೆ SLP ಸಲ್ಲಿಸುತ್ತಾ ರಾಜ್ಯ ಸರ್ಕಾರ?

ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿಗೆ ಹೈಕೋರ್ಟ್ ಅನುಮತಿ ನೀಡಿದ ನಂತರ, ಖಾಸಗಿ ಸಾರಿಗೆ ಒಕ್ಕೂಟ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ಗೆ SLP ಸಲ್ಲಿಸಲು ಆಗ್ರಹಿಸಿದೆ. ಬೈಕ್ ಟ್ಯಾಕ್ಸಿಗಳಿಂದ ಸುರಕ್ಷತೆಗೆ ಅಪಾಯ, ಅಪಘಾತ ಹೆಚ್ಚಳ ಮತ್ತು ಸಾಂಪ್ರದಾಯಿಕ ಸಾರಿಗೆ ವ್ಯವಸ್ಥೆಗೆ ಆರ್ಥಿಕ ಹೊಡೆತ ಬೀಳುತ್ತದೆ ಎಂಬುದು ಅವರ ಆತಂಕ. ಸರ್ಕಾರ ಈ ಮನವಿ ಸ್ವೀಕರಿಸಿ, ಕಾನೂನು ಹೋರಾಟ ಮುಂದುವರಿಸಬೇಕೆಂದು ಒಕ್ಕೂಟ ಒತ್ತಾಯಿಸಿದೆ.

ಬೈಕ್​​ ಟ್ಯಾಕ್ಸಿ: ಹೈಕೋರ್ಟ್​​ ಆದೇಶದ ವಿರುದ್ಧ ಸುಪ್ರೀಂಗೆ SLP ಸಲ್ಲಿಸುತ್ತಾ ರಾಜ್ಯ ಸರ್ಕಾರ?
ಬೈಕ್​​ ಟ್ಯಾಕ್ಸಿಗೆ ಮತ್ತೆ ಸಂಕಷ್ಟ?
ಪ್ರಸನ್ನ ಹೆಗಡೆ
|

Updated on:Jan 31, 2026 | 3:19 PM

Share

ಬೆಂಗಳೂರು, ಜನವರಿ 31: ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿಗೆ ಹೈಕೋರ್ಟ್ ಅನುಮತಿ ಹಿನ್ನೆಲೆ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್​​ಗೆ SLP ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ರಾಜ್ಯ ಖಾಸಗಿ ಸಾರಿಗೆ ಒಕ್ಕೂಟ ಮನವಿ ಮಾಡಿದೆ. ಈ ಕುರಿತು ಮಾತನಾಡಿರುವ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಅಧ್ಯಕ್ಷ ನಟರಾಜ ಶರ್ಮಾ, ಬೈಕ್ ಟ್ಯಾಕ್ಸಿಯವರು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯನವರಿಗೆ ರಾಹುಲ್ ಪತ್ರ ಬರೆದು, ಬೈಕ್ ಟ್ಯಾಕ್ಸಿಯವರಿಗೆ ಅನುಕೂಲ ಮಾಡಿಕೊಡಿ ಎಂದು ಹೇಳಿದ್ದಾರೆ. ಹೀಗಾಗಿ ನಮಗೆ ಭಯ ಆಗುತ್ತಿದ್ದು, ಹೋರಾಟಕ್ಕೂ ಹಿನ್ನೆಡೆ ಆಗಬಹುದು. ನಮ್ಮ ಮನವಿ ಸ್ವೀಕರಿಸಿ SLP ಸಲ್ಲಿಸಲು ಸಿಎಂ ಮುಂದಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇನ್ನು ಬೈಕ್ ಟ್ಯಾಕ್ಸಿ ಸುರಕ್ಷತೆಯ ಬಗ್ಗೆ ನಿಮ್ಹಾನ್ಸ್ ವೈದ್ಯರು ಹಾಗೂ ಪೊಲೀಸ್ ಇಲಾಖೆ ಕೂಡ ಆತಂಕ ವ್ಯಕ್ತಪಡಿಸಿದೆ ಎನ್ನಲಾಗಿದ್ದು, ಬೈಕ್​​ ಟ್ಯಾಕ್ಸಿಗಳ ಕಾರ್ಯಾಚರಣೆಯಿಂದ ಸಾರ್ವಜನಿಕ ಸುರಕ್ಷಿತಗೆ ಅಪಾಯ ಆಗಬಹುದು. ಅಪಘಾತ ಪ್ರಮಾಣ ಹೆಚ್ಚಳದ ಸಾಧ್ಯತೆಯ ಜೊತೆಗೆ ಪ್ರಯಾಣಿಕರಿಗೆ ಜೀವ ಭದ್ರತೆ ಇರಲ್ಲ. ಇನ್ನು ಆಟೋ, ಟ್ಯಾಕ್ಸಿ ಮತ್ತು ಬಸ್​​ಗಳಿಗೂ ಇವು ಹೊಡೆತ ನೀಡಲಿವೆ ಎಂಬ ಅಭಿಪ್ರಾಯಗಳು ಕೇಳಿಬಂದಿವೆ. ಅಲ್ಲದೆ 2022ರಲ್ಲಿ ICRA ಅಂಕಿ ಅಂಶಗಳ ಪ್ರಕಾರವೂ ಬೈಕ್​​ ಅಪಘಾತಗಳೇ ಹೆಚ್ಚು ನಡೆದಿರೋದು ಸಾಭೀತಾಗಿದೆ.

ಇದನ್ನೂ ಓದಿ: ಕೊನೆಗೂ ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಗ್ರೀನ್ ಸಿಗ್ನಲ್ ನೀಡಿದ ಹೈಕೋರ್ಟ್

ಅಪಘಾತಗಳ ಅಂಕಿ-ಅಂಶ
ಬೈಕ್​​ ಶೇ.40
ಕಾರು, ಟ್ಯಾಕ್ಸಿ, ವ್ಯಾನ್ ಶೇ.17
ಪಾದಚಾರಿಗಳಿಂದ ಶೇ.17
ಆಟೋ ರಿಕ್ಷಾ ಶೇ.4
ಟ್ರಕ್, ಲಾರಿ ಶೇ.9
ಬಸ್ ಶೇ.3
ಸೈಕಲ್ ಶೇ.2
ಇತರೆ ಶೇ.7

ಬೈಕ್ ಟ್ಯಾಕ್ಸಿ ಸಂಸ್ಥೆಗಳು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್ ಬೈಕ್ ಟ್ಯಾಕ್ಸಿಗಳಿಗೆ ಲೈಸೆನ್ಸ್ ನೀಡುವುದನ್ನು ಸರ್ಕಾರ ನಿರಾಕರಿಸುವಂತಿಲ್ಲ ಎಂದು ಸ್ಪಷ್ಟಪಡಿಸಿತ್ತು.ಬೈಕ್ ಟ್ಯಾಕ್ಸಿ ಅಗ್ರಿಗೇಟರ್‌ಗಳು ಅನುಮತಿ ಕೋರಿ ಅರ್ಜಿ ಸಲ್ಲಿಸಿದರೆ, ಆ ಅರ್ಜಿಗಳನ್ನು ಪರಿಗಣಿಸಿ ಪರವಾನಗಿ ನೀಡಬೇಕು ಎಂದು ಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಈ ಬಗ್ಗೆ ಆದೇಶಿಸಿದ್ದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರನ್ನೊಳಗೊಂಡ ವಿಭಾಗೀಯ ಪೀಠ , ಬೈಕ್ ಟ್ಯಾಕ್ಸಿ ಸೇವೆಗಳು ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಒಂದು ಭಾಗವಾಗಿದ್ದು, ಕಾನೂನು ಚೌಕಟ್ಟಿನೊಳಗೆ ಅವುಗಳನ್ನು ನಿರ್ಬಂಧಿಸುವಂತಿಲ್ಲ ಎಂದು ಅಭಿಪ್ರಾಯಪಟ್ಟಿತ್ತು.

ವರದಿ: ಅರುಣ್​​ ಕುಮಾರ್​​, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 3:15 pm, Sat, 31 January 26