ಇಸ್ರೋದ ಚಂದ್ರಯಾನ 2 ಚಾಪ್ಟರ್​ ಕ್ಲೋಸ್ಡ್​..?

| Updated By: Digi Tech Desk

Updated on: Feb 22, 2021 | 6:37 PM

ಚಂದ್ರನ ಮೇಲೆ ಕ್ರಾಶ್​ ಲ್ಯಾಂಡ್ ಆಗಿದೆ ಎನ್ನಲಾದ ವಿಕ್ರಮ್ ಲ್ಯಾಂಡರ್ ಜೊತೆ ಇದುವರೆಗೂ ಸಂಪರ್ಕ ಸಾಧಿಸಲು ಆಗ್ಲಿಲ್ಲ ಎಂದು ಇಸ್ರೋ ಟ್ವೀಟ್ ಮಾಡಿದೆ. ಸಂಪರ್ಕ ಕಳೆದುಕೊಂಡು ಹಾರ್ಡ್​ ಲ್ಯಾಂಡಿಂಗ್ ಆಗಿರುವ ವಿಕ್ರಮ್ ಸದ್ಯ ವಾಲಿದ ಸ್ಥಿತಿಯಲ್ಲಿದೆ ಎನ್ನಲಾಗುತ್ತಿದೆ. ಲ್ಯಾಂಡರ್​ ಸಂಪರ್ಕಿಸಲು ಇಸ್ರೋ ವಿಜ್ಞಾನಿಗಳ ಪ್ರಯತ್ನ ಮುಂದುವರಿದಿದೆ ಎಂದು ಟ್ವಿಟ್ಟರ್​ನಲ್ಲಿ ತಿಳಿಸಿದೆ. ಮಹತ್ವಾಕಾಂಕ್ಷೆ ಯೋಜನೆ ಚಂದ್ರಯಾನ 2ರ ವಿಕ್ರಮ್ ಲ್ಯಾಂಡರ್ ಸೆಪ್ಟಂಬರ್ 7ರಂದು ಚಂದಿರನ ಅಂಗಳದಲ್ಲಿ ಲ್ಯಾಂಡ್ ಆಗಬೇಕಿತ್ತು. ಆದ್ರೆ 2.1 ಕಿಲೋ ಮೀಟರ್ ಅಂತರ ಇರುವಾಗ ಕೊನೆ […]

ಇಸ್ರೋದ ಚಂದ್ರಯಾನ 2 ಚಾಪ್ಟರ್​ ಕ್ಲೋಸ್ಡ್​..?
Follow us on

ಚಂದ್ರನ ಮೇಲೆ ಕ್ರಾಶ್​ ಲ್ಯಾಂಡ್ ಆಗಿದೆ ಎನ್ನಲಾದ ವಿಕ್ರಮ್ ಲ್ಯಾಂಡರ್ ಜೊತೆ ಇದುವರೆಗೂ ಸಂಪರ್ಕ ಸಾಧಿಸಲು ಆಗ್ಲಿಲ್ಲ ಎಂದು ಇಸ್ರೋ ಟ್ವೀಟ್ ಮಾಡಿದೆ. ಸಂಪರ್ಕ ಕಳೆದುಕೊಂಡು ಹಾರ್ಡ್​ ಲ್ಯಾಂಡಿಂಗ್ ಆಗಿರುವ ವಿಕ್ರಮ್ ಸದ್ಯ ವಾಲಿದ ಸ್ಥಿತಿಯಲ್ಲಿದೆ ಎನ್ನಲಾಗುತ್ತಿದೆ. ಲ್ಯಾಂಡರ್​ ಸಂಪರ್ಕಿಸಲು ಇಸ್ರೋ ವಿಜ್ಞಾನಿಗಳ ಪ್ರಯತ್ನ ಮುಂದುವರಿದಿದೆ ಎಂದು ಟ್ವಿಟ್ಟರ್​ನಲ್ಲಿ ತಿಳಿಸಿದೆ. ಮಹತ್ವಾಕಾಂಕ್ಷೆ ಯೋಜನೆ ಚಂದ್ರಯಾನ 2ರ ವಿಕ್ರಮ್ ಲ್ಯಾಂಡರ್ ಸೆಪ್ಟಂಬರ್ 7ರಂದು ಚಂದಿರನ ಅಂಗಳದಲ್ಲಿ ಲ್ಯಾಂಡ್ ಆಗಬೇಕಿತ್ತು. ಆದ್ರೆ 2.1 ಕಿಲೋ ಮೀಟರ್ ಅಂತರ ಇರುವಾಗ ಕೊನೆ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡಿತ್ತು. ಬಳಿಕ ಆರ್ಬಿಟರ್ ಮೂಲಕ ವಿಕ್ರಮ್ ಲ್ಯಾಂಡರ್​ ಪತ್ತೆ ಹಚ್ಚಲಾಯಿತು. ಎಲ್ಲಾ ಸರಿಯಾಗಿದ್ದರೆ ಲ್ಯಾಂಡರ್​ ಚಂದಿರನ ಮೇಲೆ ಒಟ್ಟು 14 ದಿನಗಳ ಕಾಲ ಕಾರ್ಯನಿರ್ವಹಿಸಬೇಕಿತ್ತು. ಆದ್ರೆ ಲ್ಯಾಂಡರ್​ ಸಂಪರ್ಕ ಕಳೆದುಕೊಂಡು ಈಗಾಗಲೇ 2 ದಿನಗಳು ಕಳೆದಿದೆ. ಇನ್ನು ಉಳಿದ 12 ದಿನಗಳವರೆಗೂ ವಿಕ್ರಮ್ ಲ್ಯಾಂಡರ್​ನನ್ನು ಸಂಪರ್ಕಿಸಲು ಇಸ್ರೋ ವಿಜ್ಞಾನಿಗಳು ಶತ ಪ್ರಯತ್ನ ನಡೆಸುತ್ತಿದ್ದಾರೆ.

Published On - 11:59 am, Tue, 10 September 19